ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಚುನಾವಣಾ ಪ್ರಚಾರಕ್ಕೆ ಬರಲ್ಲ ಎಂದ ಶಶಿ ತರೂರ್‌

|
Google Oneindia Kannada News

ನವದೆಹಲಿ, ನವೆಂಬರ್‌ 16: ಕಾಂಗ್ರೆಸ್‌ ಪಕ್ಷದ ಚುನಾವಣಾ ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟಿದ್ದರಿಂದ ಕೈ ನಾಯಕ ಶಶಿ ತರೂರ್‌ ಗುಜರಾತ್‌ ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿದ್ದಾರೆ.

ಗುಜರಾತ್‌ ಚುನಾವಣೆಗೆ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡಬೇಕು ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಗಳು ಶಶಿ ತರೂರ್‌ ಅವರನ್ನು ಆಹ್ವಾನ ಮಾಡಿದ್ದವು. ಆದರೆ ಶಶಿ ತರೂರ್‌ ಅವರು ಪ್ರಚಾರಕ್ಕೆ ಬರಲು ನಿರಾಕರಿಸಿದ್ದಾರೆ.

Breaking; ಯಶವಂತಪುರದಿಂದ ಕಾಂಗ್ರೆಸ್‌ ಟಿಕೆಟ್ ಬಯಸಿದ ಕನ್ನಡ ನಟಿ Breaking; ಯಶವಂತಪುರದಿಂದ ಕಾಂಗ್ರೆಸ್‌ ಟಿಕೆಟ್ ಬಯಸಿದ ಕನ್ನಡ ನಟಿ

ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆ ಗಾಂಧಿ ಕುಟುಂಬ ಬೆಂಬಲಿತ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧೆ ಮಾಡಿದ್ದ ಬಳಿಕ ಶಶಿ ತರೂರ್‌ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್‌ನ ಬಲ್ಲ ಮೂಲಗಳು ಅಭಿಪ್ರಾಯಪಟ್ಟವೆ. ಆದರೆ ಕಾಂಗ್ರೆಸ್‌ ಮಾತ್ರ ವರಿಷ್ಠ ಶಶಿ ತರೂರ್ ಯಾವತ್ತು ಕೂಡ ಪಕ್ಷದ ಸ್ಟಾರ್‌ ಪ್ರಚಾರಕ ಆಗಿರಲಿಲ್ಲ ಎಂದು ಹೇಳಿದೆ.

Shashi Tharoor said that he will not come to Gujarat election campaign

ಡಿಸೆಂಬರ್‌ 1 ಹಾಗೂ 5ರಂದು ಎರಡು ಹಂತದಲ್ಲಿ ನಡೆಯುವ ಗುಜರಾತ್‌ ವಿಧಾನಸಭೆಗೆ ಚುನಾವಣೆ ನಡೆಯುತ್ತದೆ. ಇದಕ್ಕೆ 40 ಮಂದಿಯನ್ನು ಸ್ಟಾರ್‌ ಪ್ರಚಾರಕರಾಗಿ ಕಾಂಗ್ರೆಸ್‌ ಆಯ್ಕೆ ಮಾಡಿದೆ. ಇದರಲ್ಲಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದ್ದಾರೆ. ಅಲ್ಲದೆ ಅಶೋಕ್‌ ಗೆಹ್ಲೋಟ್‌, ದಿಗ್ವಿಜಯ್‌ ಸಿಂಗ್‌, ಕನ್ಹಯ್ಯ ಕುಮಾರ್‌ ಹಾಗೂ ಜಿಗ್ನೇಶ್‌ ಮೇವಾನಿ ಕೂಡ ಇದ್ದಾರೆ.

ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಹೊರಬಿದ್ದವರಲ್ಲಿ ಶಶಿ ತರೂರ್ ಅವರೊಂದಿಗೆ ಜಿ 23 ಗುಂಪಿನಲ್ಲಿ ಪ್ರಸಿದ್ದರಾಗಿದ್ದ ಆನಂದ್‌ ಶರ್ಮಾ, ಮನೀಶ್‌ ತಿವಾರಿ, ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರ ಹೆಸರು ಕೂಡ ಕಾಣೆಯಾಗಿದೆ. ಇವರೆಲ್ಲರೂ ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ಹಿಂದೆ ತಿರುಗಿ ಬಿದ್ದಿದ್ದರು.

English summary
congress leader Shashi Tharoor has pulled out of the Gujarat election campaign as the star campaigner of the Congress party was dropped from the campaign list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X