ಒಂದು ‘ಟಿ.ಎಂ.ಸಿ’ ನೀರಿನ ಪ್ರಮಾಣ ಎಂದರೆ ಎಷ್ಟಾಗುತ್ತೆ?

Posted By:
Subscribe to Oneindia Kannada

ಬೆಂಗಳೂರು, ಸೆ. 24: ತಮಿಳುನಾಡಿಗೆ ನೀರು ಬಿಡಿ ಎಂದು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವುದು ಗೊತ್ತಿರುತ್ತದೆ. ಸುಪ್ರೀಂ ನೀಡಿರುವ ಈ ಸದ್ಯದ ಆದೇಶದಂತೆ 6,000 ಕ್ಯೂಸೆಕ್ಸ್ ಪ್ರತಿದಿನ ನೀರು ಹರಿಸಬೇಕು. ಆದರೆ, ಕ್ಯೂಸೆಕ್ಸ್ ಎಂದರೆ ಏನು. ಟಿಎಂಸಿ ಅಡಿ ಲೆಕ್ಕದಲ್ಲಿ ನೀರಿನ ಪ್ರಮಾಣ ಅಳೆಯುವುದೇಕೆ? ಮುಂದೆ ಓದಿ..

ನೀರನ್ನು ಅಳೆಯುವ ಮಾಪಕಗಳು ನಮಗೆ ತಿಳಿದಂತೆ 'ಲೀಟರ್' ಹೆಚ್ಚು ಬಳಕೆಯಲ್ಲಿದೆ. ಅದೇ ನೀರಿನ ಪ್ರಮಾಣ ಅಧಿಕವಾದಂತೆ ಅಳೆಯುವ ಮಾಪಕವೂ ಬದಲಾಗುತ್ತದೆ. ಈ ಬಗ್ಗೆ ಗೂಗಲ್, ಯಾಹೂ, ಕ್ಯೂರಾದಲ್ಲಿ ಪ್ರಶ್ನೆ ಹಾಕಿ ಅನೇಕ ಮಂದಿ ಉತ್ತರ ಪಡೆದಿದ್ದಾರೆ. ಇದೇ ರೀತಿ ಪಡೆದ ಉತ್ತರ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗಿದೆ. ಹೀಗೆ ವಾಟ್ಸಪ್, ಫೇಸ್ ಬುಕ್ ನಲ್ಲಿ ಹೆಚ್ಚು ಹಂಚಿಕೆಯಾದ ಮಾಹಿತಿ ನಿಮ್ಮ ಮುಂದೆ

ಒಂದು ಟಿಎಂಸಿ ಎಂದರೆ ಎಷ್ಟು? : ಒಂದು ಟಿ.ಎಂ.ಸಿ ಅಂದರೆ ಒಂದು ಸಾವಿರ ಅಡಿ ಉದ್ದ, ಸಾವಿರ ಅಡಿ ಅಗಲ, ಸಾವಿರ ಅಡಿ ಎತ್ತರದ ನೀರಿನ ರಾಶಿ.

