SBI ಖಾತೆಯಿಂದ ಹಣ ತೆಗೆಯುವ ಮುನ್ನ ಈ ಸುದ್ದಿ ನೋಡಿ; ಅಕ್ಟೋಬರ್ 1ರಿಂದ ಹೊಸ ನಿಯಮ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಯಲ್ಲಿ BSBD ಖಾತೆ ಹೊಂದಿರುವ ಗ್ರಾಹಕರಿಗೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಖಾತೆಯಿಂದ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆಯಾಗಿದ್ದು, ಅಕ್ಟೋಬರ್ 1, 2026ರಿಂದ ತಿಂಗಳಿಗೆ ನಾಲ್ಕು ವಿತ್‌ಡ್ರಾಗಳ ಬಳಿಕ ಮಾಡುವ ಹೆಚ್ಚುವರಿ ವಹಿವಾಟುಗಳಿಗೆ ₹15 ಜೊತೆಗೆ GST ಶುಲ್ಕ ವಿಧಿಸಲಾಗುತ್ತದೆ. ಹೊಸ ನಿಯಮದಲ್ಲಿ ಡಿಜಿಟಲ್ ವಹಿವಾಟುಗಳನ್ನೂ ಉಚಿತ ವಿತ್‌ಡ್ರಾ ಮಿತಿಯ ಲೆಕ್ಕಕ್ಕೆ ಸೇರಿಸಲಾಗುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಯಲ್ಲಿ ತಿಂಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಬಾರಿ ಹಣ ಹಿಂಪಡೆದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಹೊಸ ನಿಯಮದ ಪ್ರಕಾರ, BSBD ಖಾತೆದಾರರಿಗೆ ಪ್ರತಿ ತಿಂಗಳು ಮೊದಲ ನಾಲ್ಕು ವಿತ್‌ಡ್ರಾಗಳು ಉಚಿತವಾಗಿರುತ್ತವೆ. ನಾಲ್ಕು ಉಚಿತ ವಿತ್‌ಡ್ರಾಗಳ ಮಿತಿ ಪೂರ್ಣಗೊಂಡ ನಂತರ ಮಾಡುವ ಪ್ರತಿ ಹೆಚ್ಚುವರಿ ವಿತ್‌ಡ್ರಾಗೆ ₹15 ಜೊತೆಗೆ ಅನ್ವಯವಾಗುವ GST ಪಾವತಿಸಬೇಕಾಗುತ್ತದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ, ನಾಲ್ಕು ಉಚಿತ ವಹಿವಾಟುಗಳ ಲೆಕ್ಕಾಚಾರದಲ್ಲಿ ಡಿಜಿಟಲ್ ವಹಿವಾಟುಗಳನ್ನೂ ಪರಿಗಣಿಸಲಾಗುತ್ತದೆ.

BSBD ಖಾತೆ ಎಂದರೇನು?
Basic Savings Bank Deposit (BSBD) ಖಾತೆಯನ್ನು ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವ ಅಗತ್ಯವಿಲ್ಲದ ಮೂಲಭೂತ ಉಳಿತಾಯ ಖಾತೆಯಾಗಿ SBI ನೀಡುತ್ತದೆ. ಸಾಮಾನ್ಯವಾಗಿ ಬ್ಯಾಂಕಿಂಗ್ ಸೇವೆಗಳನ್ನು ಕಡಿಮೆ ಶುಲ್ಕದಲ್ಲಿ ಪಡೆಯಲು ಬಯಸುವ ಗ್ರಾಹಕರಿಗೆ ಈ ಖಾತೆ ಅನುಕೂಲಕರವಾಗಿದೆ.
BSBD ಖಾತೆಯ ಪ್ರಮುಖ ಸೌಲಭ್ಯಗಳು:
* ಮೂಲ RuPay ATM-cum-Debit Card ನೀಡಲಾಗುತ್ತದೆ.
* ಕಾರ್ಡ್‌ಗೆ ವಾರ್ಷಿಕ ನಿರ್ವಹಣಾ ಶುಲ್ಕ ಇರುವುದಿಲ್ಲ.
* ATM ಹಾಗೂ ಬ್ಯಾಂಕ್ ಶಾಖೆಯ ಮೂಲಕ ಹಣ ಹಿಂಪಡೆಯಬಹುದು.
* ಈ ಖಾತೆಗೆ ಚೆಕ್‌ಬುಕ್ ಸೌಲಭ್ಯ ಇರುವುದಿಲ್ಲ.
* NEFT, RTGS ಸೇರಿದಂತೆ ಎಲೆಕ್ಟ್ರಾನಿಕ್ ಕ್ರೆಡಿಟ್‌ಗಳಿಗೆ ಶುಲ್ಕವಿಲ್ಲ.
* ನಿಷ್ಕ್ರಿಯ ಖಾತೆಯನ್ನು ಪುನಃ ಸಕ್ರಿಯಗೊಳಿಸಲು ಶುಲ್ಕವಿಲ್ಲ.
BSBD ಖಾತೆ ತೆರೆಯಲು ಪ್ರಮುಖ ಷರತ್ತು
SBIಯಲ್ಲಿ BSBD ಖಾತೆ ಹೊಂದಿರುವವರು ಮತ್ತೊಂದು ಉಳಿತಾಯ ಖಾತೆಯನ್ನು ಹೊಂದಲು ಸಾಧ್ಯವಿಲ್ಲ. ಈಗಾಗಲೇ SBIಯಲ್ಲಿ Savings Account ಹೊಂದಿರುವವರು BSBD ಖಾತೆ ತೆರೆದರೆ, 30 ದಿನಗಳೊಳಗೆ ಹಳೆಯ ಉಳಿತಾಯ ಖಾತೆಯನ್ನು ಮುಚ್ಚಬೇಕಾಗುತ್ತದೆ. BSBD ಖಾತೆಯಿಂದ ತಿಂಗಳಲ್ಲಿ ಹಲವು ಬಾರಿ ಹಣ ಹಿಂಪಡೆಯುವವರಾಗಿದ್ದರೆ, ಅಕ್ಟೋಬರ್ 1ರಿಂದ ನಾಲ್ಕು ಉಚಿತ ವಿತ್‌ಡ್ರಾಗಳ ಮಿತಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ನಾಲ್ಕು ವಿತ್‌ಡ್ರಾಗಳ ನಂತರದ ಪ್ರತಿಯೊಂದು ಹೆಚ್ಚುವರಿ ವಹಿವಾಟಿಗೆ ₹15 ಮತ್ತು GST ಶುಲ್ಕ ಬೀಳಬಹುದು.


Click it and Unblock the Notifications
