ಕೋವಿಡ್-19 ಲಸಿಕೆ ಉತ್ಪಾದನೆಗೆ 7,500 ಕೋಟಿ ರೂ. ನಿಧಿ ಸಂಗ್ರಹಕ್ಕೆ ಮುಂದಾದ ಸೆರಮ್
ನವದೆಹಲಿ, ಆಗಸ್ಟ್ 18: ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ), ಜಗತ್ತಿಗೆ ಅತಿ ಅವಶ್ಯಕವಾಗಿರುವ ಕೊರೊನಾ ವೈರಸ್ ಲಸಿಕೆ ಸಿದ್ಧಪಡಿಸುವ ಸಲುವಾಗಿ 7,500 ಕೋಟಿ ದೇಣಿಗೆ ಸಂಗ್ರಹಿಸಲು ಮುಂದಾಗಿದೆ.
Recommended Video
ಪುಣೆ ಮೂಲದ ಎಸ್‌ಐಐ, ಆಕ್ಸ್‌ಫರ್ಡ್‌ನ ಕೊರೊನಾ ವೈರಸ್ ಲಸಿಕೆಯನ್ನು ಉತ್ಪಾದಿಸಲು ಆಸ್ಟ್ರಾಜೆನೆಕಾ ಸಂಸ್ಥೆ ಜತೆಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಬ್ಲ್ಯಾಕ್ ಸ್ಟೋನ್, ಕೆಕೆಆರ್ ಮುಂತಾದ ಖಾಸಗಿ ಸಂಸ್ಥೆಗಳು ಹಾಗೂ ದಾನಿಗಳ ಜತೆ ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿಪಡಿಸಲು ಅಗತ್ಯವಾದ ಭಾರಿ ಮೊತ್ತದ ಅನುದಾನ ಸಂಗ್ರಹಿಸುವ ಮಾತುಕತೆ ನಡೆಸುತ್ತಿದೆ.
'ನಾವು ಕೆಲವು ಹೂಡಿಕೆದಾರರ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ. ಆದರೆ ಸದ್ಯಕ್ಕೆ ಅದರಾಚೆಗೆ ಯಾವುದೇ ಹೇಳಿಕೆ ನೀಡಲಾಗದು' ಎಂದು ಎಸ್‌ಐಐ ವಕ್ತಾರರು ಹೇಳಿದ್ದಾರೆ. ಸೆರಮ್ ಸಂಸ್ಥೆಗೆ ಬೇಕಾದ ದೇಣಿಗೆ ಸಂಗ್ರಹದ ಕಾರ್ಯವನ್ನು ಗೋಲ್ಡ್‌ಮನ್ ಸಾಚ್ಸ್, ಸಿಟಿ ಮತ್ತು ಅವೆಂಡಸ್ ನಿಭಾಯಿಸಲಿದೆ ಎಂದು ವರದಿಯಾಗಿದೆ.

ಕೊರೊನಾ ವೈರಸ್ ಲಸಿಕೆಯ ಪೂರೈಕೆಯನ್ನು ಸುಗಮಗೊಳಿಸುವ ಸಲುವಾಗಿ ಸೆರಮ್ ಸಂಸ್ಥೆಯು ಇತ್ತೀಚೆಗೆ ಬಿಲ್ ಮತ್ತು ಮೆಲಿನಾ ಗೇಟ್ಸ್ ಫೌಂಡೇಷನ್, ವ್ಯಾಕ್ಸಿನ್ ಅಲೈಯನ್ ಹಾಗೂ ಗವಿ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು, ಭಾರತ ಹಾಗೂ ಇತರೆ ಕಡಿಮೆ ಆದಾಯದ ದೇಶಗಳಿಗೆ 100 ಮಿಲಿಯನ್‌ವರೆಗೂ ಕೊರೊನಾ ವೈರಸ್ ಲಸಿಕೆಗಳನ್ನು ಸರಬರಾಜು ಮಾಡಲು ಅದು ಒಪ್ಪಂದಗಳನ್ನು ಮಾಡಿಕೊಂಡಿದೆ.












Click it and Unblock the Notifications