Jawan trailer: ನಾಳೆ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ 'ಜವಾನ್' ಟ್ರೈಲರ್ ಬಿಡುಗಡೆ
ನವದೆಹಲಿ, ಜುಲೈ. 09: ಪಠಾಣ್ ಅಂತಹ ಭರ್ಜರಿ ಸಿನಿಮಾ ನೀಡಿರುವ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಜವಾನ್ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನಾಳೆಯಿಂದ ಅಂದರೆ ಜುಲೈ 10 ರಂದು ಟ್ರೈಲರ್ ಅಭಿಮಾನಿಗಳ ಮನಕ್ಕೆ ಲಗ್ಗೆ ಹಾಕಲಿದೆ. ಅಟ್ಲಿ ನಿರ್ದೇಶನದ ಸಿನಿಮಾ ಈ ಮೊದಲು ಜೂನ್ 2 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸೆಪ್ಟೆಂಬರ್ ಬಿಡುಗಡೆಯಾಗಲಿದೆ.
ಜುಲೈ 10 ರಂದು ಚಿತ್ರದ ತಂಡ ಮತ್ತು ಸೂಪರ್‌ಸ್ಟಾರ್ ಶಾರುಖ್ ಖಾನ್ ಟ್ರೈಲರ್ ಬಿಡುಗಡೆಯಾಗುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಟ್ವಿಟರ್‌ನಲ್ಲಿ ಆಗಾಗ್ಗೆ 'ಆಸ್ಕ್ ಎಸ್‌ಆರ್‌ಕೆ' ಸೆಷನ್‌ಗಳನ್ನು ನಡೆಸುತ್ತಿದ್ದಾರೆ. ಅದರ ಜೊತೆಗೆ ಪ್ರಮುಖ ಚಿತ್ರ'ಜವಾನ್' ಬಗ್ಗೆ ಅಪ್‌ಡೇಟ್‌ಗಳನ್ನು ನೀಡುತ್ತಿದ್ದಾರೆ.

ಶಾರುಖ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಬರೆದಿದ್ದಾರೆ. ಜವಾನ್ ಟ್ರೇಲರ್ ನಾಳೆ ಬೆಳಗ್ಗೆ 10:30ಕ್ಕೆ ಬಿಡುಗಡೆಯಾಗಲಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.
मैं पुण्य हूँ या पाप हूँ?... मैं भी आप हूँ...
— Shah Rukh Khan (@iamsrk) July 8, 2023
Main punya hoon ya paap hoon?... Main bhi aap hoon…#JawanPrevueOn10July#Jawan releasing worldwide on 7th September 2023, in Hindi, Tamil & Telugu. pic.twitter.com/GI3RqgVGqr
ಕಿಂಗ್ ಆಫ್ ರೊಮ್ಯಾನ್ಸ್ ಎಂದು ಕರೆಯಲ್ಪಡುವ ಶಾರುಖ್ ಖಾನ್, ಆಕ್ಷನ್ ಹೀರೋ ಆಗಬೇಖು ಎಂದುಕೊಂಡಿದ್ದರಂತೆ. ಈ ಬಗ್ಗೆ ಅವರೇ ಪಠಾಣ್' ಸಮಯದಲ್ಲಿ ಮಾಹಿತಿ ನೀಡಿದ್ದರು. "ನಾನು ಆಕ್ಷನ್ ಹೀರೋ ಆಗಬೇಕೆಂದು ಬಯಸಿದ್ದೆ, ಆದ್ದರಿಂದ ನನ್ನ ಕನಸು ನನಸಾಗಿದೆ. ನಾನು ಆಕ್ಷನ್ ಹೀರೋ ಆಗಲು 32 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದೆ. ಆದರೆ ಅಭಿಮಾನಿಗಳು ನನ್ನನ್ನು ರೊಮ್ಯಾಂಟಿಕ್ ನಾಯಕನನ್ನಾಗಿ ಮಾಡಿದ ಕಾರಣ ನಾನು ದೋಣಿ ತಪ್ಪಿಸಿದೆ!" ಎಂದಿದ್ದರು.

ನಯನತಾರಾ ಜೊತೆ ಶಾರುಖ್ ಖಾನ್
ಬಾಲಿವುಡ್‌ನ ಬಾದ್‌ಶಾ ಲೇಡಿ ಸೂಪರ್‌ಸ್ಟಾರ್ ಜೊತೆ ಕೆಲಸ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಶಾರುಖ್ ಖಾನ್ ಮತ್ತು ನಯನತಾರಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಬ್ಬರೂ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ದಕ್ಷಿಣ ಭಾರತದ ನಿರ್ದೇಶಕ ಅಟ್ಲಿ ತಮ್ಮ ಮಾಸ್ ಎಂಟರ್ಟೈನರ್ಗಳಿಗೆ ಹೆಸರುವಾಸಿಯಾಗಿದ್ದಾರೆ. ದಳಪತಿ ವಿಜಯ್ ಅವರ 'ತೇರಿ', 'ಬಿಗಿಲ್' ಮತ್ತು 'ಮೆರ್ಸಲ್'ಗಳನ್ನು ಇಲ್ಲಿ ನೆನೆಯಬಹುದು. ಇನ್ನು, 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರದಲ್ಲಿ ಶಾರುಖ್ ಖಾನ್ ಅವರೊಂದಿಗೆ ವಿಶೇಷ ಹಾಡಿಗಾಗಿ ತೆರೆ ಹಂಚಿಕೊಂಡಿದ್ದ ಪ್ರಿಯಾಮಣಿ, 'ಜವಾನ್' ಚಿತ್ರದಲ್ಲಿ ಸೂಪರ್‌ಸ್ಟಾರ್‌ನೊಂದಿಗೆ ಮತ್ತೊಂದು ವಿಶೇಷ ಹಾಡಲ್ಲಿ ಸೊಂಟ ಬಳುಕಿಸಲಿದ್ದಾರೆ.
ಜವಾನ್ ಬಗ್ಗೆ
ಶಾರುಖ್ ಖಾನ್ ಮತ್ತು ಅಟ್ಲೀ ಅವರ 'ಜವಾನ್' 2023 ರ ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಇದು ಕಮರ್ಷಿಯಲ್ ಎಂಟರ್ಟೈನರ್ ಎಂದು ಹೇಳಲಾಗುತ್ತಿದ್ದು, ನಟ ಗುಪ್ತಚರ ಅಧಿಕಾರಿ ಮತ್ತು ಕಳ್ಳನಾಗಿ ದ್ವಿಪಾತ್ರದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಶಾರುಖ್ ಖಾನ್ ಅವರ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿದೆ. ಚಿತ್ರವು ಈಗ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ.












Click it and Unblock the Notifications