• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿ, ಸುಪ್ರೀಂಕೋರ್ಟ್ ತೀರ್ಪು: ಜಗಳಗಂಟಿ ಜಯಲಲಿತಾ ಇದ್ದಿದ್ದರೆ?

|
   ಕಾವೇರಿ ವಿವಾದದ ತೀರ್ಪು : ಜಯಲಲಿತಾ ಬದುಕಿದ್ದಿದ್ರೆ ತೀರ್ಪು ಏನಾಗ್ತಿತ್ತು? | Oneindia Kannada

   ದಶಕಗಳ ಕಾವೇರಿ ನದಿನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪನ್ನು ಶುಕ್ರವಾರ (ಫೆ 16) ಪ್ರಕಟಿಸಿದೆ. ಕರ್ನಾಟಕ ಖುಷಿ ಪಡುವ ಅಂಶ ತೀರ್ಪಿನಲ್ಲಿ ಇರುವುದರಿಂದ, ಈ ವಿಚಾರದಲ್ಲಿ ಹಿನ್ನಡೆ ಅನುಭವಿಸುತ್ತಲೇ ಬರುತ್ತಿದ್ದ ಕರ್ನಾಟಕ ಈಗ ಕೊಂಚ ನಿರಾಳ ಪಡುವಂತಾಗಿದೆ.

   ಕಾವೇರಿ ವಿಚಾರವನ್ನು ಇಟ್ಟುಕೊಂಡು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ರಾಜಕೀಯ ಮೈಲೇಜ್ ತೆಗೆದುಕೊಂಡಿದ್ದೇ ತೆಗೆದುಕೊಂಡಿದ್ದು. ಆದರೆ, ಅವರ ನಿಧನದ ನಂತರ ಸುಪ್ರೀಂ ತೀರ್ಪು ಹೊರಬಿದ್ದದೆ, ತಮಿಳುನಾಡು ಸರಕಾರ, ಮೇಲ್ಮನವಿ ಸಲ್ಲಿಸಲಿದೆಯೇ ಎನ್ನುವುದನ್ನು ಕಾದುನೋಡಬೇಕಾಗಿದೆ.

   ಸುಪ್ರೀಂ ಕೋರ್ಟ್ ಕಾವೇರಿ ತೀರ್ಪಿಗೆ ಯಾರು, ಏನೆಂದರು?

   ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದರೆ ಸಾಕು, ಕಾವೇರಿ ವಿವಾದ ಮತ್ತೆ ಭುಗಿಲೇಳುವುದು ಖಂಡಿತ ಎನ್ನುವಂತೆ, ಜಯಲಲಿತಾ ತನ್ನ ಅಧಿಕಾರದ ಅವಧಿಯಲ್ಲಿ ಪದೇ ಪದೇ ಕ್ಯಾತೇ ತೆಗೆಯುತ್ತಲೇ ಬರುತ್ತಿದ್ದರು. ಹಾಗಾಗಿ, ಜಯಲಲಿತಾ ಕನ್ನಡಿಗರ ಪಾಲಿಗೆ ವಿಲನ್ ರೀತಿಯಲ್ಲೇ ಬಿಂಬಿತರಾಗಿದ್ದವರು.

   ಕಾವೇರಿ ಅಂತಿಮ ತೀರ್ಪು: ತಮಿಳನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ

   ಜಯಾ ನಿಧನದ ನಂತರ, ಛಿದ್ರಛಿದ್ರಗೊಂಡು ಮತ್ತೆ ಒಂದಾಗಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರಕಾರ ಅಲ್ಲಿ ಈಗ ಅಧಿಕಾರದಲ್ಲಿದೆ. ಬಯಸದೇ ಬಂದ ಭಾಗ್ಯದಂತೇ ಸಿಎಂ ಹುದ್ದೆ ಅವರಿಗೆ ಒಲಿದಿರುವುದರಿಂದ, ಜಯಾ ಈ ಹಿಂದೆ ಕಾವೇರಿ ವಿಚಾರದಲ್ಲಿ ತೆಗೆದುಕೊಂಡಿದಷ್ಟು ಗಟ್ಟಿ ನಿರ್ಧಾರವನ್ನು ಪಳನಿಸ್ವಾಮಿ ತೆಗೆದುಕೊಳ್ಳುವ ಸಾಧ್ಯತೆ ಕಮ್ಮಿ. ಮುಂದೆ ಓದಿ

