ಅಕ್ಟೋಬರ್ 7 ರಿಂದ ಅ. 18ರವರೆಗೂ 2 ಸಾವಿರ ಕ್ಯೂಸೆಕ್ಸ್ ನೀರು ಬಿಡಿ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 04: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಹಾಗೂ ಸೆಪ್ಟೆಂಬರ್ 30ರ ಆದೇಶ ಕುರಿತಂತೆ ವಿಚಾರಣೆ ಫುಲ್ ಅಪ್ಡೇಟ್ಸ್ ಇಲ್ಲಿದೆ.

ಸೆಪ್ಟೆಂಬರ್ 30ರಂದು ನೀಡಿದ ಆದೇಶವನ್ನು ಬದಲಾಯಿಸುವಂತೆ ಕೋರಿ ಸುಪ್ರೀಂಕೋರ್ಟಿಗೆ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. ಕೇಂದ್ರ ಸಲ್ಲಿಸಿರುವ ಅರ್ಜಿ ವಿಚಾರಣೆ ಮಂಗಳವಾರ ವಿಚಾರಣೆಗೆ ಬರುವ ಮೊದಲು ಕರ್ನಾಟಕದ ಪರ ವಕೀಲರು ಸುಪ್ರೀಂ ಆದೇಶ ಪಾಲಿಸುತ್ತಿರುವುದಾಗಿ ಹೇಳಿದರು.
* ಅಕ್ಟೋಬರ್ 1 ರಿಂದ 6 ರ ತನಕ ಪ್ರತಿದಿನ 6,000 ಕ್ಯೂಸೆಕ್ಸ್
* ಅಕ್ಟೋಬರ್ 7 ರಿಂದ 18 ರ ತನಕ ಪ್ರತಿದಿನ 2,000 ಕ್ಯೂಸೆಕ್ಸ್
* ಸದ್ಯಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಇಲ್ಲ
* ಸುಪ್ರೀಂನಿಂದ ತಾಂತ್ರಿಕ ಉನ್ನತಾಧಿಕಾರಿಗಳ ತಂಡ ಸ್ಥಾಪನೆ
* ಉಭಯ ರಾಜ್ಯಗಳಿಗೂ ಭೇಟಿ ನೀಡಿ ಅಕ್ಟೋಬರ್ 18ರಂದು ವರದಿ ನೀಡಲಿರುವ ತಂಡ.

'ತಮಿಳುನಾಡಿಗೆ 6 ದಿನಗಳ ಕಾಲ ನೀರು ಹರಿಸುತ್ತೇವೆ', 6 ದಿನಗಳಲ್ಲಿ 36,000 ಕ್ಯೂಸೆಕ್ಸ್ ನೀರು ಹರಿಯಲಿದೆ ಎಂದು ವಕೀಲ ಫಾಲಿ ಎಸ್ ನಾರಿಮನ್ ಮಾಹಿತಿ ನೀಡಿದರು.[ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

 Karnataka tells Supreme Court it will implement order to release Water

ಈಗಾಗಲೇ ಕಳೆದ ರಾತ್ರಿಯಿಂದಲೇ 9,000 ಕ್ಯೂಸೆಕ್ಸ್ ನೀರು ಹರಿದಿದೆ. ಇನ್ನೂ 12,000 ಕ್ಯೂಸೆಕ್ಸ್ ನೀರು ಇನ್ನೆರಡು ದಿನಗಳಲ್ಲಿ ಹರಿಸುತ್ತೇವೆ. ಅಕ್ಟೋಬರ್ 06ರೊಳಗೆ ಸುಪ್ರೀಂ ಆದೇಶ ಪೂರ್ತಿಯಾಗಿ ಪಾಲಿಸಲಾಗುತ್ತದೆ ಎಂದು ನಾರಿಮನ್ ಹೇಳಿದರು.

ಆದರೆ, ಅಕ್ಟೋಬರ್ 7 ರಿಂದ 18ರ ತನಕ ಏನು ಮಾಡುತ್ತೀರಿ? ಎಂದು ಕರ್ನಾಟಕದ ಪರ ವಕೀಲ ನಾರಿಮನ್ ಅವರನ್ನು ಪ್ರಶ್ನಿಸಿದ ದ್ವಿಸದಸ್ಯ ನ್ಯಾಯಪೀಠ.[ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

ಉಭಯ ರಾಜ್ಯಗಳ ರೈತರ ಹಿತದೃಷ್ಟಿಯಿಂದ ನೀರನ್ನು ಹರಿಸಲಾಗಿದೆ. ಮತ್ತೊಮ್ಮೆ ಈ ರೀತಿ ಆದೇಶ ನೀಡಬೇಡಿ. ನಾನು ಮುಜುಗರಕ್ಕೀಡಾಗಿದ್ದೇನೆ. ನ್ಯಾಯಾಂಗ ಆದೇಶ ಉಲ್ಲಂಘನೆ ಮಾಡುವ ಉದ್ದೇಶ ಕರ್ನಾಟಕಕ್ಕಿಲ್ಲ. ಪರಿಸ್ಥಿತಿ ಕಷ್ಟಕರವಾಗಿದೆ. ಮೇಲುಸ್ತುವಾರಿ ಸಮಿತಿ ಆದೇಶ ಕೂಡಾ ಕರ್ನಾಟಕಕ್ಕೆ ಮಾರಕವಾಗಿತ್ತು ಎಂದು ನಾರಿಮನ್ ಅವರಿಂದ ಮನವಿ ಮಾಡಿದರು.['ಟಿ.ಎಂ.ಸಿ' ನೀರಿನ ಪ್ರಮಾಣ ಎಂದರೆ ಎಷ್ಟಾಗುತ್ತೆ?]

