"ಈಗ ಪ್ರಧಾನಿ ಹುದ್ದೆಗೂ ರಾಜೀನಾಮೆ ನೀಡು ದಿಪ್ಕೆ": ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಕಾಕ್ರೋಚ್ ಜನತಾ ಪಾರ್ಟಿ ಅಣಕು ಅಭಿಯಾನ
ಇತ್ತೀಚೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಯುವ ಜನತೆಗೆ 'ಕಾಕ್ರೋಚ್' (ಜಿರಳೆ) ಎಂಬ ಪದ ಬಳಕೆ ಮಾಡಿದ್ದಾರೆ ಎಂದು, ಆ ಪದವನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಹುಟ್ಟಿಕೊಂಡ 'ಕಾಕ್ರೋಚ್ ಜನತಾ ಪಾರ್ಟಿ'ಈಗ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿದೆ.
ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ಬೀದಿಗಿಳಿದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿ, ರಾಜೀನಾಮೆ ಪಡೆಯುವವರೆಗೂ ಹೋರಾಡಿದ ಈ ಜೆನ್- ಝೀ(Gen-Z) ಯುವಕರ ಈ ಪಾರ್ಟಿ ಸುದ್ದಿಯಾಗಿತ್ತು. ಆದ್ರೆ ಇದೀಗ ಈ ಕಾಂಕ್ರೋಚ್ ಪಕ್ಷದ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಸಂಚಾಲಕ ಅಭಿಜೀತ್ ದಿಪ್ಕೆ ಮಾಡಿರುವ ಹೊಸ ಟ್ವೀಟ್ ಮತ್ತು ಅದಕ್ಕೆ ನೆಟ್ಟಿಗರು ನೀಡುತ್ತಿರುವ ಪ್ರತಿಕ್ರಿಯೆಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಗಿರಿಜನ ಮಕ್ಕಳ ಸಾವು ಮತ್ತು ಅಭಿಜೀತ್ ದಿಪ್ಕೆ ಭೇಟಿ
ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಇತ್ತೀಚೆಗೆ ಕಲುಷಿತ ನೀರು ಹಾಗೂ ಸೋಂಕಿನಿಂದಾಗಿ 30ಕ್ಕೂ ಹೆಚ್ಚು ಗಿರಿಜನ ಅಂದ್ರೆ ಟ್ರೈಬಲ್ ಮಕ್ಕಳು ಸಾವನ್ನಪ್ಪಿದ್ದರು. ಈ ಘಟನೆಯನ್ನ ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ ಅಭಿಜೀತ್ ದಿಪ್ಕೆ ನೇರವಾಗಿ ಬಾಲಾಘಾಟ್ ಏಜೆನ್ಸಿ ಪ್ರದೇಶಕ್ಕೆ ತೆರಳಿ ಸಂತ್ರಸ್ತ ಕುಟುಂಬಗಳನ್ನ ಭೇಟಿಯಾಗಿದ್ದರು. ಈ ದುರಂತಕ್ಕೆ ನೈತಿಕ ಹೊಣೆ ಹೊತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದಿಪ್ಕೆ ಆಗ್ರಹಿಸಿದ್ದರು.
ಮಧ್ಯಪ್ರದೇಶ ಸಿಎಂ ಹೆಸರಲ್ಲಿ ಅಣಕು ರಾಜೀನಾಮೆ ಪ್ರಕಟಿಸಿದ ದಿಪ್ಕೆ
ತಮ್ಮ ಆಗ್ರಹಕ್ಕೆ ಸಿಎಂ ಮೋಹನ್ ಯಾದವ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ದಿಪ್ಕೆ ವಿನೂತನವಾಗಿ ಪ್ರತಿಭಟಿಸಿದರು. ಮುಖ್ಯಮಂತ್ರಿಗಳ ಅಧಿಕೃತ ಲೆಟರ್‌ಹೆಡ್ ಅನ್ನು ಹೋಲುವ ಪತ್ರವೊಂದನ್ನು ಸೃಷ್ಟಿಸಿದ ಅವರು, "ಈ ಘಟನೆಗೆ ನಾಚಿಕೆಪಡುತ್ತಿದ್ದೇನೆ. ಬಾಲಾಘಾಟ್ ಗಿರಿಜನ ಮಕ್ಕಳ ಸಾವಿಗೆ ಹೊಣೆಹೊತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಅಣಕು ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಬರೆದಂತೆ ಟ್ವಿಟರ್‌ನಲ್ಲಿ ಹಂಚಿಕೊಂಡರು.
