ರಫೇಲ್ ಖರೀದಿಗೆ ತಡೆಯಾಜ್ಞೆ ಅರ್ಜಿ ಆಲಿಸಲು ಸುಪ್ರೀಂ ಒಪ್ಪಿಗೆ

ಭಾರತ- ಫ್ರಾನ್ಸ್ ಮಧ್ಯದ ರಫೇಲ್ ಯುದ್ಧ ವಿಮಾನ ವ್ಯವಹಾರಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ಬುಧವಾರ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. ವಕೀಲ ಮನೋಹರ್ ಲಾಲ್ ಶರ್ಮಾ ಈ ಅರ್ಜಿ ಹಾಕಿದ್ದರು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ಮುಂದಿನ ವಾರ ಅರ್ಜಿಯನ್ನು ಆಲಿಸಲು ಒಪ್ಪಿಕೊಂಡಿದೆ.

ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ವಿಮಾನ ಖರೀದಿಗೆ ತಲಾ 520 ಕೋಟಿ ರುಪಾಯಿ ಎಂದು ಫ್ರಾನ್ಸ್ ಸರಕಾರದ ಜತೆಗೆ ಮಾತುಕತೆ ನಡೆಸಿತ್ತು. ಆದರೆ ಎನ್ ಡಿಎ ಸರಕಾರವು ಒಂದು ವಿಮಾನಕ್ಕೆ 1600 ಕೋಟಿ ರುಪಾಯಿಯಂತೆ ಒಪ್ಪಂದ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

SC to hear petition seeking stay on Rafale deal with France

ಈ ವ್ಯವಹಾರದ ಬಗ್ಗೆ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಯಬೇಕು. ಜತೆಗೆ ರಫೇಲ್ ಯುದ್ಧ ವಿಮಾನ ಖರೀದಿ ಮೊತ್ತವನ್ನು ಬಯಲು ಮಾಡಬೇಕು. ಹಿಂದೂಸ್ತಾನ್ ಏರೋನಾಟಿಕ್ಸ್ ಇಂಡಿಯಾವನ್ನು ಒಪ್ಪಂದದಿಂದ ಕೈಬಿಟ್ಟು, ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹಕ್ಕೆ ಇದನ್ನು ವಹಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಖರೀದಿ ಒಪ್ಪಂದ ಆಗಿರುವುದು ಯುಪಿಎ ಅವಧಿಯಲ್ಲಿ. ಆಗಲೇ ಅದರಲ್ಲಿ 'ರಹಸ್ಯ ವಿಚಾರಗಳು' ಎಂಬುದಷ್ಟಿತ್ತು. ಅದನ್ನು ಒಪ್ಪಂದದ ಪ್ರಕಾರ ಬಯಲು ಮಾಡುವಂತಿಲ್ಲ. ಆದರೆ ಎನ್ ಡಿಎ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ದರವು ಯುಪಿಎಗಿಂತ ಶೇಕಡಾ ಇಪ್ಪತ್ತರಷ್ಟು ಕಡಿಮೆ ಇದೆ ಎಂದು ಸಚಿವ ಅರುಣ್ ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ.

ಯುಪಿಎ ಸರಕಾರದ ಅವಧಿಯಲ್ಲಿ 126 ರಫೇಲ್ ಯುದ್ಧ ವಿಮಾನ ಖರೀದಿ ಮಾಡಬೇಕು ಎಂದು ಫ್ರಾನ್ಸ್ ಸರಕಾರದ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು 2015ರಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ರದ್ದುಗೊಳಿಸಿದ್ದರು. ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣ ನೀಡಿ, ಸನ್ನದ್ಧ ಸ್ಥಿತಿಯಲ್ಲಿ 36 ಯುದ್ಧ ವಿಮಾನ ಖರೀದಿ ಮಾಡಲು ತೀರ್ಮಾನಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+