ಸ್ಕಾನಿಯಾ ಬಸ್ ಹಗರಣ; ಗಡ್ಕರಿ ಭಾಗಿ ಕುರಿತು ದಾಖಲೆ ಬಿಡುಗಡೆ

ನವದೆಹಲಿ, ಏಪ್ರಿಲ್ 12: ಸ್ವೀಡನ್‌ನ ಸ್ಕಾನಿಯಾ ಬಸ್ ಹಾಗೂ ಟ್ರಕ್ ತಯಾರಿಕಾ ಕಂಪನಿಯಿಂದ ವಿಶೇಷ ಐಷಾರಾಮಿ ಬಸ್‌ಗಳನ್ನು ಭಾರತಕ್ಕೆ ತರಿಸಿಕೊಂಡ ಆರೋಪವನ್ನು ಕೇಂದ್ರ ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಲ್ಲಗಳೆದಿದ್ದು, ತಿಂಗಳ ನಂತರ ಕಂಪನಿ ಆಂತರಿಕ ವಿಚಾರಣೆಯ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದೆ.

ಇದರಲ್ಲಿ ನಿತಿನ್ ಗಡ್ಕರಿ ಪುತ್ರರಾದ ನಿಖಿಲ್ ಗಡ್ಕರಿ ಹಾಗೂ ಸಾರಂಗ್ ಗಡ್ಕರಿಯವರು ಭಾಗಿಯಾಗಿದ್ದರು ಎಂದು ಆ ದಾಖಲೆ ತಿಳಿಸಿದೆ.

ಸ್ವೀಡನ್‌ನ ಬಸ್ ಹಾಗೂ ಟ್ರಕ್ ತಯಾರಕ ಸಂಸ್ಥೆ ಸ್ಕಾನಿಯಾ 2013ರಿಂದ 2016ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಏಳು ರಾಜ್ಯಗಳಿಗೆ ಬಸ್ ಪೂರೈಕೆಯ ಗುತ್ತಿಗೆಯನ್ನು ಪಡೆದುಕೊಳ್ಳಲು ಲಂಚ ನೀಡಿತ್ತು ಎಂದು ಸ್ವೀಡನ್ ಸುದ್ದಿ ವಾಹಿನಿ ಎಸ್‌ವಿಟಿ ಸೇರಿದಂತೆ ಮೂರು ಮಾಧ್ಯಮ ಸಂಸ್ಥೆಗಳ ತನಿಖೆ ಬಹಿರಂಗಪಡಿಸಿದ್ದವು.

Scania Audit Confirms Nitin Gadkari Receives Luxury Bus From Swedish Firm

ಸ್ಕಾನಿಯಾ ಕಂಪನಿ ವಿಶೇಷ ಐಷಾರಾಮಿ ಬಸ್‌ಗಳನ್ನು ಭಾರತದ ಕಂಪನಿಯೊಂದಕ್ಕೆ ನೀಡಿತ್ತು. ತನ್ನ ಬಸ್‌ಗಳನ್ನು ಮಾರಾಟ ಮಾಡುವ ಸಲುವಾಗಿ ಭಾರತದ 7 ರಾಜ್ಯಗಳಲ್ಲಿ ಲಂಚ ನೀಡಿತ್ತು ಎಂದು ಎಸ್‌ವಿಟಿ, ಜರ್ಮನ್ ಮಾಧ್ಯಮ ಸಂಸ್ತೆ ಝಡ್ ಡಿಎಫ್ ಹಾಗೂ ಕಾನ್‌ಫ್ಲುಯೆನ್ಸ್ ಮೀಡಿಯಾ ವರದಿ ಮಾಡಿತ್ತು. ಇದರಲ್ಲಿ ನಿತಿನ್ ಗಡ್ಕರಿ ಪುತ್ರರ ಹೆಸರು ಕೇಳಿಬಂದಿತ್ತು.

ನಿತಿನ್ ಗಡ್ಕರಿ ಮಗಳ ಮದುವೆಯಲ್ಲಿ ಇದನ್ನು ಬಳಸಿಕೊಳ್ಳಲಾಗಿದ್ದು, ಅದಕ್ಕೆ ಹಣ ನೀಡಿಲ್ಲ ಎಂದೂ ಆರೋಪಿಸಲಾಗಿತ್ತು.

2017ರಲ್ಲಿ ಈ ಕುರಿತು ತನಿಖೆ ಆರಂಭಿಸಿರುವುದಾಗಿ ಕಂಪನಿ ವಕ್ತಾರರು ತಿಳಿಸಿದ್ದರು. ಆದರೆ ವಿಚಾರಣೆಯ ಪೂರ್ಣ ದಾಖಲೆಯನ್ನು ಬಿಡುಗಡೆಮಾಡಿಲ್ಲ.

ಆದರೆ ನಿತಿನ್ ಗಡ್ಕರಿ, ಪುತ್ರರು ಹಾಗೂ ಅವರ ಕಂಪನಿ ಈ ಕುರಿತು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂದು ಸ್ವೀಡನ್ ಕಂಪನಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+