ಜೊತೆಗೆ, "ಮಧ್ಯಪ್ರದೇಶದ ಜನತೆಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು, ಆದರೆ ಆ ಅವಕಾಶವನ್ನ ಬಳಸಿಕೊಳ್ಳುವಲ್ಲಿ ನಾನು ಸಂಪೂರ್ಣ ವಿಫಲನಾಗಿದ್ದೇನೆ" ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು. 'ಮುಖ್ಯಮಂತ್ರಿ ಅಭಿಜೀತ್ ದಿಪ್ಕೆ' ಹೆಸರಿನ ಈ ಅಣಕು ರಾಜೀನಾಮೆ ಪತ್ರ ಕ್ಷಣಾರ್ಧದಲ್ಲಿ ಟ್ರೆಂಡ್ ಆಯ್ತು.
Yes! Indeed shameful beyond words.
— Florence Guite (@FlorenceGuite_) September 14, 2026
Shame on Prime Minster @abhijeet_dipke for not responding to this reporter.
He should immediately resign for failing to respond to a reporter. #ResignPMAbhijeet https://t.co/GPSeUAUZeU
ಯೋಗಿ ಆದಿತ್ಯನಾಥ್ ವಿಡಿಯೋ ವೈರಲ್
ದಿಪ್ಕೆ ಅವರ ಈ ಅಣಕು ರಾಜೀನಾಮೆ ಪತ್ರ ವೈರಲ್ ಆಗುತ್ತಿರುವಾಗಲೇ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪತ್ರಿಕಾಗೋಷ್ಠಿಯ ವಿಡಿಯೋವೊಂದು ವೈರಲ್ ಆಯ್ತು. ಇದರಲ್ಲಿ ಸಿಎಂ ಯೋಗಿ ಅವರು ತಾವು ಹೇಳಬೇಕಾದ್ದನ್ನು ಹೇಳಿ ಎದ್ದು ಹೋಗುವಾಗ, ಮಹಿಳಾ ಪತ್ರಕರ್ತೆಯೊಬ್ಬರು 'ನಮ್ಮ ಪ್ರಶ್ನೆಗಳಿಗೂ ಉತ್ತರಿಸಿ' ಎಂದು ಡಿಮ್ಯಾಂಡ್ ಮಾಡುತ್ತಿರುವ ದೃಶ್ಯವಿತ್ತು.
ನೆಟ್ಟಿಗರು ಈ ವಿಡಿಯೋವನ್ನು ದಿಪ್ಕೆ ಅವರ ಅಣಕು ರಾಜೀನಾಮೆಗೆ ತಳುಕುಹಾಕಿ ತಮಾಷೆ ಮಾಡಲು ಶುರುಮಾಡಿದರು. ಒಬ್ಬರು "ಮುಖ್ಯಮಂತ್ರಿ ದಿಪ್ಕೆ ರಾಜೀನಾಮೆ ನೀಡಲೇಬೇಕು" ಎಂದು ಈ ವಿಡಿಯೋಗೆ ಕಮೆಂಟ್ ಮಾಡಿದರೆ, ಮತ್ತೊಬ್ಬರು ಇದನ್ನು ರೀ-ಟ್ವೀಟ್ ಮಾಡುತ್ತಾ, "ಕೇವಲ ಸಿಎಂ ಸ್ಥಾನವಷ್ಟೇ ಅಲ್ಲ, ಈ ಬಾರಿ ಪ್ರಧಾನಿ ಹುದ್ದೆಗೂ ದಿಪ್ಕೆ ರಾಜೀನಾಮೆ ನೀಡಬೇಕು" ಎಂದು ಕಾಲೆಳೆದಿದ್ದಾರೆ. ಹೀಗೆ ಪ್ರತಿಯೊಬ್ಬರೂ ತಮಗೆ ತೋಚಿದ ರೀತಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಅಣಕು ಶೈಲಿಯಲ್ಲೇ ವ್ಯಂಗ್ಯವಾಡುತ್ತಿದ್ದಾರೆ.
ಜೆನ್-ಝೀ ಯುವಕರು ತಂದಿರುವ ಈ ಹೊಸ ಅಣಕು ಪ್ರತಿಭಟನಾ ಶೈಲಿಯು ದೇಶದ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.


Click it and Unblock the Notifications
