ಇವತ್ತು ಮದುವೆ, ನಾಳೆ ಡೈವೋರ್ಸ್; ಹೀಗಾದ್ರೆ ಹೇಗೆ ಎಂದ ಸುಪ್ರೀಂಕೋರ್ಟ್?
ನವದೆಹಲಿ, ಅಕ್ಟೋಬರ್ 14: ಭಾರತದ ಮಟ್ಟಿಗೆ ನಾವು ನೋಡುವುದಾದರೆ ಇವತ್ತು ಮದುವೆಯಾಗಿ, ನಾಳೆ ವಿಚ್ಛೇದನ ಪಡೆದುಕೊಳ್ಳುವ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ನಾವು ಇಲ್ಲ ಎಂದು ಸುಪ್ರೀಂಕೋರ್ಟ್ ಖಾರವಾಗಿ ನುಡಿದಿದೆ.
ತನ್ನ ಮದುವೆಯನ್ನು ಉಳಿಸಿಕೊಳ್ಳುವಂತೆ ಕೋರಿ ಪತ್ನಿಯೊಬ್ಬರು ಸಲ್ಲಿಸಿದ ಅರ್ಜಿಯು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಗುರುವಾರ ನಡೆದ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಬಹಳ ನಾಟಕೀಯ ತಿರುವು ಪಡೆದುಕೊಂಡಿತು.
ಮದುವೆಯ ಕುರಿತು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಶ್ರೀನಿವಾಸ್ ಓಕಾ ಪೀಠವು ಈ ಕುರಿತು ನೀಡಿದ ಹೇಳಿಕೆಗಳಿಗೆ ವಿಚಾರಣೆ ಸಾಕ್ಷಿ ಆಯಿತು. ಪತಿ-ಪತ್ನಿಯು ಪರಸ್ಪರ ಮಾಡಿಕೊಂಡ ಆರೋಪ-ಪ್ರತ್ಯಾರೋಪ ಹಾಗೂ ದಂಪತಿಯು ಮಧ್ಯ ಹೇಗೆ ಅಸಾಧ್ಯವಾದ ನಿರೀಕ್ಷೆಗಳಿರಬಾರದು ಎಂಬುದನ್ನು ವಿಚಾರಣೆ ವೇಳೆ ಉಲ್ಲೇಖಿಸಲಾಗಿತ್ತು.

40 ದಿನ ಜೊತೆಗಿದ್ದ ಪತಿ-ಪತ್ನಿಗೆ ಬೇಸರವಾದ ಬದುಕು!
ತಮ್ಮ ದಾಂಪತ್ಯ ಬದುಕನ್ನು ಮುಂದುವರಿಸುವುದನ್ನು ಮತ್ತೊಂದು ಅವಕಾಶ ನೀಡುವಂತೆ ಪತ್ನಿ ಕೋರ್ಟಿನಲ್ಲಿ ಮನವಿ ಮಾಡಿಕೊಂಡರ, ಪತಿಯು ವಿರುದ್ಧ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಮದುವೆಯನ್ನು ತಾವು ಮರೆಯಲಾಗದ ವಿಘಟನೆ ಎಂದು ಉಲ್ಲೇಖಿಸಿ, ಅರ್ಜಿಯನ್ನು ವಜಾಗೊಳಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಇನ್ನೊಂದು ಅಚ್ಚರಿ ವಿಷಯವೆಂದರೆ ಕೇವಲ 40 ದಿನಗಳವರೆಗೆ ಜೊತೆಗಿದ್ದ ದಂಪತಿ ಸುಮಾರು ಎರಡು ವರ್ಷಗಳವರೆಗೂ ಪ್ರತ್ಯೇಕವಾಗಿದ್ದರು ಎಂದು ಗೊತ್ತಾಗಿದೆ.

ನ್ಯಾಯಮೂರ್ತಿಗಳು ಮದುವೆ ಬಗ್ಗೆ ಹೇಳಿದ್ದೇನು?