ಈ ವಾದವನ್ನು ಪುರಸ್ಕರಿಸಿದ ನ್ಯಾ ದೀಪಕ್ ಮಿಶ್ರಾ ಹಾಗೂ ನ್ಯಾ ಉದಯ್ ಲಲಿತ್ ಅವರಿದ್ದ ನ್ಯಾಯಪೀಠ, ಮತ್ತೆ ನೀರು ಬಿಡಲು ಸಾಧ್ಯವೇ(ಅ.7ರಿಂದ ಅ.18) ಕರ್ನಾಟಕ ಸರ್ಕಾರದ ಜತೆ ಮಾತನಾಡಿ ತಿಳಿಸಿ ಎಂದು ಸೂಚಿಸಿದರು.[ಸುಪ್ರೀಂ ಆದೇಶ ವಿರುದ್ಧ ನಿಂತರೆ, ಕರ್ನಾಟಕದ ಗತಿ ಏನು?]

ಯಾವ ಲೆಕ್ಕಾಚಾರದಂತೆ ನೀರು ಬಿಡಲು ಆದೇಶಿಸಿದ್ದೀರಿ? ವಾಸ್ತವ ಸ್ಥಿತಿ ತಿಳಿದು ಎಷ್ಟು ಕ್ಯೂಸೆಕ್ಸ್ ಎಂಬ ಲೆಕ್ಕಾಚಾರ ಹಾಕಿದರೆ ಒಳ್ಳೆಯದು.ಕಾವೇರಿ ಮೇಲುಸ್ತುವಾರಿ ಸಮಿತಿಯವರು ವಸ್ತುಸ್ಥಿತಿ ಪರೀಕ್ಷಿಸಲಿ ಎಂದು ನಾರಿಮನ್ ಕೋರಿದ್ದಾರೆ. ಎಂದು ಸುಪ್ರೀಂಕೋರ್ಟ್ ನ್ಯಾಯಪೀಠಕ್ಕೆ ತಿರುಗೇಟು ನೀಡಿದ ವಕೀಲ ನಾರಿಮನ್.

ಅಕ್ಟೋಬರ್ 7 ರಿಂದ ಅ. 18ರವರೆಗೂ ಪ್ರತಿದಿನ 1,500 ಕ್ಯೂಸೆಕ್ಸ್ ನೀರು ಹರಿಸುತ್ತೇವೆ ಎಂದು ಸುಪ್ರೀಂಕೋರ್ಟಿಗೆ ತಿಳಿಸಿದ ವಕೀಲ ನಾರಿಮನ್. ಅಕ್ಟೋಬರ್ 7 ರಿಂದ ಅ. 18ರವರೆಗೂ 2 ಸಾವಿರ ಕ್ಯೂಸೆಕ್ಸ್ ನೀರು ಬಿಡಿ ಎಂದು ಆದೇಶಿಸಿದ ನ್ಯಾಯಪೀಠ.

ಮಂಡಳಿ ರಚನೆಗೆ ಕೇಂದ್ರ ಆಕ್ಷೇಪ: ಅಕ್ಟೋಬರ್ 04ರೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಇದಕ್ಕೆ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಕೂಡಾ ಒಪ್ಪಿಗೆ ಸೂಚಿಸಿದ್ದರು.[ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ?]

ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ಆದೇಶ ಮಾಡುವಂತಿಲ್ಲ. ಶಾಸಕಾಂಗದ ನೀತಿ ನಿಯಮಗಳನ್ನು ಪಾಲಿಸಬೇಕು ಎಂದು ಕಾರಣ ನೀಡಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ತಿಳಿಸಿದ್ದಾರೆ.[ಕಾವೇರಿ ನೀರು ಬಿಡಿ, ಇಲ್ಲ ಪರಿಣಾಮ ಎದುರಿಸಿ : ಸುಪ್ರೀಂ]

ಮಂಡಳಿ ರಚನೆಗೆ ಕರ್ನಾಟಕ ಹಾಗೂ ತಮಿಳುನಾಡಿನಿಂದ ವಿರೋಧವಿದೆ. ಸದ್ಯಕ್ಕೆ ಮಂಡಳಿ ರಚನೆಯನ್ನು ಮುಂದೂಡುವಂತೆ ಮುಕುಲ್ ಕೋರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka tells Supreme Court that it will implement order to release 6,000 cusecs of water daily to TN from October 1 to 6. We have already released 9,000 cusecs last night and will release 12,000 cusecs today and tomorrow. By october 6 We would have released the aggregate quantity of 36,000 cusecs to Tamil Nadu Karnataka tells SC
Please Wait while comments are loading...