ಕೈತುಂಬಾ ಸಂಬಳದ SBI ಬ್ಯಾಂಕ್ ಕೆಲಸಕ್ಕೆ ಗುಡ್‌ಬೈ! ಒತ್ತಡ ಮುಕ್ತ ಯೋಗ ಸ್ಟುಡಿಯೋ ಶುರು ಮಾಡಿದ ಮಹಿಳೆ

Woman Quits SBI Job: ಬ್ಯಾಂಕ್‌ನಲ್ಲಿ ಕೆಲಸ ಸಿಗಬೇಕು ಎನ್ನುವುದು ಅದೆಷ್ಟೋ ವಿದ್ಯಾವಂತರ ಕನಸು. ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿ ಇರುವುದು ಬ್ಯಾಂಕ್‌ನಲ್ಲಿ ಕೆಲಸ ಮಾಡುವವರು ಆರಾಮಾಗಿ ಇರುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೆ ಕೆಲಸ, ಬೇಕಾದಾಗ ರಜೆ, ಸರ್ಕಾರಿ ರಜೆ, ಭರ್ಜರಿ ಸವಲತ್ತುಗಳು. ಆದರೆ ವಾಸ್ತವ ನಿಜಕ್ಕೂ ಹಾಗೆಯೇ ಇದೆಯಾ ಎನ್ನುವುದು ಪ್ರಶ್ನೆ. ಹೌದು, ಇತ್ತೀಚಿನ ಕಾಂಪಿಟೇಶನ್‌ ಯುಗದಲ್ಲಿ ಬ್ಯಾಂಕ್‌ ನೌಕರರದ್ದು ಕೂಡಾ ನೆಮ್ಮದಿಯ ಬದುಕು ಅಲ್ಲ ಎನ್ನುತ್ತಾರೆ ಎಸ್‌ಬಿಐನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿದ್ದ ಸ್ನಿಗ್ಧಾ ಬೋಸ್.

ಸಹಾಯಕ ವ್ಯವಸ್ಥಾಪಕಿ ಹುದ್ದೆಗೆ ರಾಜೀನಾಮೆ ನೀಡಿದ SBI ಉದ್ಯೋಗಿ

ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಸಹಾಯಕ ವ್ಯವಸ್ಥಾಪಕಿ ಹುದ್ದೆಯಲ್ಲಿದ್ದರು. ಆದ್ರೆ ಈಗ ಆ ಹುದ್ದೆಗೆ ರಾಜೀನಾಮೆ ನೀಡಿ ಬ್ಯಾಂಕ್‌ ಕೆಲಸ ಬೇಡವೇ ಬೇಡ ಎಂದು ಹೊರ ಬಂದಿದ್ದಾರೆ. ಇದರ ಬದಲಿಗೆ ಸ್ವಂತ ಯೋಗ ಸ್ಟುಡಿಯೋವನ್ನು ಪ್ರಾರಂಭಿಸಿದ್ದಾರೆ. ನಿರಂತರವಾಗಿ ಅನುಭವಿಸಿದ ಮಾನಸಿಕ ತೊಳಲಾಟ ಮತ್ತು ಒತ್ತಡವೇವು ಈ ದೊಡ್ಡ ನಿರ್ಧಾರಕ್ಕೆ ಕಾರಣವಂತೆ. ಇದೀಗ ಸ್ನಿಗ್ದಾ ಉತ್ತರ ಪ್ರದೇಶದ ಮೀರತ್‌ನಲ್ಲಿ ತುಲಾ ವೆಲ್ನೆಸ್ ಸ್ಟುಡಿಯೋವನ್ನು ತೆರೆದಿದ್ದಾರೆ. ಅದರ ಸಂಸ್ಥಾಪಕಿಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

