SBI: ಬ್ಯಾಂಕ್‌ನ ಸಾವಿರಾರು ಖಾತೆಗಳ ಮೇಲೆ ಸೈಬರ್ ದಾಳಿ: ಗ್ರಾಹಕರ ಮಾಹಿತಿ ಸೋರಿಕೆ, ಡಾರ್ಕ್ ವೆಬ್‌ನಲ್ಲಿ ಸೇಲ್

ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಹಾಗೂ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದಲ್ಲಿ ಅತಿ ದೊಡ್ಡ ಸೈಬರ್ ಅಟ್ಯಾಕ್ ಆಗಿದೆ. ಅಲ್ಲದೆ ಈ ಸೈಬರ್‌ದಾಳಿಯಲ್ಲಿ ಸಾವಿರಾರು ಜನ ಎಸ್‌ಬಿಐ ಗ್ರಾಹಕರ ಮಾಹಿತಿ ಸೋರಿಕೆಯಾಗಿದ್ದು, ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ವಿಷಯವನ್ನು ಎಸ್‌ಬಿಐ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.

ಸೈಬರ್ ದಾಳಿಯಲ್ಲಿ ಎಸ್‌ಬಿಐ ಬ್ಯಾಂಕಿನ ಗ್ರಾಹಕರ ದಾಖಲೆಗಳನ್ನು ಹ್ಯಾಕರ್‌ಗಳು ಕದ್ದಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಹಿರಂಗಪಡಿಸಿದೆ. ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ, ಡಾರ್ಕ್ ವೆಬ್‌ನಲ್ಲಿ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು (PIF) ಹೊಂದಿರುವ 3,897 ಗ್ರಾಹಕರ ದಾಖಲೆಗಳು ಕಳ್ಳತನವಾಗಿರುವ ಸಾಧ್ಯತೆ ಇದೆ ಎಂದು SBI ತಿಳಿಸಿದೆ. ಆದರೆ, ಈ ಘಟನೆಯಿಂದ ತನ್ನ ಪ್ರಮುಖ ಬ್ಯಾಂಕಿಂಗ್ ಚಟುವಟಿಕೆ, ಆರ್ಥಿಕ ಕಾರ್ಯಕ್ಷಮತೆ ಅಥವಾ ವ್ಯವಹಾರದ ವಿಷಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಎಸ್‌ಬಿಐ ಸ್ಪಷ್ಟಪಡಿಸಿದೆ.

SBI Cyberattack Thousands of Customer Records Suspected to Be Leaked and Sold on Dark Web

ಮುಂದುವರಿದು ಇದೇ ತಿಂಗಳ 16ರಂದು ಗ್ರಾಹಕರ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿರುವ ಶಂಕೆಯ ಬಗ್ಗೆ ಸೈಬರ್ ಬೆದರಿಕೆಗಳ ಮಾಹಿತಿ ನೀಡುವ ಸಂಸ್ಥೆ, ರಕ್ಷಣಾ ಸೈಬರ್ ಸಂಸ್ಥೆ ಮತ್ತು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In)ವು ಈ ವಿಚಾರವಾಗಿ ಎಚ್ಚರಿಕೆ ನೀಡಿದ್ದವು ಎಂದು SBI ತಿಳಿಸಿದೆ.

ಎಸ್‌ಬಿಐ ಪ್ರಕಾರ, ಡಾರ್ಕ್ ವೆಬ್‌ನಲ್ಲಿ ಕಂಡುಬಂದ ಸುಮಾರು 3,75,000 ದಾಖಲೆಗಳ ಪ್ರಾಥಮಿಕ ವಿಶ್ಲೇಷಣೆಯು ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಹೊಂದಿರುವ 3,897 ಎಸ್‌ಬಿಐ ಗ್ರಾಹಕ ದಾಖಲೆಗಳನ್ನು ಗುರುತಿಸಿದೆ. ಬಹಿರಂಗಪಡಿಸಿದ ಮಾಹಿತಿಯಲ್ಲಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗಳು, ಜನ್ಮ ದಿನಾಂಕಗಳು, ಹೆಸರುಗಳು, ಲಿಂಗ, ಇಮೇಲ್ ವಿಳಾಸಗಳು ಮತ್ತು ವಸತಿ ವಿಳಾಸಗಳು ಸೇರಿವೆ ಎಂದು ಹೇಳಲಾಗಿದೆ.