ತಮ್ಮ ದಾಂಪತ್ಯ ಬದುಕನ್ನು ಉಳಿಸಿಕೊಳ್ಳುವುದಕ್ಕೆ ಮಹಿಳೆಯು ಬಯಸುತ್ತಿದ್ದಾರೆ. ಇದನ್ನು ಕೇಳುವುದಕ್ಕೆ ನಮಗೆ ಸಂತೋಷವಾಗುತ್ತದೆ, ಆದರೆ ದಾಂಪತ್ಯ ಬದುಕನ್ನು ಉಳಿಸಿಕೊಳ್ಳಲು ಎರಡು ಕಡೆಯಿಂದ ಒಪ್ಪಿಗೆ ಬೇಕಾಗುತ್ತದೆ. ಇಲ್ಲವಾದರೆ, ಈ ವೈವಾಹಿಕ ಬದುಕನ್ನು ಉಳಿಸುವುದಕ್ಕೆ ನಮ್ಮಿಂದಲೂ ಸಾಧ್ಯವಾಗುವುದಿಲ್ಲ. ಈ ಕುರಿತು ವಿಚಾರಣೆ ಆರಂಭಿಸಿದ ಸಂದರ್ಭದಲ್ಲಿ ವಿಭಾಗೀಯ ಪೀಠವು, ಒಟ್ಟಿಗೆ ಬಾಳುವುದಕ್ಕೆ ಬಯಸದ ಇಬ್ಬರನ್ನು ಜೊತೆಯಲ್ಲಿ ಇರುವಂತೆ ಒತ್ತಾಯಿಸುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಮದುವೆ ಬಗ್ಗೆ ಹನಿಟ್ರ್ಯಾಪ್ ಆರೋಪ ಮಾಡಿದ ಪತಿ
ನ್ಯಾಯಾಲಯದ ಮುಂದೆ ವಾಸ್ತವಿಕವಾಗಿ ಹಾಜರಾದ ಪತಿಯು, "ತನ್ನ ಮದುವೆಯನ್ನು "ಹನಿ ಟ್ರ್ಯಾಪ್" ಎಂದು ಹೇಳಿದರು. ಅವನ ಹೆಂಡತಿ ತನ್ನ ಹಣದ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದಾಳೆ. "ಇಲ್ಲಿ ಹಣವೇ ಯಾವಾಗಲೂ ಪ್ರೇರಕ ಶಕ್ತಿ ಆಗಿರುತ್ತದೆ. 2 ಕೋಟಿ ರೂಪಾಯಿ ಅನ್ನು ಪಡೆದುಕೊಂಡು ಎಲ್ಲವನ್ನೂ ಇತ್ಯರ್ಥಗೊಳಿಸಿಕೊಳ್ಳಲಾಗಿದೆ," ಎಂಬ ಅಂಶವನ್ನು ಪತಿಯು ವಿವರಿಸಿದರು.
ಪತಿಯ ಆರೋಪಕ್ಕೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿದ ಪತ್ನಿಯು, ತಾನು ಕೆನಡಾದಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಭಾರತಕ್ಕೆ ಬಂದಿದ್ದೇನೆ ಎಂದು ಉಲ್ಲೇಖಿಸಿದರು. ಅಲ್ಲದೇ ಅವನು ನನ್ನ ಜೀವನ ಮತ್ತು ನನ್ನ ವೃತ್ತಿಜೀವನವನ್ನು ಹಾಳುಮಾಡಿದ್ದಾನೆ ಎಂದು ಆರೋಪಿಸಿದರು.

ನ್ಯಾಯಮೂರ್ತಿ ಕೌಲ್ ಪ್ರಕರಣದ ಬಗ್ಗೆ ಉಲ್ಲೇಖಿಸಿದ್ದೇನು?
ಪತಿ-ಪತ್ನಿಯ ಆರೋಪ-ಪ್ರತ್ಯಾರೋಪವನ್ನು ಆಲಿಸಿದ ನ್ಯಾಯಮೂರ್ತಿ ಕೌಲ್, "ಇಬ್ಬರು ಒಟ್ಟಿಗೆ ಇರಲು ಸಾಧ್ಯವಾಗದಿದ್ದಾಗ ಏನು ಮಾಡಬೇಕು?. ಇಬ್ಬರನ್ನು ಒಟ್ಟಿಗೆ ಇರುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಯಾಗಿ ಮತ್ತೆ ತನ್ನ ವಾದವನ್ನು ಉಲ್ಲೇಖಿಸಿದ ಪತಿಯು, "ನಾನು ನನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದೇನೆ. ಅವರ ವೃದ್ಧಾಪ್ಯದಲ್ಲಿ ಹಿರಿಯರನ್ನು ನೋಡಿಕೊಳ್ಳುವ ಸದ್ಗುಣಗಳನ್ನು ನಾನು ನಂಬುತ್ತೇನೆ. ಆದರೆ, ಅವಳು ನಮ್ಮ ಹೆತ್ತವರೊಂದಿಗೆ ವಾಸಿಸಬಾರದು ಎಂದು ಹೇಳುವ ಕೆನಡಾದ ದೃಷ್ಟಿಕೋನವನ್ನು ಹೊಂದಿದ್ದಾಳೆ. ಇದು ನಮ್ಮ ಮೌಲ್ಯ ವ್ಯವಸ್ಥೆ ಮತ್ತು ಸಂಸ್ಕೃತಿಯಲ್ಲ ಎಂದು ಹೇಳಿದರು.

