School Holiday: ಶಾಲೆಗಳ ಬೇಸಿಗೆ ರಜೆ ವಿಸ್ತರಣೆ
School Holiday: ಈ ವರ್ಷದ ಅಂದ್ರೆ 2025ರ ಆರಂಭದಿಂದಲೂ ಇಲ್ಲಿಯವರೆಗೂ ಹಲವೆಡೆ ಹಲವು ಕಾರಣಗಳಿಂದ ಶಾಲೆಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಇದೀಗ ಮತ್ತೆ ರಜೆಗಳ ಸರಮಾಲೆಯೇ ಹರಿದುಬರುತ್ತಿದೆ. ಹಾಗಾದ್ರೆ ಯಾವ್ಯಾವಾಗ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕದಲ್ಲಿ ಈಗಾಗಲೇ ಬೇಸಿಗೆ ರಜೆ ಮುಗಿದು ಶಾಲೆಗಳು ಕೂಡ ಆರಂಭವಾಗಿವೆ. ಇದಕ್ಕೂ ಮುಂಚೆ ರಾಜ್ಯದಲ್ಲಿ ಸರ್ಕಾರಿ ರಜೆಗಳನ್ನ ಹೊರತುಪಡಿಸಿ ಹಲವೆಡೆ ಹಲವು ಕಾರಣಗಳಿಂದ ಶಾಲೆಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಮತ್ತೆ ಇತ್ತೀಚೆಗಷ್ಟೇ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಿಸಲಾಗಿತ್ತು.

ಈ ನಡುವೆಯೇ ಕೆಲವು ರಾಜ್ಯಗಳಲ್ಲಿ ರಣಬಿಸಿಲು ಮುಂದುವರೆದ ಪರಿಣಾಮ ಬೇಸಿಗೆ ರಜೆ ವಿಸ್ತರಣೆ ಮಾಡಿದರೆ, ಇನ್ನೂ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ವಿಸ್ತರಣೆ ಮಾಡಲಾಗಿದೆ. ರಣಮಳೆ ಮುಂದುವರೆದ ಹಿನ್ನೆಲೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಜಿಲ್ಲಾಡಳಿತವು ಜೂನ್ 21ರ ವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ.
ಶಾಲೆಗಳಿಗೆ ಪ್ರಮುಖ ಸೂಚನೆ: ಒಂದು ವೇಳೆ ಈ ಆದೇಶವನ್ನು ಪಾಲಿಸದಿದ್ದರೆ, ವಿಪತ್ತು ನಿರ್ವಹಣಾ ಕಾಯ್ದೆ-2005ರ ಸಂಬಂಧಿತ ವಿಭಾಗದ ಅಡಿಯಲ್ಲಿ ಸಂಬಂಧಪಟ್ಟ ಶಾಲೆ/ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಂತಲೂ ಜಿಲ್ಲಾಡಳಿತ ಎಚ್ಚರಿಕೆ ಸಂದೇಶವನ್ನು ನೀಡಿದೆ.
ಜೆಮ್ಶೆಡ್‌ಪುರ ಜಿಲ್ಲೆಯಲ್ಲಿಯೂ ಸಹ ಜೂನ್ 20ರಂದು ಅಂದರೆ ಇಂದು 1 ರಿಂದ 8ನೇ ಎಲ್ಲಾ ಸರ್ಕಾರಿ, ಖಾಸಗಿ, ಅಲ್ಪಸಂಖ್ಯಾತ ಮತ್ತು ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆ ಒಡಿಶಾ ಸರ್ಕಾರವು ಜೂನ್ 20ರ ಶುಕ್ರವಾರ ಭುವನೇಶ್ವರ ಮತ್ತು ಕಟಕ್‌ನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದೆ.
ಜೂನ್ 30 ರವರೆಗೆ ಶಾಲೆಗಳಿಗೆ ರಜೆ: ಉತ್ತರ ಪ್ರದೇಶದಲ್ಲಿನ ಶಾಲೆಗಳಿಗೆ ಜೂನ್ 30ರ ವರೆಗೆ ಬೇಸಿಗೆ ರಜೆ ಇರಲಿದ್ದು, ಜುಲೈ 1ರಿಂದ ಶಾಲೆಗಳು ತೆರೆಯಲಿವೆ. ಇದಕ್ಕೂ ಮೊದಲು, ಮೇ 20ರಿಂದ ಜೂನ್ 16ರ ವರೆಗೆ ಬೇಸಿಗೆ ರಜೆಯನ್ನು ನಿಗದಿಪಡಿಸಲಾಗಿತ್ತು. ಆದರೆ ರಣಬಿಸಿಲು ಮುಂದುವರೆದ ಹಿನ್ನೆಲೆ ಬೇಸಿಗೆ ರಜೆ ವಿಸ್ತರಣೆ ಮಾಡಲಾಯಿತು.
