ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕಿಂಗ್ ಸುದ್ದಿ: ಭಾರತದಲ್ಲಿ ಕೊವಿಶೀಲ್ಡ್ ಲಸಿಕೆ ಉತ್ಪಾದನೆಯಲ್ಲಿ ಶೇ.50ರಷ್ಟು ಕಡಿತ

|
Google Oneindia Kannada News

ನವದೆಹಲಿ, ಡಿಸೆಂಬರ್ 7: ಕೇಂದ್ರ ಸರ್ಕಾರ ಹೆಚ್ಚುವರಿ ಆರ್ಡರ್ ನೀಡದಿದ್ದರೆ ಮುಂದಿನ ವಾರದಿಂದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಕೊವಿಶೀಲ್ಡ್ ಲಸಿಕೆ ಉತ್ಪಾದನೆ ಪ್ರಮಾಣವನ್ನು ಕಡಿತಗೊಳಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅದರ್ ಪೂನಾವಾಲಾ ಹೇಳಿದ್ದಾರೆ. ಮುಂದಿನ ವಾರದೊಳಗೆ ಹೆಚ್ಚುವರಿ ಕೊವಿಶೀಲ್ಡ್ ಲಸಿಕೆಗಾಗಿ ಸರ್ಕಾರವು ಆರ್ಡರ್ ನೀಡದಿದ್ದರೆ ಶೇ.50ರಷ್ಟು ಲಸಿಕೆ ಉತ್ಪಾದನೆಯನ್ನು ತಗ್ಗಿಸಲಾಗುವುದು ಎಂದರು.

ರಾಷ್ಟ್ರಕ್ಕೆ ದೊಡ್ಡ ಪ್ರಮಾಣದ ಲಸಿಕೆಯು ಅಗತ್ಯವಿದ್ದರೆ ಹೆಚ್ಚುವರಿ ಸಾಮರ್ಥ್ಯ ಉಳಿಸಿಕೊಳ್ಳಲು ಬಯಸುತ್ತೇನೆ. ಅದು ಎಂದಿಗೂ ಸಾಧ್ಯವಿಲ್ಲ, ಆದರೆ ಮುಂದಿನ ಆರು ತಿಂಗಳಿನಲ್ಲಿ ಸರ್ಕಾರವು ಕೇಳುವಷ್ಟು ಲಸಿಕೆಯನ್ನು ಪೂರೈಸಲು ಸಾಧ್ಯವಾಗದ ಸ್ಥಿತಿಗೆ ತಲುಪುವುದಕ್ಕೆ ನಾನು ಇಚ್ಛಿಸುವುದಿಲ್ಲ ಎಂದು ಹೇಳಿದರು.

ಕೇಂದ್ರದಿಂದ ಕಾನೂನು ಭದ್ರತೆ, ನಷ್ಟ ಪರಿಹಾರಕ್ಕೆ ಸೀರಂ ಇನ್ಸ್‌ಟಿಟ್ಯೂಟ್ ಒತ್ತಾಯಕೇಂದ್ರದಿಂದ ಕಾನೂನು ಭದ್ರತೆ, ನಷ್ಟ ಪರಿಹಾರಕ್ಕೆ ಸೀರಂ ಇನ್ಸ್‌ಟಿಟ್ಯೂಟ್ ಒತ್ತಾಯ

20-30 ಮಿಲಿಯನ್ ಡೋಸ್ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಅವರು ಸಂಗ್ರಹಿಸುತ್ತಿದ್ದು, "ಹೆಚ್ಚು ಅಪಾಯಗಳನ್ನು ತೆಗೆದುಕೊಳ್ಳುವುದಿಲ್ಲ. ನಾವು ಪರವಾನಗಿ ಪಡೆದ ತಕ್ಷಣ, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಉತ್ಪಾದಿಸಬಹುದು" ಎಂದು ಅದರ್ ಪೂನಾವಾಲಾ ಹೇಳಿದ್ದಾರೆ.

ಲಸಿಕೆಗೆ ಆರ್ಡರ್ ನೀಡದಿರಲು ಓಮಿಕ್ರಾನ್ ಕಾರಣವೇ?

ಲಸಿಕೆಗೆ ಆರ್ಡರ್ ನೀಡದಿರಲು ಓಮಿಕ್ರಾನ್ ಕಾರಣವೇ?

"ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನ ಭೀತಿ ಹೆಚ್ಚುತ್ತಿದೆ. ಹೊಸ ರೂಪಾಂತರದ ಮೇಲೆ ಲಸಿಕೆಗಳು ಅಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿಲ್ಲ ಎಂದು ಹೇಳುವುದಕ್ಕೆ ಯಾವುದೇ ಕಾರಣಗಳಿಲ್ಲ. ಪ್ರಸ್ತುತ ಲಸಿಕೆಗಳು ರೂಪಾಂತರದ ವಿರುದ್ಧ ಕೆಲಸ ಮಾಡುವುದಿಲ್ಲ ಎಂದು ಹೇಳುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. "ಡಬಲ್ ವ್ಯಾಕ್ಸಿನೇಷನ್ ಪಡೆದವರು ಯೋಗ್ಯ ಮಟ್ಟದಲ್ಲಿ ಸುರಕ್ಷಿತವಾಗಿಲ್ಲ ಎಂದು ನಂಬಲು ಯಾವುದೇ ಕಾರಣವಿಲ್ಲ. ಭಾರತೀಯ ವೈದ್ಯಕೀಯ ತಜ್ಞರು ರಕ್ಷಣೆಯ ಮಟ್ಟವನ್ನು ತುಂಬಾ ಉತ್ತಮವೆಂದು ಪರಿಗಣಿಸಿದ್ದಾರೆ, "ಎಂದು ಅದರ್ ಪೂನಾವಾಲಾ ಹೇಳಿದ್ದಾರೆ. ಲ್ಯಾನ್ಸೆಟ್ ಪ್ರಕಾರ ವೈರಸ್ ವಿರುದ್ಧ ಅಸ್ಟ್ರಾಜೆನಾಕಾ ಶೇ.80ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ.