ಇನ್ನು ಈ ರೀತಿ ಸೋರಿಕೆಯಾದ ಮಾಹಿತಿಯಲ್ಲಿ ಬ್ಯಾಂಕ್ ಶಾಖೆಗಳ ವಿವರಗಳು, ಗ್ರಾಹಕರ ಗುರುತಿನ ಸಂಖ್ಯೆಗಳು, ಲೀಡ್ ಐಡಿಗಳು ಮತ್ತು ಸಾಲದ ಅರ್ಜಿಗಳು ಮತ್ತು ಇತರ ಸಂಬಂಧಿತ ಫೈಲ್‌ಗಳಿಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯೂ ಸೇರಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸೋರಿಕೆಯಾದ ಮಾಹಿತಿಯಲ್ಲಿ ಬ್ಯಾಂಕ್ ಶಾಖೆಗಳ ವಿವರಗಳು, ಗ್ರಾಹಕರ ಗುರುತಿನ ಸಂಖ್ಯೆಗಳು, ಲೀಡ್ ಐಡಿಗಳು ಹಾಗೂ ಸಾಲದ ಅರ್ಜಿಗಳು ಮತ್ತು ಇತರ ಸಂಬಂಧಿತ ಫೈಲ್‌ಗಳಿಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯೂ ಸೇರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಘಟನೆಯು ಗ್ರಾಹಕರ ದಾಖಲೆಗಳನ್ನು ಬಹಿರಂಗಪಡಿಸಿದ್ದರೂ, ಇದರಿಂದ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬ್ಯಾಂಕಿನ ಪ್ರಮುಖ ವ್ಯವಹಾರ ಕಾರ್ಯಗಳು ಅಡೆತಡೆಗಳಿಲ್ಲದೆ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಎಸ್‌ಬಿಐ ಹೇಳಿದೆ. ಗುರುತಿಸಲಾದ 3,897 ಗ್ರಾಹಕ ದಾಖಲೆಗಳ ತನಿಖೆ ಮುಂದುವರಿದಂತೆ ಪರಿಸ್ಥಿತಿಯನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

SBI ಮೇಲೆ ಸೈಬರ್ ದಾಳಿ: ಕಾಂಗ್ರೆಸ್ ಖಂಡನೆ

ಇನ್ನು ಭಾರತೀಯ ಸ್ಟೇಟ್ ಬ್ಯಾಂಕ್‌ನ ಖಾತೆಗಳ ಮೇಲೆ ಸೈಬರ್ ಅಟ್ಯಾಕ್ ಆಗಿರುವುದನ್ನು ಕಾಂಗ್ರೆಸ್ ಪಕ್ಷವು ಖಂಡಿಸಿದೆ. 3,897 ಗ್ರಾಹಕರ ಡೇಟಾ ಕಳ್ಳತನವಾಗಿದೆ. ಪ್ರಧಾನಿ ನರೇಂದ್ರ ಮೋದಿ - ಅಮಿತ್ ಶಾ ಸೈಬರ್ ಭದ್ರತೆಯ ಬಗ್ಗೆ ಡೋಲು ಬಾರಿಸಬಹುದು, ಆದರೆ ಈ ಸರ್ಕಾರವು ನಿಮ್ಮ ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿಡಲು ಸಾಧ್ಯವಿಲ್ಲ. ದೇಶದ ಅತಿದೊಡ್ಡ ಬ್ಯಾಂಕ್ SBI ಮೇಲಿನ ಸೈಬರ್ ದಾಳಿ ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

⦿ ಗ್ರಾಹಕರ ಹೆಸರುಗಳು ⦿ ಅವರ ಜನ್ಮ ದಿನಾಂಕ ⦿ ಮೊಬೈಲ್ ಸಂಖ್ಯೆಗಳು ⦿ ಇಮೇಲ್ ವಿಳಾಸಗಳು ⦿ ಮನೆ ವಿಳಾಸಗಳು ⦿ ಸಾಲದ ದಾಖಲೆಗಳು ⦿ ಶಾಖೆ/ಗ್ರಾಹಕ ಗುರುತಿಸುವಿಕೆಗಳು ಈ ಎಲ್ಲಾ ವೈಯಕ್ತಿಕ ಡೇಟಾ ಸೋರಿಕೆಯಾಗಿದೆ ಮತ್ತು ಡಾರ್ಕ್ ವೆಬ್‌ನಲ್ಲಿ ಲಭ್ಯವಿದೆ. ಅಕ್ಟೋಬರ್ 16 ರಂದು ಹ್ಯಾಕಿಂಗ್ ಬಗ್ಗೆ ಎಚ್ಚರಿಕೆ ಪಡೆದಿದ್ದರೂ ಸಹ, ಸರ್ಕಾರವು ನಿದ್ರಿಸುತ್ತಲೇ ಇತ್ತು ಮತ್ತು ಸೈಬರ್ ಭದ್ರತೆಯನ್ನು ವಿಧಿಯ ಕರುಣೆಗೆ ಬಿಟ್ಟಿರುವುದು ಆಶ್ಚರ್ಯಕರವಾಗಿದೆ.

ಸೈಬರ್ ಭದ್ರತೆಯಲ್ಲಿ ಇಂತಹ ಉಲ್ಲಂಘನೆಗಳು ದೇಶದ ಆರ್ಥಿಕತೆ ಮತ್ತು ಭದ್ರತೆ ಎರಡಕ್ಕೂ ಅತ್ಯಂತ ಅಪಾಯಕಾರಿ - ಆದರೆ ಚುನಾವಣಾ ಸಮಯದ ವಾಕ್ಚಾತುರ್ಯದಲ್ಲಿ ಸೋತ ಮೋದಿ-ಶಾ ಕಡಿಮೆ ಕಾಳಜಿ ವಹಿಸಲಿಲ್ಲ. ಮೋದಿ ಸರ್ಕಾರ ಪ್ರತಿಯೊಂದು ವಿಷಯದಲ್ಲೂ ಸಂಪೂರ್ಣ ವಿಫಲವಾಗಿದೆ ಎಂದು ಸಾಬೀತಾಗಿದೆ ಎಂದು ಕಾಂಗ್ರೆಸ್ ಪಕ್ಷವು ಟೀಕಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+