ನವದೆಹಲಿಯಲ್ಲಿಯೂ ಶಾಲೆಗಳಿಗೆ ಜೂನ್ 30ರ ವರೆಗೆ ಬೇಸಿಗೆ ರಜೆ ಇರಲಿದ್ದು, ಜುಲೈ 1ರಿಂದ ಶಾಲೆಗಳು ಆರಂಭ ಆಗಲಿವೆ. ಆದರೂ, ಶಿಕ್ಷಕರು ಜೂನ್ 28ರಿಂದ ಶಾಲೆಗಳಿಗೆ ಭೇಟಿ ನೀಡಬೇಕಾಗುತ್ತದೆ. ಹಾಗೆಯೇ ಹರಿಯಾಣ, ಪಂಜಾಬ್, ರಾಜಸ್ಥಾನದಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಜೂನ್ 30ರ ವರೆಗೆ ಮುಚ್ಚಿರುತ್ತವೆ.
ಶಾಲೆಗಳಿಗೆ 21ರವರೆಗೆ ಬೇಸಿಗೆ ರಜೆ: ಬಿಹಾರದಲ್ಲಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 21ರವರೆಗೆ ಬೇಸಿಗೆ ರಜೆ ಇರಲಿದೆ. ಇನ್ನು ಜೂನ್ 22ರಂದು ಭಾನುವಾರ ಆಗಿರುವುದರಿಂದ ಶಾಲೆಗಳು ಜೂನ್ 23ರಿಂದ ಮತ್ತೆ ತೆರೆಯಲ್ಪಡಲಿದ್ದು, ಅಂದಿನಿಂದ ಎಂದಿನಂತೆ ತರಗತಿಗಳು ಪ್ರಾರಂಭ ಆಗಲಿವೆ.
ಜುಲೈನಿಂದ ಡಿಸೆಂಬರ್ ವರೆಗೆ ಎಷ್ಟು ದಿನ ಶಾಲೆಗಳು ಮುಚ್ಚಲ್ಪಡುತ್ತವೆ?
* ಜುಲೈ 6 - ಮೊಹರಂ
* ಆಗಸ್ಟ್ 9 - ರಕ್ಷಾಬಂಧನ
* ಆಗಸ್ಟ್ 15 - ಸ್ವಾತಂತ್ರ್ಯ ದಿನಾಚರಣೆ
* ಆಗಸ್ಟ್ 16 - ಶ್ರೀಕೃಷ್ಣ ಜನ್ಮಾಷ್ಟಮಿ
* ಆಗಸ್ಟ್ 27 - ಗಣೇಶ ಚತುರ್ಥಿ
* ಸೆಪ್ಟೆಂಬರ್ 5 - ಓಣಂ ಮತ್ತು ಈದ್-ಎ-ಮಿಲಾದ್
* ಸೆಪ್ಟೆಂಬರ್ 29 - ಮಹಾಸಪ್ತಮಿ
* ಸೆಪ್ಟೆಂಬರ್ 30 - ಮಹಾಶತಮಿ
* ಅಕ್ಟೋಬರ್ 1 - ಮಹಾನವಮಿ
* ಅಕ್ಟೋಬರ್ 2 - ಮಹಾತ್ಮ ಗಾಂಧಿ ಜಯಂತಿ ಮತ್ತು ದಸರಾ
* ಅಕ್ಟೋಬರ್ 7 - ಮಹರ್ಷಿ ವಾಲ್ಮೀಕಿ ಜಯಂತಿ
* ಅಕ್ಟೋಬರ್ 20 - ನರಕ ಚತುರ್ದಶಿ
* ಅಕ್ಟೋಬರ್ 22 - ಗೋವರ್ಧನ ಪೂಜೆ
* ನವೆಂಬರ್ 23 - ಭಾಯಿ ದೂಜ್
* ನವೆಂಬರ್ 5 - ಗುರುನಾನಕ್ ಜಯಂತಿ
* ನವೆಂಬರ್ 24 - ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನ
* ಡಿಸೆಂಬರ್ 25 - ಕ್ರಿಸ್‌ಮಸ್












Click it and Unblock the Notifications