ದೇಶದಲ್ಲಿ 129 ಕೋಟಿ ಡೋಸ್ ಕೊವಿಡ್ ಲಸಿಕೆ ವಿತರಣೆ

ದೇಶದಲ್ಲಿ 129 ಕೋಟಿ ಡೋಸ್ ಕೊವಿಡ್ ಲಸಿಕೆ ವಿತರಣೆ

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 326 ದಿನಗಳು ಕಳೆದಿವೆ. ಮಂಗಳವಾರ ರಾತ್ರಿ 7 ಗಂಟೆ ವೇಳೆಗೆ 66,37,528 ಡೋಸ್ ಲಸಿಕೆಯನ್ನು ವಿತರಿಸಲಾಗಿದ್ದು, ದೇಶದಲ್ಲಿ ಒಟ್ಟು 129,46,08,045 ಡೋಸ್ ಕೊವಿಡ್-19 ಲಸಿಕೆಯನ್ನು ನೀಡಲಾಗಿದೆ. ಈ ಪೈಕಿ 80,47,68,300 ಮಂದಿ ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದರೆ, 48,98,39,745 ಫಲಾನುಭವಿಗಳು ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ಭವಿಷ್ಯ ನುಡಿಯುವ ಮೊದಲು ಅಂಕಿ-ಅಂಶ ಮುಖ್ಯ

ಭವಿಷ್ಯ ನುಡಿಯುವ ಮೊದಲು ಅಂಕಿ-ಅಂಶ ಮುಖ್ಯ

ಮಾಡರ್ನಾ ಉತ್ಪಾದಕರ ಹೇಳಿಕೆಯ ಹಿಂದೆ ಸರಿಯಾದ ಅಂಕಿ-ಅಂಶಗಳಿಲ್ಲ, ಈ ಹಂತದಲ್ಲಿ ಭವಿಷ್ಯ ನುಡಿಯುವುದು ಸೂಕ್ತವಲ್ಲ. ಪ್ರಸ್ತುತ ಲಸಿಕೆಗಳು ಓಮಿಕ್ರಾನ್ ವಿರುದ್ಧ ಪರಿಣಾಮಕಾರಿ ಆಗದಿರುವ ಅಪಾಯವಿದೆ ಎಂದು ಹೇಳಿರುವ ಮಾಡರ್ನಾ ಅಧ್ಯಕ್ಷ ಸ್ಟೀಫನ್ ಹೊಗೆ ಮಾಡಿದ ಟೀಕೆಗಳನ್ನು ಪೂನಾವಾಲ್ಲಾ ಉಲ್ಲೇಖಿಸಿದರು. ಸೂಕ್ತ ದತ್ತಾಂಶಗಳಿಲ್ಲದೇ ಭವಿಷ್ಯ ನುಡಿಯುವ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಲಸಿಕೆ ಪೂರೈಕೆ ಬಗ್ಗೆ ಅಫ್ರಿಕನ್ ನಾಯಕರ ಜೊತೆ ಸಂಪರ್ಕ

ಲಸಿಕೆ ಪೂರೈಕೆ ಬಗ್ಗೆ ಅಫ್ರಿಕನ್ ನಾಯಕರ ಜೊತೆ ಸಂಪರ್ಕ

ಕೋವಾಕ್ಸ್ ಮೂಲಕ 400-500 ದಶಲಕ್ಷ ಲಸಿಕೆ ಡೋಸ್ ಆರ್ಡರ್‌ಗಳನ್ನು ಪರಿಶೀಲಿಸುತ್ತಿದ್ದು ವಿವಿಧ ಆಫ್ರಿಕನ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಅದರ್ ಪೂನಾವಲ್ಲಾ ಹೇಳಿದರು. ಕಳೆದ ಏಪ್ರಿಲ್‌ನಲ್ಲಿ Gavi ಮೂಲಕ Covax ಅನ್ನು ಚಾಲನೆ ನೀಡಲಾಯಿತು. ವಿಶ್ವ ಆರೋಗ್ಯ ಸಂಸ್ಥೆ, ಯುರೋಪಿಯನ್ ಕಮಿಷನ್ ಮತ್ತು ಫ್ರಾನ್ಸ್ ಮೂಲಕ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ Covid-19 ಲಸಿಕೆಗಳನ್ನು ವಿತರಿಸುವ ಉದ್ದೇಶವನ್ನು ಹೊಂದಲಾಗಿತ್ತು. ಗವಿ ಜಾಗತಿಕ ಖಾಸಗಿ-ಸಾರ್ವಜನಿಕ ಆರೋಗ್ಯ ಪಾಲುದಾರಿಕೆಯಾಗಿದ್ದು, ಇದು ಬಡ ದೇಶಗಳಲ್ಲಿ ಲಸಿಕೆಗಳ ಒದಗಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.

English summary
Serum Institute of India to Cut Covishield Production by 50% Starting Next Week: Adar Poonawalla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X