   ಸಾಂಬಾ ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಬೇಕೇ ಬೇಕು

   ಸಾಂಬಾ ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಬೇಕೇ ಬೇಕು

   ಕುಡಿಯಲು ಕಾವೇರಿ ನೀರು ಬಿಡಿ ಎಂದು ಒಮ್ಮೆಯೂ ಬೇಡಿಕೆ ಇಡದೇ, ಬೆಳೆದು ನಿಂತ ಸಾಂಬಾ (ಮುಂಗಾರು) ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಬೇಕೇ ಬೇಕು ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿ, ಪ್ರತೀ ಬಾರಿ ಹೆಚ್ಚುವರಿ ನೀರನ್ನು ಕರ್ನಾಟಕದಿಂದ ಬಿಡಿಸಿಕೊಳ್ಳುವಲ್ಲಿ ಜಯಲಲಿತಾ ಯಶಸ್ವಿಯಾಗಿದ್ದರು.

   ಕರ್ನಾಟಕಕ್ಕೆ ಕಣ್ಣೀರಾಗಲಿಲ್ಲ ಕಾವೇರಿ: ಸಂತಸ ತಂದ ಸುಪ್ರೀಂ ತೀರ್ಪು

   ನ್ಯಾಯಾಧಿಕರಣದ ಮಧ್ಯಂತರ ಆದೇಶದ ಜಾರಿಗೆ ಒತ್ತಾಯ

   ನ್ಯಾಯಾಧಿಕರಣದ ಮಧ್ಯಂತರ ಆದೇಶದ ಜಾರಿಗೆ ಒತ್ತಾಯ

   2001ರಲ್ಲಿ ಜಯಲಲಿತಾ ಅಧಿಕಾರಕ್ಕೆ ಬಂದಾಗ, ಮೊದಲು ಎತ್ತಿದ್ದೇ ಕಾವೇರಿ ವಿಚಾರವನ್ನು. ಅಂದಿನ ಪ್ರಧಾನಿ ವಾಜಪೇಯಿಯವರನ್ನು ಭೇಟಿ ಮಾಡಿದ್ದ ಜಯಾ, ನ್ಯಾಯಾಧಿಕರಣದ ಮಧ್ಯಂತರ ಆದೇಶದ ಪರಿಣಾಮಕಾರಿ ಜಾರಿಗೆ ಸೂಕ್ತ ಏರ್ಪಾಡು ಮಾಡುವಂತೆ ವಾಜಪೇಯಿ ಅವರನ್ನು ಜಯಲಲಿತಾ ಒತ್ತಾಯಿಸಿದ್ದರು.

