ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಲ್ಫಿಗೆ ಪೋಸ್ ಕೊಡಲು ಹೋಗಿ ಇಹಲೋಕ ತ್ಯಜಿಸಿದ

|
Google Oneindia Kannada News

ಜೈಪುರ, ಜನವರಿ, 20: ಸೆಲ್ಫಿ ಮೋಹ ಪ್ರವಾಸಿಯೊಬ್ಬರ ಜೀವ ಬಲಿಪಡೆದಿದೆ. ಜೈಪುರದ ಮೆಹರಣ್ ಗಢ್ ಕೋಟೆ ನೋಡಲು ತೆರಳಿದ್ದ 23 ವರ್ಷದ ನಿಖಿಲ್ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ್ದಾರೆ.

ಕೋಟೆಯೊಳಗೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಇದ್ದಾಗ ನಿಖಿಲ್ ಕಾಲು ಜಾರಿದೆ. ಕೋಟೆಯ ಗೋಡೆಯ ಮೇಲೆ ಉರುಳಿ ಬಿದಿದ್ದಾರೆ. ಕೋಟೆ ನೋಡಲು ಸ್ನೇಹಿತರೊಂದಿಗೆ ತೆರಳಿದ್ದವ ಹೆಣವಾಗಿ ಹೋಗಿದ್ದಾರೆ. ಸ್ನೇಹಿತರು ಅವರನ್ನು ಕೂಡಲೇ ಹತ್ತಿರದ ಮಹಾತ್ಮ ಗಾಂಧಿ ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಿದರೂ ಫಲಪ್ರದವಾಗಲಿಲ್ಲ.[ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ - ಮನಶ್ಶಾಸ್ತ್ರಜ್ಞರು]

Selfie craze claims life of tourist at Rajasthan's fort

ಈ ಮೊದಲು ಫೋಟೋ ತೆಗೆದುಕೊಳ್ಳಲು ಫೋಸ್ ನೀಡಲು ಹೋಗಿ ಸಾವಿಗೀಡಾಗುತ್ತಿರುವುದನ್ನು ಕೇಳಿದ್ದೇವು. ಇದೀಗ ಸೆಲ್ಫಿ ಹುಚ್ಚಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ವರದಿಯಾಗುತ್ತಿದೆ. ಜನವರಿ 9 ರಂದು ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾಲು ಜಾರಿ ಯುವತಿಯೊಬ್ಬಳು ಸಮುದ್ರಪಾಲಾದ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿತ್ತು. ಯುವತಿ ರಕ್ಷಿಸಲು ಹೋದ ಯುವಕನೂ ಸಮುದ್ರದ ಪಾಲಾಗಿದ್ದ.[ಸೆಲ್ಫಿ ತೆಗೆದುಕೊಳ್ಳುವಾಗ ಹೃದಯಾಘಾತವಾಗಿ ಪ್ರಾಣಬಿಟ್ಟ!]

Selfie ಮೇಲೆ ಹಿಂದೆ ಸಂಶೋಧನೆ ನಡೆಸಿದ್ದ ದಿ ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ (APA) ಸೆಲ್ಫಿ ತೆಗೆದುಕೊಳ್ಳುವುದು ಒಂದು ಮಾನಸಿಕ ಕಾಯಿಲೆ ಎಂದು ಅಧಿಕೃತವಾಗಿ ಘೋಷಣೆ ಮಾಡಿತ್ತು. ದಿನಕ್ಕೆ ಎಲ್ಲೆಂದರಲ್ಲಿ ನಿಂತುಕೊಂಡು ಎರಡು ಮೂರು ಸೆಲ್ಫಿ ತೆಗೆದು ಸಾಮಾಜಿಕ ತಾಣಕ್ಕೆ ಅಪ್ ಲೋಡ್ ಮಾಡುವರಿಗೂ ಕಡಿಮೆ ಇಲ್ಲ.

English summary
Selfie craze turned fatal for a 23-year-old, Nikhil a tourist who went to visit the Mehrangarh Fort in Rajasthan's Jodhpur city on Tuesday, Jan 19. Nikhil, was trying to click a selfie when he fell down from the ramparts of the forts in Jodhpur. Nikhil had gone to visit the fort with his friends and while trying to click selfie he lost his balance and fell down in the afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X