ಅಭಿಮಾನಿಯ ಸಾವಿಗೆ ಕಂಬನಿ ಮಿಡಿದ ಕಿಂಗ್ ಖಾನ್ ಶಾರುಖ್

Posted By:
Subscribe to Oneindia Kannada

ವಡೋದರಾ, ಜನವರಿ 24: ರಯೀಸ್ ಚಿತ್ರದ ಪ್ರಚಾರಕ್ಕೆ ಗುಜರಾತಿನ ವಡೋದರಾ ರೈಲು ನಿಲ್ದಾಣಕ್ಕೆ ನಟ ಶಾರುಖ್ ಖಾನ್ ಅವರ ಅಭಿಮಾನಿಯೊಬ್ಬರ ಸಾವು ಸಂಭವಿಸಿದೆ.

ಶಾರುಖ್ ಬರುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ್ದೆ ತಡ, ನಿಲ್ದಾಣದಲ್ಲಿ ಅಭಿಮಾನಿಗಳ ದಂಡು ಸೇರಿತು. ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರಕ್ಕೆ ಮುಂದಾದ ಸಂದರ್ಭ ಕಾಲ್ತುಳಿತ ಸಂಭವಿಸಿ, ಸ್ಥಳೀಯರೊಬ್ಬರ ಸಾವು ಸಂಭವಿಸಿತು. ಈ ಬಗ್ಗೆ ಕಿಂಗ್ ಖಾನ್ ಶಾರುಖ್ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಸೋಮವಾರ ತಡ ರಾತ್ರಿ ರೈಲ್ವೇ ನಿಲ್ದಾಣಕ್ಕೆ ಶಾರುಖ್ ಆಗಮಿಸಿದ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಪೊಲೀಸರು ಲಾಠಿ ಪ್ರಹಾರಕ್ಕೆ ಮುಂದಾಗುತ್ತಿದ್ದಂತೆ ನೂಕುನುಗ್ಗಲು ಆರಂಭವಾಗಿ, ಕಾಲ್ತುಳಿತ ಸಂಭವಿಸಿತು. ಈ ಘಟನೆ ಕುರಿತು ಬೇಸರ ವ್ಯಕ್ತಪಡಿಸಿರುವ ಶಾರುಖ್ ಇದೊಂದು ದುಃಖಕರ ಸಂಗತಿ ಎಂದಿದ್ದಾರೆ.

ಶಾರುಖ್ ಖಾನ್, ಪಾಕಿಸ್ತಾನದ ನಟಿ ಮಹಿರಾ ಖಾನ್, ನವಾಜುದ್ದೀನ್ ಸಿದ್ಧಿಕಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಜನವರಿ 25 ರಂದು ವಿಶ್ವದೆಲ್ಲೆಡೆ ತೆರೆ ಕಾಣಲಿದೆ. ರಾಹುಲ್ ಢೋಲಾಕಿಯಾ ನಿರ್ದೇಶನ ಈ ಚಿತ್ರ ಈಗಾಗಲೇ ಸಾಕಷ್ಟು ಕ್ರೇಜ್ ಹುಟ್ಟಿಹಾಕಿದೆ.

ಅಭಿಮಾನಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ

ಅಭಿಮಾನಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ

ಮುಂಬೈನಿಂದ ದೆಹಲಿಗೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಿವುಡ್ ನಟ ಈ ನಿಲ್ದಾಣ ಪ್ಲಾಟ್‍ಫಾರಂ ನಂ-6ಕ್ಕೆ ರಾತ್ರಿ 10.30ರಲ್ಲಿ ಆಗಮಿಸಿ 10 ನಿಮಿಷಗಳ ಕಾಲ ಅಭಿಮಾನಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ ಇತ್ತು.

ಹಜರತ್ ನಿಜಾಮುದ್ದೀನ್ ನಿಲ್ದಾಣ

ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಲ್ಲಿ ಫ್ಯಾನ್ಸ್ ಜಮಾವಣೆ.

ಅಬಕಾರಿ ಕಿಂಗ್ ಬಗ್ಗೆ ಕಥೆ

ಗುಜರಾತಿನ ಅಬಕಾರಿ ಉದ್ಯಮ ಹಾಗೂ ಸಿರಿವಂತನಾಗಲು ಮಾಡುವ ತಂತ್ರಗಾರಿಕೆ, ಖಡಕ್ ಅಧಿಕಾರಿ ನಡುವಿನ ಜಟಾಪಟಿ ಕಥೆಯನ್ನು ರಯೀಸ್ ಹೊಂದಿದ್ದು, ರಾಜಕೀಯವಾಗಿ ಕೂಡಾ ಸಿನಿಮಾ ಭಾರಿ ಪ್ರಭಾವ ಬೀರುವ ಸಾಧ್ಯತೆಯಿದೆ.

ಶಾರುಖ್ ರಿಂದ ಪ್ರತಿಕ್ರಿಯೆ

ರೈಲ್ವೆ ನಿಲ್ದಾಣದಲ್ಲಿ ಸಹಸ್ರಾರು ಅಭಿಮಾನಿಗಳು ಜಮಾಯಿಸಿದ್ದರಿಂದ ಈ ರೀತಿ ದುರಂತ ಸಂಭವಿಸಿದೆ. ಅಭಿಮಾನಿಯ ಸಾವು ದುಃಖ ತಂದಿದೆ ಎಂದಿದ್ದಾರೆ.

ಕುತೂಹಲ ಕಾಯ್ದುಕೊಳ್ಳಲಾಗಿದೆ.

ರಾಹುಲ್ ಢೋಲಾಕಿಯಾ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದು, ಚಿತ್ರದ ಬಗ್ಗೆ ಹಲವಾರು ಟೀಸರ್ ಗಳನ್ನು ಹೊರ ತಂದು ಕುತೂಹಲ ಕಾಯ್ದುಕೊಳ್ಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Its unfortunate, my prayers are with the family of the deceased (died during commotion): ShahRukh Khan at Hazrat Nizamuddin railway station during the #Raees film promotion.
Please Wait while comments are loading...