ಕೊವಿಡ್ 19 ಲಸಿಕೆಗೆ ಹಿನ್ನಡೆ: ಆಸ್ಟ್ರಾಜೆನೆಕಾ ಕ್ಲಿನಿಕಲ್ ಟ್ರಯಲ್ ಸ್ಥಗಿತ
ಲಂಡನ್, ಸೆ. 9: ಕೊವಿಡ್ 19 ರೋಗಿಗಳ ಮೇಲೆ ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗವನ್ನು ಆರಂಭಿಸಿ ಮೂರನೇ ಹಂತದ ಕ್ಲಿನಿಕಲ್ ಟ್ರ್ಯಲ್ ಸರಾಗವಾಗಿ ಸಾಗುತ್ತಿತ್ತು. ಈ ಲಸಿಕೆಯನ್ನು ಪ್ರತಿಕಾಯಗಳ ವೃದ್ಧಿಗಾಗಿ ನೀಡಲಾಗುತ್ತಿದೆ. ಇದು ಕೊರೊನಾ ಸೋಂಕನ್ನು ಕಡಿಮೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈಗ ಟ್ರಯಲ್ ಗೆ ಒಳಗಾಗಿರುವ ಸ್ವಯಂ ಸೇವಕರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಎಲ್ಲೆಡೆ ಕ್ಲಿನಿಕಲ್ ಟ್ರಯಲ್ ಸ್ಥಗಿತಗೊಳಿಸಲಾಗಿದೆ.
Recommended Video
ಈ ಲಸಿಕೆಯನ್ನು AZD7442 ಎಂದು ಕರೆಯಲಾಗುತ್ತದೆ. ಈಗಾಗಲೇ ಸೋಂಕಿಗೆ ತುತ್ತಾಗಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿಗೆ ವಿವರಿಸಲಾಗದ ಕಾಯಿಲೆ ಲಕ್ಷಣಗಳು ಕಂಡು ಬಂದಿದ್ದು, ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ, ಕೊವಿಡ್ 19 ಲಸಿಕೆಯಿಂದ ಆಗಿರುವ ಪರಿಣಾಮದ ಬಗ್ಗೆ ಖಚಿತ ಮಾಹಿತಿ ಪಡೆಯಲಾಗುತ್ತಿದೆ. ಇದರ ಬಗ್ಗೆ ಪರೀಕ್ಷೆ, ಸಂಶೋಧನೆ ಹಾಗೂ ವರದಿ ಸಲ್ಲಿಸಲು ಹೆಚ್ಚಿನ ಸಮಯದ ಅಗತ್ಯವಿರುವುದರಿಂದ ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗವನ್ನು ವಿಶ್ವದೆಲ್ಲೆಡೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ವಕ್ತಾರ ಮೈಕೆಲ್ ಮೀಕ್ಸೆಲ್ ಹೇಳಿದ್ದಾರೆ.
ಆಕ್ಸ್‌ಫರ್ಡ್ ಯುನಿವರ್ಸಿಟಿಸಿಯ ಜೆನ್ನರ್ ಸಂಸ್ಥೆಯು ಬ್ರಿಟಿಷ್-ಸ್ವೀಡಿಷ್ ಔಷಧ ತಯಾರಕ ಕಂಪೆನಿ ಆಸ್ಟ್ರಾಜೆನಿಕಾ ಸಹಯೋಗದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಲಸಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಆಕ್ಸ್‌ಫರ್ಡ್ ಲಸಿಕೆಯನ್ನು ಭಾರತೀಯ ಸೆರಮ್ ಸಂಸ್ಥೆಯು ಉತ್ಪಾದಿಸುತ್ತಿದೆ, ಇದು ಮುಂದಿನ ವಾರದಲ್ಲಿ ಮೂರನೇ ಹಂತದ ಮಾನವ ಪ್ರಯೋಗವನ್ನು ಆರಂಭಿಸಲಿದೆ.

ಇನ್ನೊಂದೆಡೆ 'ಕೋವಿಶೀಲ್ಡ್' ಎಂದು ಕರೆಯಿಸಿಕೊಂಡಿರುವ ಈ ಲಸಿಕೆಯು ಭಾರತದಾದ್ಯಂತ ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ ಎರಡನೆಯ ಹಂತದ ಪ್ರಯೋಗ ನಡೆಸುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಮೂರನೇ ಹಂತದ ಪ್ರಯೋಗ ಆರಂಭಿಸುವುದಾಗಿ ಹೇಳಲಾಗಿತ್ತು. ಆದರೆ ಈಗ ಸುರಕ್ಷತಾ ಕಾರಣಗಳಿಗಾಗಿ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಮುಂದೂಡಲಾಗಿದೆ. ಅತ್ತ ಆಕ್ಸ್ ಫರ್ಡ್ -ಆಸ್ಟ್ರಾಜೆನೆಕಾ ಕೊವಿಡ್ 19 ಲಸಿಕೆ ಕೂಡಾ ಇದೇ ಕಾರಣಕ್ಕೆ ಪ್ರಯೋಗವನ್ನು ಹಿಂಪಡೆದಿದೆ. ಯುಕೆಯಲ್ಲಿ ಈ ಲಸಿಕೆ ಕಳೆದ ತಿಂಗಳೇ 3ನೇ ಹಂತದ ಪ್ರಯೋಗಕ್ಕೆ ಒಳಪಟ್ಟಿತ್ತು. ಆದರೆ, ಮೂರನೇ ಹಂತದಲ್ಲಿ ಸುದೀರ್ಘ ಹಾಗೂ ಹೆಚ್ಚಿನ ವ್ಯಕ್ತಿಗಳ ಮೇಲೆ ಪ್ರಯೋಗ ಮಾಡಿ ಫಲಿತಾಂಶ ಕಂಡುಕೊಳ್ಳಬೇಕಾಗಿರುವುದರಿಂದ ವಿಳಂಬವಾಗಿದೆ.












Click it and Unblock the Notifications