ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌: ಭಾರತ್ ಜೋಡೋ ಯಾತ್ರೆಯಲ್ಲಿ ಭದ್ರತೆ ಲೋಪ- ರಾಹುಲ್ ಗಾಂಧಿ ಸ್ಪಷ್ಟನೆ

|
Google Oneindia Kannada News

ಪಂಜಾಬ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ವೇಳೆ ವ್ಯಕ್ತಿಯೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅಪ್ಪಿಕೊಳ್ಳಲು ಬಂದರು. ಈ ವೇಳೆ ರಾಹುಲ್ ಗಾಂಧಿ ಬಳಿ ನಿಂತಿದ್ದ ಕಾರ್ಯಕರ್ತರು ಆ ವ್ಯಕ್ತಿಯನ್ನು ತಳ್ಳಿದ್ದಾರೆ. ಇದನ್ನು ಭದ್ರತೆ ಲೋಪ ಎಂದು ಆರೋಪಿಸಲಾಗಿದೆ. ಆದರೆ ಇದು ಭದ್ರತೆಯ ಉಲ್ಲಂಘನೆಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರಾಹುಲ್ ಗಾಂಧಿ ಕೂಡ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಈ ಘಟನೆ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ನಡೆದಿದೆ. ಘಟನೆಯ ವಿಡಿಯೋದಲ್ಲಿ ಹಳದಿ ಜಾಕೆಟ್‌ ಧರಿಸಿದ್ದ ವ್ಯಕ್ತಿಯೊಬ್ಬರು ರಾಹುಲ್‌ ಗಾಂಧಿಯತ್ತ ಬಂದು ಅಪ್ಪಿಕೊಳ್ಳಲು ಯತ್ನಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ರಾಹುಲ್ ಗಾಂಧಿ ಬಳಿ ನಿಂತಿದ್ದ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ತಳ್ಳಿದ್ದಾರೆ.

ಶಿಕ್ಷಕರಿಗೆ 7ನೇ ವೇತನ ಆಯೋಗ ಜಾರಿಗೊಳಿಸಿದ ಪಂಜಾಬ್‌ ಸರ್ಕಾರ ಶಿಕ್ಷಕರಿಗೆ 7ನೇ ವೇತನ ಆಯೋಗ ಜಾರಿಗೊಳಿಸಿದ ಪಂಜಾಬ್‌ ಸರ್ಕಾರ

ಕಾಂಗ್ರೆಸ್ ಆರೋಪವೇನು?

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ಝಡ್-ಪ್ಲಸ್ ವರ್ಗದ ಭದ್ರತೆಯನ್ನು ನೀಡಲಾಗಿದೆ. ಈ ಹಿಂದೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯಿಂದ ಭದ್ರತೆಯ ಲೋಪವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಬಳಿಕ ಈ ಘಟನೆ ನಡೆದಿದೆ.

ಸೆಕ್ಯುರಿಟಿಯವರು ತಪಾಸಣೆ ನಡೆಸಿದೆ- ರಾಹುಲ್

ಘಟನೆಯನ್ನು 'ಭದ್ರತಾ ಉಲ್ಲಂಘನೆ' ಅಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಯಾರೋ ನನ್ನನ್ನು ತಬ್ಬಿಕೊಳ್ಳಲು ಬಂದಿದ್ದು, ಸೆಕ್ಯುರಿಟಿಯವರು ತಪಾಸಣೆ ನಡೆಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. "ನಾನು ಇದನ್ನು ಭದ್ರತಾ ಲೋಪ ಎಂದು ಕರೆಯುವುದಿಲ್ಲ" ಎಂದು ಅವರು ಹೇಳಿದರು.

ಪೊಲೀಸ್ ಮಹಾನಿರೀಕ್ಷಕ ಸ್ಪಷ್ಟನೆ

ಪೊಲೀಸ್ ಮಹಾನಿರೀಕ್ಷಕ ಸ್ಪಷ್ಟನೆ

ಪೊಲೀಸ್ ಮಹಾನಿರೀಕ್ಷಕ ಜಿಎಸ್ ಧಿಲ್ಲೋನ್ ಅವರು, ಗಾಂಧಿಯೇ ಆ ವ್ಯಕ್ತಿಗೆ ಕರೆ ಮಾಡಿದ್ದಾರೆ ಮತ್ತು ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಹೇಳಿದರು. "ನಾನು ಅವರನ್ನು ಪರಿಶೀಲಿಸಿದ್ದೇನೆ. ರಾಹುಲ್ ಜಿ ಸ್ವತಃ ಅವರನ್ನು (ವ್ಯಕ್ತಿ) ಕರೆದರು ಮತ್ತು ನಂತರ ರಾಹುಲ್ ಗಾಂಧಿ ಅವರನ್ನು (ಕಾಂಗ್ರೆಸ್ ಸಂಸದ) ತಬ್ಬಿಕೊಳ್ಳಲು ಪ್ರಯತ್ನಿಸಿದರು. ಆದರೆ ಕಾಂಗ್ರೆಸ್ ಇತರ ಕಾರ್ಯಕರ್ತರು ಅವರನ್ನು ತಳ್ಳಿದರು" ಎಂದು ಧಿಲ್ಲೋನ್ ಹೇಳಿದರು. ಇದು ಭದ್ರತಾ ಉಲ್ಲಂಘನೆ ಅಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಎಲ್ಲಿಂದ? ಎಲ್ಲಿವರೆಗೂ ಯಾತ್ರೆ?

ಎಲ್ಲಿಂದ? ಎಲ್ಲಿವರೆಗೂ ಯಾತ್ರೆ?

ಭಾರತ್ ಜೋಡೋ ಯಾತ್ರೆ ಮಂಗಳವಾರ ಬೆಳಗ್ಗೆ ಹೋಶಿಯಾರ್‌ಪುರ ತಾಂಡಾದಲ್ಲಿ ತನ್ನ ಪ್ರಯಾಣವನ್ನು ಪುನರಾರಂಭಿಸಿತು. ಪಕ್ಷದ ಪಂಜಾಬ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಹರೀಶ್ ಚೌಧರಿ ಮತ್ತು ರಾಜ್ ಕುಮಾರ್ ಚಬ್ಬೇವಾಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಮುಕೇರಿಯನ್‌ನಲ್ಲಿ ಯಾತ್ರೆಯಲ್ಲಿ ಗಾಂಧಿಯವರೊಂದಿಗೆ ಕಾಣಿಸಿಕೊಂಡರು. ದಾರಿಯಲ್ಲಿ ಹಲವಾರು ಜನರೊಂದಿಗೆ ಸಂವಹನ ನಡೆಸಿದರು ಮತ್ತು ಅವರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಮೆರವಣಿಗೆ ಜನವರಿ 30 ರೊಳಗೆ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದ್ದು, ಜಮ್ಮು ಮತ್ತು ಕಾಶ್ಮೀರದ ರಾಜಧಾನಿಯಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಯಾತ್ರೆಯು ಈವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣವನ್ನು ಪೂರೈಸಿದೆ.

English summary
Police have clarified that there is no lack of security during the Bharat Jodo Yatra in Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X