ಕೋರ್ಟ್ ವ್ಯಕ್ತಪಡಿಸಿದ್ದು ಏಕೆ ವಿಭಿನ್ನ ಅಭಿಪ್ರಾಯ
"ಅಂತಿಮವಾಗಿ ನಿಮ್ಮ ಹೆತ್ತವರನ್ನು ನೋಡಿಕೊಳ್ಳುವುದು ಒಂದು ವಿಷಯ. ಒಂದೋ ನೀವು ಮದುವೆಯಾಗದೆ ನಿಮ್ಮ ಹೆತ್ತವರನ್ನು ಮಾತ್ರ ನೋಡಿಕೊಳ್ಳಬೇಕು ಅಥವಾ ಕೆಲಸಕ್ಕೆ ಹೋಗದೇ ನಿಮ್ಮ ಹೆತ್ತವರನ್ನು ನೋಡಿಕೊಳ್ಳುವ ಮಹಿಳೆಯನ್ನು ನೀವು ಮದುವೆಯಾಗಬೇಕು. ಕೆನಡಾದಲ್ಲಿರುವ ಬೇರೆ ಯಾರನ್ನೇ ನೀವು ಮದುವೆಯಾಗಿ, ಅವರು ಎಲ್ಲವನ್ನೂ ಬಿಟ್ಟು ಇಲ್ಲಿಗೆ ಬದುಕಲು ಬನ್ನಿ ಎಂದು ಕರೆದರೆ ಅದು ಹೇಗೆ ಸಾಧ್ಯವಾಗುತ್ತದೆ?, ಇದು 142ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ಬಳಸಬಹುದಾದ ಪ್ರಕರಣವೇ ಅಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.
"ಇಲ್ಲಿ ಪರಸ್ಪರರು ಪ್ರತ್ಯೇಕವಾಗಿ ವಾಸಿಸುವುದು ಒಂದು ಪ್ರಕರಣವೇ ಅಲ್ಲ, ಇಲ್ಲಿ ಮದುವೆ ವಿಫಲವಾಗಿದೆ. ನಾವು ಆರ್ಟಿಕಲ್ 142 ರ ಅಡಿಯಲ್ಲಿ ಅಧಿಕಾರ ಚಲಾಯಿಸಬಹುದು. ಇದು ನಾವು ಸುಮೋಟೊ ಅಡಿ 142 ಅನ್ನು ಪ್ರಯೋಗಿಸುವ ಸಂದರ್ಭವೂ ಅಲ್ಲ. ಈ ಮದುವೆಯು ಬೇಡ ಎಂದು ಎರಡೂ ಕಡೆಯಿಂದ ಅಭಿಪ್ರಾಯ ವ್ಯಕ್ತವಾಗುವ ಹೊರತಾಗಿ ನಾವು ಇದನ್ನು ಸ್ಥಗಿತಗೊಳಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲದೇ ದಂಪತಿಯು ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಕಕ್ಷಿದಾರರು ಉಲ್ಲೇಖಿಸಿರುವ ಅಂಶಗಳು ತೀರಾ ಸಿಲ್ಲಿ ಎಂದು ತೋರುತ್ತದೆ ಎಂದಿತು.
"ವಾಸ್ತವವಾಗಿ ಎರಡೂ ಕಡೆಯಿಂದ "ಸಿಲ್ಲಿ" ಎಂಬ ಪದವನ್ನು ಬಳಸುವುದಕ್ಕೆ ಕೆಲವು ವ್ಯತ್ಯಾಸವಾಗುತ್ತದೆ. ಏಕೆಂದರೆ ಮದುವೆಯು ಮುರಿದುಹೋಗುವ ಹಂತವನ್ನು ತಲುಪಿಲ್ಲ. ಮದುವೆಯು ಅಂತಹ ಸಾಂದರ್ಭಿಕ ವಿಷಯವಲ್ಲ. ನೀವು ಇವತ್ತೇ ಮದುವೆಯಾಗಿ ನಾಳೆ ವಿಚ್ಛೇದನ ಕೊಡುವ ಪಾಶ್ಚಿಮಾತ್ಯ ವ್ಯವಸ್ಥೆಯ ಅಡಿಯಲ್ಲಿ ನಾವಿಲ್ಲ. ಆ ವಿಧಾನಗಳನ್ನು ನಾವು ಇಲ್ಲಿ ಹೇರಲು ಸಾಧ್ಯವಿಲ್ಲ," ಎಂದು ಕೋರ್ಟ್ ಹೇಳಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications