ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮ ಹಿಂದುತ್ವಕ್ಕೆ ವಿರೋಧಿ : ಸುಬ್ರಮಣಿಯನ್ ಸ್ವಾಮಿ

By Mahesh
|
Google Oneindia Kannada News

ನವದೆಹಲಿ, ಜುಲೈ 10: ಸಲಿಂಗಿ, ಸಲಿಂಗಕಾಮ 'ಸಹಜ' ಪ್ರಕ್ರಿಯೆಯಲ್ಲ ಹಾಗೂ ಅದು ಹಿಂದುತ್ವ ವಿರೋಧಿ, ರಾಷ್ಟ್ರದ ಭದ್ರತೆಗೆ ಮಾರಕ, ಇಂಥ ನಡವಳಿಕೆ ಗುಣಪಡಿಸಲು ವೈದ್ಯಕೀಯ ಸಂಶೋಧನೆ ಅಗತ್ಯವಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸಲಿಂಗಕಾಮಯನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಸುಪ್ರೀಂ ಕೋರ್ಟಿನ ಸಂವಿಧಾನಿಕ ಪೀಠ ಮುಂದೂಡಿದೆ.

ಸಲಿಂಗ ಸಂಬಂಧ ಅಪರಾಧ: ಸೆಕ್ಷನ್ 377ರ ವಿರುದ್ಧದ ಅರ್ಜಿ ವಿಚಾರಣೆ ಇಂದು ಸಲಿಂಗ ಸಂಬಂಧ ಅಪರಾಧ: ಸೆಕ್ಷನ್ 377ರ ವಿರುದ್ಧದ ಅರ್ಜಿ ವಿಚಾರಣೆ ಇಂದು

ಈ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠದ ಬದಲು ಏಳು ಅಥವಾ ಒಂಬತ್ತು ಮಂದಿ ನ್ಯಾಯಾಧೀಶರುಗಳಿರುವ ಪೀಠ ವಿಚಾರಣೆ ನಡೆಸಬೇಕು. ಸಲಿಂಗಕಾಮ ಒಂದು ಅನುವಂಶಿಕ ದೋಷವೆಂದು ಸ್ವಾಮಿ ಮತ್ತೊಮ್ಮೆ ಹೇಳಿದ್ದಾರೆ.

Section 377: Homosexuality against Hindutva, cannot celebrate it: Subramanian Swamy

ಎಲ್‍ಜಿಬಿಟಿ ಸಮುದಾಯ ಏನೇ ಮಾಡಬೇಕೆಂದಿದ್ದರೂ ಅದನ್ನು ಖಾಸಗಿಯಾಗಿ ಮಾಡಿಕೊಳ್ಳಲಿ. ಅವರ ಲೈಂಗಿಕ ಒಲವುಗಳನ್ನು ಸಾರ್ವಜನಿಕವಾಗಿ ತೋರ್ಪಡಿಸಿಕೊಳ್ಳುವುದು ಬೇಡ. ಸೆಕ್ಷನ್ 277 ಅನ್ನು ಉಳಿಸಿಕೊಳ್ಳಬೇಕು ಹಾಗೂ ತಮ್ಮ ಲೈಂಗಿಕ ಒಲವುಗಳನ್ನು ತೋರಿಸಿಕೊಳ್ಳುವ ಸಲಿಂಗಕಾಮಿಗಳನ್ನು ಶಿಕ್ಷಿಸಬೇಕೆಂದು ಹೇಳಿದ್ದಾರೆ.

2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಆದರೆ, ಈ ಆದೇಶವನ್ನು 2013ರಲ್ಲಿ ಸುಪ್ರೀಂ ಕೋರ್ಟಿನ ಪೀಠವು ತಿರಸ್ಕರಿಸಿ, ಐಪಿಸಿ ಸೆಕ್ಷನ್ 377 ಅಡಿಯಲ್ಲಿ ಇದು ಅಕ್ರಮ, ಅಪರಾಧ ಎಂದು ಪರಿಗಣಿಸಲು ಸೂಚಿಸಿತ್ತು.

English summary
The Supreme Court will on Wednesday hear PILs against Section 377 of the Indian Penal Code that criminalises homosexuality. The BJP leader said homosexuality was against Hindutva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X