ಕಾಶ್ಮೀರ: ಓರ್ವ ಉಗ್ರನನ್ನು ಬಲಿಹಾಕಿದ ಭಾರತೀಯ ಸೇನೆ
ಬಂಡಿಪೊರ, ಮಾರ್ಚ್ 01: ಜಮ್ಮು ಕಾಶ್ಮೀರದ ಬಂಡಿಪುರದ ಹಾಜಿನ್ ಎಂಬಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನನ್ನು ಬಲಿಹಾಕುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
45 ಬೆಟಾಲಿಯನ್ ನ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಮತ್ತು 13 ರಾಷ್ಟ್ರೀಯ ರೈಫೆಲ್ಸ್(ಆರ್ ಆರ್)ನ ಸೈನಿಕರು ಬೆಳಗ್ಗಿನ ಜಾವ(ಮಾರ್ಚ್ 1) 1.05 ರ ಸುಮಾರಿಗೆ ಆರಂಭಿಸಿದ್ದ ದಾಳಿ ಬೆಳಗ್ಗಿನವರೆಗೂ ನಡೆದಿತ್ತು.
ಬಲಿಯಾದ ಉಗ್ರ ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದವನೆಂಬುದು ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಸದ್ಯಕ್ಕೆ ಗುಂಡಿನ ಚಕಮಕಿ ನಿಂತಿದ್ದು, ಕೂಂಬಿಂಗ್ ಕಾರ್ಯಾಚರಣ ಮುಂದುವರಿದಿದೆ. ಫೆ.26 ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಉಗ್ರನೊಬ್ಬ ಫೆ.27 ರಂದು ಮೃತನಾಗಿದ್ದನ್ನು ಇಲ್ಲಿ ಸ್ಮರಿಸಬಹುದು












Click it and Unblock the Notifications