Woman

ಯಾವ ಸವಲತ್ತುಗಳ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಹಾಯಕ ವ್ಯವಸ್ಥಾಪಕಿ ಎಂದರೆ ಅದು ಸ್ಥಿರವಾದ ಕೆಲಸ. ಸರ್ಕಾರಿ ಉದ್ಯೋಗ ಯಾವಾಗಲೂ ಸ್ಥಿರತೆ ಮತ್ತು ಉದ್ಯೋಗ ಭದ್ರತೆಯನ್ನು ಒದಗಿಸುತ್ತದೆ. ಪ್ರತೀ ತಿಂಗಳು ಸಮಯಕ್ಕೆ ಸರಿಯಾಗಿ ಕೈ ಸೇರುವ ಸಂಬಳ, ಬೇರೆ ಬೇರೆ ಭತ್ಯೆ, ರಜೆಗೆ ರಜೆ ಹೀಗೆ ಎಲ್ಲಾ ಸವಲತ್ತುಗಳು ಸರ್ಕಾರಿ ನೌಕರರಿಗೆ ಇರುತ್ತದೆ. ಆದರೂ ಸ್ನಿಗ್ಧಾ ಈ ಎಲ್ಲಾ ಕಂಫರ್ಟ್‌ಗಳನ್ನು ಬಿಟ್ಟ ಹೊರ ಬರಲು ನಿರ್ಧರಿಸಿದ್ದರು. ಉದ್ಯೋಗ ಭದ್ರತೆಯ ಬಗ್ಗೆಯೂ ಅವರು ತಲೆಕೆಡಿಸಿಕೊಳ್ಳಲಿಲ್ಲ.

ಕೆಲಸ ಬಿಡದಂತೆ ಎಲ್ಲರ ಒತ್ತಡ

ಈ ಬಗ್ಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಉತ್ತಮ ಸಂಬಳ ನೀಡುತ್ತಿದ್ದ ಸ್ಥಿರ ಕೆಲಸಕ್ಕೆ ರಾಜೀನಾಮೆ ನೀಡದಂತೆ ಜನರು ಅವರಿಗೆ ಎಚ್ಚರಿಕೆ, ಸಲಹೆ ನೀಡಿದ್ದರಂತೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಥಿರವಾದ ಕೆಲಸವಿತ್ತು. ಸುರಕ್ಷಿತ ವೃತ್ತಿ, ಕೈ ತುಂಬಾ ಸಂಬಳ, ಸಹಾಯಕ ವ್ಯವಸ್ಥಾಪಕಿ ಹುದ್ದೆ ಬೇರೆ. ಇದನ್ನು ಹೊರಗಿನಿಂದ ನೋಡಿದ ಜನ ಕೆಲಸ ಬಿಡಬೇಡಿ ಎನ್ನವುದು ಸರ್ವೆ ಸಾಮಾನ್ಯ ಎನ್ನುತ್ತಾರೆ ಸ್ನಿಗ್ದಾ.

ಮಿತಿ ಮೀರಿದ ಮಾನಸಿಕ ಯಾತನೆ

ಆದರೆ ಬ್ಯಾಂಕ್ ಕೆಲಸವು ಎಲ್ಲಾ ರೀತಿಯ ಸವಲತ್ತುಗಳನ್ನು ಕೊಟ್ಟಿತ್ತು ನಿಜ. ಆದರೆ ಮನಸ್ಸಿಗೆ ತೃಪ್ತಿ ಯಾವತ್ತೂ ಇರಲೇ ಇಲ್ಲ. ನಿರಂತರ ದಣಿವು, ತೀವ್ರ ಒತ್ತಡವನ್ನು ಅನುಭವಿಸಿದ್ದರು. ಪ್ರತಿದಿನ ತಲೆನೋವು ಬರುತ್ತಿತ್ತು, ಹೀಗಾಘಿ ದಿನಾಲೂ ಪೈನ್‌ ಕಿಲ್ಲರ್‌ ಮಾತ್ರೆ ನುಂಗುವ ಸ್ಥಿತಿ ಎದುರಾಗಿತ್ತು. ಅಂಥಹ ಒತ್ತಡದ ಜೀವನ ಅವರಿಗೆ ಇಷ್ಟವಾಗಲಿಲ್ಲ. ಈ ಕೆಲಸ ಬಿಟ್ಟು ಬೇರೆ ಏನಾದರೂ ಮಾಡಬೇಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಅದರ ಫಲವೇ ಈ ವೆಲ್ನೆಸ್‌ ಸ್ಟುಡಿಯೋ.