   ಕರ್ನಾಟಕದ ವಿರುದ್ದ ಕ್ಯಾತೆ ತೆಗೆಯುತ್ತಲೇ ಇದ್ದ ಜಯಲಲಿತಾ

   ಕರ್ನಾಟಕದ ವಿರುದ್ದ ಕ್ಯಾತೆ ತೆಗೆಯುತ್ತಲೇ ಇದ್ದ ಜಯಲಲಿತಾ

   ಕಾವೇರಿ, ಹೊಗೇನಿಕಲ್ ವಿಚಾರದಲ್ಲಿ ಕರ್ನಾಟಕದ ವಿರುದ್ದ ಕ್ಯಾತೆ ತೆಗೆಯುತ್ತಲೇ ಇದ್ದಿದ್ದರಿಂದ ಜಯಲಲಿತಾಗೆ, ಕನ್ನಡಪರ ಸಂಘಟನೆಗಳು 'ಜಗಳಗಂಟಿ' ಎನ್ನುವ ಬಿರುದನ್ನು ನೀಡಿದ್ದವು. ಈಗಿನ ಸರಕಾರ ಕಾವೇರಿ ವಿಚಾರವನ್ನು ಸರಿಯಾಗಿ ನಿಭಾಯಿಸದೇ ಇದಿದ್ದರಿಂದ, ನಮಗೆ ಹಿನ್ನಡೆಯಾಗಿದೆ ಎಂದು ತಂಜಾವೂರಿನಲ್ಲಿ ರೈತರು ಈಗಾಗಲೇ ಪ್ರತಿಭಟನೆ ಆರಂಭಿಸಿದ್ದಾರೆ.

   ಕನ್ನಡಿಗರ ಪರ ಹೆಚ್ಚು ಒಲವು ಹೊಂದಿದ್ದಾರೆ ಎನ್ನುವ ಮಾತು

   ಕನ್ನಡಿಗರ ಪರ ಹೆಚ್ಚು ಒಲವು ಹೊಂದಿದ್ದಾರೆ ಎನ್ನುವ ಮಾತು

   ಜಯಲಲಿತಾ ಕರ್ನಾಟಕ ಮೂಲದವರು, ಕನ್ನಡಿಗರ ಪರ ಹೆಚ್ಚು ಒಲವು ಹೊಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿದ್ದಕ್ಕೋ ಏನೋ, ಎಸ್ ಎಂ ಕೃಷ್ಣ, ಯಡಿಯೂರಪ್ಪ, ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ, ಕಾವೇರಿ ವಿವಾದ ಎಲ್ಲಾ ಮುಖ್ಯಮಂತ್ರಿಗಳಿಗೂ ದೊಡ್ಡ ಸಮಸ್ಯೆಯಾಗಿ ಕಾಡಿತ್ತು.

   ಕಾವೇರಿ ಅಂತಿಮ ತೀರ್ಪು: ಟ್ವಿಟ್ಟರ್ ನಲ್ಲಿ ಶಾಂತಿಮಂತ್ರ ಪಠಣ

   ಸುಪ್ರೀಂಕೋರ್ಟ್ ತೀರ್ಪು ಈ ರೀತಿ ಬರಲು ಬಿಡುತ್ತಿರಲಿ

   ಸುಪ್ರೀಂಕೋರ್ಟ್ ತೀರ್ಪು ಈ ರೀತಿ ಬರಲು ಬಿಡುತ್ತಿರಲಿ

   ಜಯಲಲಿತಾ ಜೀವಿತವಾಗಿದ್ದರೆ, ಸುಪ್ರೀಂಕೋರ್ಟ್ ತೀರ್ಪು ಈ ರೀತಿ ಬರಲು ಬಿಡುತ್ತಿರಲಿಲ್ಲ ಎಂದು ತಮಿಳುನಾಡು ಕಾವೇರಿ ಜಲಾಯನ ಪ್ರದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದಂತೂ ಸತ್ಯ, ಇಷ್ಟು ದಿನ ಕರ್ನಾಟಕ ಕಾವೇರಿ ಕಣಿವೆಯ ರೈತರು, ರಾಜ್ಯದ ಜನತೆ ಏನು ನೀರಿಗಾಗಿ ಹೋರಾಟ ನಡೆಸುತ್ತಿದ್ದರೋ, ಅದಕ್ಕೆ ಕೊನೆಗೂ ತಕ್ಕಮಟ್ಟಿನ ಯಶಸ್ಸಂತೂ ಸಿಕ್ಕಿದೆ. ಥ್ಯಾಂಕ್ಸ್ ಟು ಸರ್ವೋಚ್ಚ ನ್ಯಾಯಾಲಯ.

   lok-sabha-home

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Supreme Court verdict on Cauvery river water sharing: Tamilnadu late CM Jayalalithaa has taken maximum political mileage on water sharing issue.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more