ಸೆಪ್ಟೆಂಬರ್‌ನಿಂದ ಸ್ಪುಟ್ನಿಕ್ V ಲಸಿಕೆ ಉತ್ಪಾದಿಸಲಿದೆ ಸೀರಂ ಇನ್‌ಸ್ಟಿಟ್ಯೂಟ್

ನವದೆಹಲಿ, ಜುಲೈ 13: ಸೀರಂ ಇನ್‌ಸ್ಟಿಟ್ಯೂಟ್ ರಷ್ಯಾದ ಸ್ಪುಟ್ನಿಕ್ V ಕೊರೊನಾ ಲಸಿಕೆಯನ್ನು ಸೆಪ್ಟೆಂಬರ್‌ನಿಂದ ಉತ್ಪಾದಿಸಲಿದೆ ಎಂದು ರಷ್ಯಾದ ಮೇಕರ್ ಮಾಹಿತಿ ನೀಡಿದೆ.

ಪುಣೆಯಲ್ಲಿ ಲಸಿಕೆ ಉತ್ಪಾದನೆ ಶುರುವಾಗಲಿದೆ, ರಷ್ಯಾದ ಆರ್‌ಡಿಐಎಫ್‌ ನೀಡಿರುವ ಮಾಹಿತಿ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ 300 ಮಿಲಿಯನ್ ಕೊರೊನಾ ಲಸಿಕೆ ಉತ್ಪಾದಿಸಲಿದೆ ಎಂದಿದೆ.

ತಂತ್ರಜ್ಞಾನ ರವಾನೆ ಈಗಾಗಲೇ ಆರಂಭವಾಗಿದೆ, ಸೆಪ್ಟೆಂಬರ್‌ನಲ್ಲಿ ಉತ್ಪಾದನೆ ಶುರುವಾಗಲಿದೆ, ಸೀರಂ ಈಗಾಗಲೇ ಸೆಲ್ ಹಾಗೂ ವೆಕ್ಟರ್ ಮಾದರಿಗಳನ್ನು ಗಮಾಲಿಯಾ ಕೇಂದ್ರದಿಂದ ಪಡೆದುಕೊಂಡಿದೆ.

Serum Institute To Produce Sputnik V From September, Says Russian Maker

ಆದರ್ ಪೂನಾವಾಲ ಮಾತನಾಡಿ, ಆರ್‌ಡಿಐಎಫ್ ಪಾಲುದಾರರಾಗಿರುವುದಕ್ಕೆ ಸಂತೋಷವಾಗಿದೆ, ಸ್ಪುಟ್ನಿಕ್ ಲಸಿಕೆಯು ಭಾರತ ಸೇರಿದಂತೆ ಇಡೀ ವಿಶ್ವಾದ್ಯಂತ ಪ್ರಚಲಿತದಲ್ಲಿರುವ ಲಸಿಕೆಯಾಗಿದೆ.

ಇದು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತದೆ, ಆಗಸ್ಟ್‌ನಲ್ಲಿ 16 ರಿಂದ 18 ಕೋಟಿಯಷ್ಟು ಲಸಿಕೆಯನ್ನು ಉತ್ಪಾದಿಸಲಾಗುತ್ತದೆ, ಸೆಪ್ಟೆಂಬರ್‌ನಲ್ಲಿ ಸುಮಾರು 30 ಕೋಟಿ ಕೊರೊನಾ ಲಸಿಕೆ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಸಧ್ಯಕ್ಕೆ ಡಾ. ರೆಡ್ಡೀಸ್ ಲ್ಯಾಬೊರೇಟರಿ ಸ್ಪುಟ್ನಿಕ್ ಲಸಿಕೆ ಉತ್ಪಾದಿಸುತ್ತಿದೆ, ಡಾ. ರೆಡ್ಡೀಸ್ ಲ್ಯಾಬೊರೇಟರಿಯು ಕೋವಿಡ್ 19 ಲಸಿಕೆ ಸ್ಪುಟ್ನಿಕ್ V ಪ್ರಾಯೋಗಿಕ ಯೋಜನೆಯನ್ನು 30 ನಗರಗಳಿಗೆ ವಿಸ್ತರಿಸಿದೆ.

ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ Vಯನ್ನು ಭಾರತದಲ್ಲಿ ಮೇ 14ರಂದು ಬಳಕೆಗೆ ತರಲಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಡಾ ರೆಡ್ಡೀಸ್ ಲ್ಯಾಬೊರೇಟರಿ, ಮುಂದಿನ ವಾರಗಳಲ್ಲಿ ಸ್ಪುಟ್ನಿಕ್ V ಲಸಿಕೆಯನ್ನು ವಾಣಿಜ್ಯಾತ್ಮಕವಾಗಿ ಬಳಕೆಗೆ ವಿಸ್ತರಿಸುವಂತೆ ಮಾಡಲಾಗುವುದು ಎಂದು ಹೇಳಿದೆ.

ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-V ಲಸಿಕೆಯ ನಿರ್ಬಂಧಿತ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಕ ಅನುಮತಿ ನೀಡಿದೆ.

ಹೈದರಾಬಾದ್ ನಲ್ಲಿ ಆರಂಭವಾದ ಲಸಿಕೆ ದೇಶದ 50ಕ್ಕೂ ಹೆಚ್ಚು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ವಿಸ್ತರಿಸುವಂತೆ ತ್ವರಿತಗೊಳಿಸಲಾಗುವುದು ಎಂದು ಟ್ವೀಟ್ ಮೂಲಕ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+