ವೆಲ್‌ನೆಸ್ ಸ್ಟುಡಿಯೋ ಪ್ರಾರಂಭ

ತುಂಬಾ ಹೊತ್ತು ಅಂದರೆ ಗಂಟೆ ಗಟ್ಟಲೆ ಕುಳಿತುಕೊಳ್ಳುವುದು, ನಿರಂತರ ಒತ್ತಡ, ಮಾನಸಿಕ ಬಳಲಿಕೆ ಮತ್ತು ತನಗಾಗಿ ಸ್ವಲ್ಪ ಸಮಯವನ್ನೂ ಮೀಸಲಿಡುವುದು ಸಾಧ್ಯವಾಗದ ಸ್ಥಿತಿಯ ಬಗ್ಗೆ ಅವರು ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಮನಸ್ಥಿತಿ ತೀರಾ ಹದಗೆಟ್ಟಾಗ ತನ್ನ ಬದುಕನ್ನು
ಉತ್ತಮವಾಗಿಸಲು ಏನನ್ನಾದರೂ ಬದಲಾಯಿಸಲೇ ಬೇಕು ಎನ್ನುವ ಸತ್ಯದ ಅರಿವು ಅವರಿಗಾಯಿತು. ತಕ್ಷಣ ಅವರು SBI ಸಹಾಯಕ ವ್ಯವಸ್ಥಾಪಕಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತನ್ನದೇ ಆದ ವೆಲ್‌ನೆಸ್ ಸ್ಟುಡಿಯೋವನ್ನು ಪ್ರಾರಂಭಿಸಲು ನಿರ್ಧರಿಸಿದಳು.

ಕೆಲಸ ಬಿಡುವುದೇ ಪರಿಹಾರ ಅಲ್ಲ

ಹಾಗಂತ ಪ್ರತಿಯೊಬ್ಬರೂ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಲು ತಮ್ಮ ಕೆಲಸವನ್ನು ಬಿಡುವುದೇ ಮಾರ್ಗ ಅಲ್ಲ, ಎಂದು ಕೂಡಾ ಸ್ನಿಗ್ಧಾ ಎಚ್ಚರಿಸಿದ್ದಾರೆ. ಎಲ್ಲಾ ಕೆಲಸದಲ್ಲಿಯೂ ಬ್ಯುಸಿಯಾಗಿದ್ದುಕೊಂಡೇ ಕೆಲಸ ಮಾಡಬೇಕು ನಿಜ, ಆದರೆ ನಮಗಿಷ್ಟವಾದ ಕೆಲಸ ಮಾಡುವಾಗ ನಮ್ಮ ಮನಸ್ಸು, ದೇಹದ ಬಗ್ಗೆ ಗಮನ ಕೊಡಬಹುದು, ನಮಗಾಗಿ ಸಮಯ ಮೀಸಲಿಡಬಹುದು. ದೈನಂದಿನ ಜೀವನದಲ್ಲಿ ಹೆಚ್ಚಿನ ಶಕ್ತಿ, ಚಲನಶೀಲತೆ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬಹುದು. ಜೀವನವನ್ನು ಸಂಪೂರ್ಣವಾಗಿ ಬದಲಾಯಿಸದೆಯೇ ಇನ್ನೂ ಉತ್ತಮವಾಗಿ ಜೀವನವನ್ನು ಅನುಭವಿಸಬಹುದು ಎನ್ನುವುದು ಸ್ನಿಗ್ದಾ ಮಾತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+