ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ: ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ನ್ಯಾಯಮೂರ್ತಿ ಬಿ.ವಿ.ನಾಗರತ್ನ
ಕರ್ನಾಟಕದ ಐದು ಜಿಲ್ಲೆಗಳ 865 ಗ್ರಾಮಗಳು ಮತ್ತು ಸ್ಥಳಗಳಲ್ಲಿ ಮರಾಠಿ ಮಾತನಾಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ನೀಡಬೇಕು ಎಂಬ ವಾದ ಮಾಡುತ್ತಿದೆ.
ನವದೆಹಲಿ, ಫೆಬ್ರವರಿ. 08: 2004ರಲ್ಲಿ ಮಹಾರಾಷ್ಟ್ರ ಸಲ್ಲಿಸಿದ್ದ ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದದ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಬುಧವಾರ ಹಿಂದೆ ಸರಿದಿದ್ದಾರೆ.
ಗಡಿ ವಿವಾದದ ಮೊಕದ್ದಮೆಯನ್ನು ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್, ಹೃಷಿಕೇಶ್ ರಾಯ್ ಮತ್ತು ಬಿವಿ ನಾಗರತ್ನ ಅವರ ಪೀಠದ ಮುಂದೆ ವಿಚಾರಣೆಗಾಗಿ ಪಟ್ಟಿ ಮಾಡಲಾಗಿತ್ತು.
ರಾಜ್ಯ ಮರುಸಂಘಟನೆ ಕಾಯಿದೆ, 1956 ರ ಸೆಕ್ಷನ್ 3, 7 ಮತ್ತು 8 ರ ಕೆಲವು ವಿಭಾಗಗಳನ್ನು ಮಹಾರಾಷ್ಟ್ರ ಪ್ರಶ್ನಿಸಿದೆ. ಇದರ ಆಧಾರದ ಮೇಲೆ ಹಲವಾರು ರಾಜ್ಯಗಳ ಗಡಿಗಳನ್ನು ಭಾಷಾವಾರು ಆಧಾರದ ಮೇಲೆ ಮರುಜೋಡಿಸಲಾಗಿದೆ. ಕಾಯಿದೆಯ ಕೆಲವು ಭಾಗಗಳನ್ನು ಬಹಿರಂಗಪಡಿಸಲು ಕೋರಿ 2004 ರಲ್ಲಿ ಮಹಾರಾಷ್ಟ್ರ ಸರ್ಕಾರವು ಮೊಕದ್ದಮೆ ಹೂಡಿತ್ತು.

ಮಹಾರಾಷ್ಟ್ರ ಸರ್ಕಾರದ ಪ್ರಕಾರ, ಕರ್ನಾಟಕದ ಐದು ಜಿಲ್ಲೆಗಳ 865 ಗ್ರಾಮಗಳು ಮತ್ತು ಸ್ಥಳಗಳಲ್ಲಿ ಮರಾಠಿ ಮಾತನಾಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ನೀಡಬೇಕು ಎಂಬ ವಾದ ಮಾಡುತ್ತಿದೆ. ಇದರ ಪ್ರಕಾರ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು.
ಮಹಾರಾಷ್ಟ್ರವು ತನ್ನ ಮನವಿಯಲ್ಲಿ, ರಾಜ್ಯ ಸರ್ಕಾರಗಳ ನಡುವಿನ ವಿವಾದವನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ಗೆ ಅಧಿಕಾರ ನೀಡುವ ಸಂವಿಧಾನದ 131 ನೇ ವಿಧಿಯನ್ನು ಉಲ್ಲೇಖಿಸಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಭಾಗಿಯಾಗಿರುವ ವಿವಾದಗಳ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನ್ಯಾಯವ್ಯಾಪ್ತಿಯನ್ನು ಹೊಂದಿದೆ ಎಂದು ವಾದಿಸಿದೆ.

ಆದರೆ, ಮೊಕದ್ದಮೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರವು ಸಂವಿಧಾನದ 3 ನೇ ಪರಿಚ್ಛೇದದ ಅಡಿಯಲ್ಲಿ ಸಂಸತ್ತು ಮಾತ್ರ ರಾಜ್ಯ ಗಡಿಗಳನ್ನು ನಿರ್ಧರಿಸಬಹುದು. ಸುಪ್ರೀಂ ಕೋರ್ಟ್ ಅಲ್ಲ ಎಂದು ವಾದಿಸಿದೆ.
ರಾಜ್ಯ ಮರುಸಂಘಟನೆ ಕಾಯಿದೆಯ ಆಧಾರವು ಕೇವಲ ಭಾಷಾವಾರು ಅಲ್ಲ ಮತ್ತು ನಾಗರಿಕರು ಮಾತನಾಡುವ ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಭಜಿಸಲಾಗಿಲ್ಲ. ಇದು ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳ ಅಸಂಖ್ಯಾತ ಪರಿಗಣನೆಯಾಗಿದೆ ಎಂದು ಕರ್ನಾಟಕ ವಾದಿಸಿದೆ.
ಇನ್ನು, ವಿಚಾರಣೆಯಿಂದ ಹಿಂದೆ ಸರಿದಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಕರ್ನಾಟಕ ಬಾರ್ ಕೌನ್ಸಿಲ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.












Click it and Unblock the Notifications