How Much is One TMC? How much litres equals to TMC ft

ಉದಾಹರಣೆಗೆ: 23000 ಎಕರೆ ವಿಸ್ತಾರದಲ್ಲಿ ಒಂದು ಅಡಿ ನೀರು ನಿಂತರೆ ಅದು 1 ಟಿ.ಎಂ.ಸಿ. ಅಡಿಗೆ ಸಮ, ಹಾಗಾಗಿ 100 ಟಿ.ಎಂ.ಸಿ. ನೀರು ಎಂದರೆ 23000 ಎಕರೆ ವಿಸ್ತಾರದಲ್ಲಿ 100 ಅಡಿ ನೀರು. ಅಂದರೆ ನಮ್ಮ ಕೈತಪ್ಪಿ ಹೋಗಿರುವ ನೀರಿನ ಅಗಾಧತೆಯನ್ನು ಗಮನಿಸಿ. ಈ 100 ಟಿ.ಎಂ.ಸಿ. ನೀರನ್ನು ಸುಮಾರು 3 ಜಿಲ್ಲೆಗಳಿಗೆ ವರ್ಷಪೂರ್ತಿ ನೀರನ್ನು ಒದಗಿಸಬಹುದು. ಈ ಅನ್ಯಾಯವನ್ನು ಎತ್ತಿ ತೋರಿಸಬೇಕಾಗಿದ್ದ ನಮ್ಮ ರಾಜಕೀಯ ಪಕ್ಷಗಳು ಹಾಗೂ ಸರ್ಕಾರ ತಮಗೆ ಯಾವುದೋ ನಿಧಿ ಸಿಕ್ಕಂತೆ ಖುಷಿ ಪಡುತ್ತಿವೆ. ನಾಚಿಕೆ ಆಗಬೇಕು ನಮ್ಮ ಸರ್ಕಾರಕ್ಕೆ.
ಒಂದು 'ಟಿ.ಎಂ.ಸಿ' ನೀರು ಎಂದರೆ:-
*ಟಿ.ಎಂ.ಸಿ* = 2830 ಕೋಟಿ ಲೀಟರ್
*11,000 ಕ್ಯೂಸೆಕ್ಸ್ ನೀರು 24 ಗಂಟೆಗಳ ಕಾಲ ಹರಿದರೆ ಅದು ಒಂದು ಟಿ.ಎಂ.ಸಿ ಆಗುತ್ತದೆ.
*1 ಟಿ.ಎಂ.ಸಿ ನೀರು ಅಂದರೆ ಒಂದು ಸಾವಿರ ದಶಲಕ್ಷ ಘನ ಅಡಿ.
*10.000 ಲೀಟರ್ ಸಾಮರ್ಥ್ಯದ 18,33,000 ಟ್ರಕ್ ಗಳಲ್ಲಿ ತುಂಬಿದ ನೀರು
*1 ಟಿ.ಎಂ.ಸಿ ನೀರು ಇದರ 4,500 ಎಕೆರೆಯಲ್ಲಿ ಭತ್ತ, ಕಬ್ಬು ಅಥವಾ 11,000 ಎಕೆರೆಯಲ್ಲಿ ಶೇಂಗಾ ಬೆಳೆಯಬಹುದು.
*ಕ್ಯೂಸೆಕ್ (ಕ್ಯೂಬಿಕ್ ಫೀಟ್ ಪರ್ ಸೆಕೆಂಡ್) ಅನ್ನುವುದು ನೀರಿನ ಗರಿವಿನ ವೇಗ ಅಳೆಯಲು ಬಳಸುತ್ತಾರೆ.
*1 ಕ್ಯೂಸೆಕ್ =ಪ್ರತಿ ಸೆಕೆಂಡ್ 28.3 ಲೀಟರ್ ನೀರು ಹರಿದು ಹೋದರೆ ಅದನ್ನು ಒಂದು ಕ್ಯೂಸೆಕ್ ನೀರು ಎಂದು ಅಳೆಯುತ್ತಾರೆ.
ಸಂಪೂರ್ಣ ವಿವರ:-
Tmcft, (Tmc ft), (TMC), (tmc), is the abbreviation for one thousand million cubic feet (1,000,000,000 = 109 = 1 billion), commonly used in reference to volume of water in a reservoir or river flow.
ಒಂದು ಬಿಲಿಯನ್ =ಹತ್ತು ಕೋಟಿ;ಟಿ.ಎಂ.ಸಿ. ಘನ ಅಡಿ ನೀರು; ಅಡಿ ಅಥವಾ ಮೀಟರ್ ಎಂದು ಮುಂದೆ ಸೇರಿಸಬೇಕು.
1 tmcft. is equivalent to:(ಒಂದು ಟಿ.ಎಂ.ಸಿ. =
1,000,000,000 cubic feet (28,000,000 m3)(ಕ್ಯುಬಿಕ್ ಮೀಟರ್)
28,316,846,592 liters (ಲೀಟರ್)
2.83168466×107 cubic metres(ಕ್ಯುಬಿಕ್ ಮೀಟರ್)
22,956.841139 acre feet
7.48051945×109 U.S. gallons (ಗ್ಯಾಲನ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
cauvery dispute: How Much is One TMC? How much litres equals to TMC ft. TMC ft means Thousand Million Cubic feet. terminology used for water management. TMC ft = 28.3 million cubic meters.
Please Wait while comments are loading...