Get Updates
Get notified of breaking news, exclusive insights, and must-see stories!

ದೂರದರ್ಶನದ ದಂತಕಥೆ ಇನ್ನಿಲ್ಲ, ಸರಳ ಮಹೇಶ್ವರಿ ಅಭಿಮಾನಿಗಳ ಕಂಬನಿ... Sarla Maheshwari

ದೂರದರ್ಶನ ಎಂಬುದು ಭಾರತೀಯರ ಭಾವನೆ ಜೊತೆಗೆ ಬೆರೆತು ಹೋಗಿದ್ದು, ಹತ್ತಾರು ವರ್ಷಗಳಿಂದಲೂ ದೂರದರ್ಶನಕ್ಕೆ ಗೌರವ ತೋರುತ್ತಾ ಹಾಗೂ ಪ್ರೀತಿ ಕೊಡುತ್ತಾ ಬಂದಿದ್ದಾರೆ ಶತಕೋಟಿ ಭಾರತೀಯರು. ಈಗಿನ ಆಧುನಿಕ ಕಾಲಘಟ್ಟದಲ್ಲಿ ಸಾವಿರಾರು ಟಿವಿ ಚಾನಲ್ ಶುರುವಾಗಿದ್ದರೂ, ಕೆಲವು ದಶಕದ ಹಿಂದೆ ಎಲ್ಲರಿಗೂ ಆಸರೆ ಆಗಿದ್ದೇ ದೂರದರ್ಶನ. ಹೀಗಿದ್ದಾಗ ದೂರದರ್ಶನ ಮೂಲಕ ವಾರ್ತೆ ಓದಲು ಬರುತ್ತಿದ್ದ ನ್ಯೂಸ್ ಆಂಕರ್‌ಗಳಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದರು. ಅವರನ್ನು ಜನರು ಈಗಲೂ ಮರೆತಿಲ್ಲ, ಮುಂದೆ ಕೂಡ ಮರೆಯಲ್ಲ. ಹೀಗಿದ್ದಾಗ ದೂರದರ್ಶನದ ಖ್ಯಾತ ಹಾಗೂ ಮಾಜಿ ನ್ಯೂಸ್ ಆಂಕರ್ ಕೋಟಿ ಕೋಟಿ ಅಭಿಮಾನಿಗಳನ್ನು ಇಂದು ಅಲಿದ್ದಾರೆ.

ಅದು 1976 ಅಂದರೆ ಸರಿಯಾಗಿ 40 ವರ್ಷಗಳ ಹಿಂದೆ ಜನಪ್ರಿಯ ನಿರೂಪಕಿಯೊಬ್ಬರ ಆಗಮನ ಆಗಿತ್ತು. ಆಗಿನ್ನೂ ದೂರದರ್ಶನಕ್ಕೆ ಸ್ಕ್ರಿಪ್ಟ್ ರೈಟರ್ ಆಗಿ ಎಂಟ್ರಿ ಕೊಟ್ಟವರು, ಮುಂದೆ ವಾರ್ತಾ ವಾಚಕಿ ಎಂದರೆ ನ್ಯೂಸ್ ಆಂಕರ್ ಆಗಿ ಇಡೀ ಇಂಡಿಯಾ ತಿರುಗಿ ನೋಡುವಂತೆ ಗಮನ ಸೆಳೆದರು. ಜನಪ್ರಿಯ ನಿರೂಪಕಿ ಸರಳ ಮಹೇಶ್ವರಿ ಹೀಗೆ ಸುಮಾರು 3 ದಶಕ ಎಂದರೆ, 30 ವರ್ಷಗಳ ಕಾಲ ದೂರದರ್ಶನಕ್ಕೆ ಸೇವೆ ಸಲ್ಲಿಸಿ ಭಾರತೀಯರ ಮನಸ್ಸು ಗೆದ್ದರು. ಆದರೆ ಇಂದು ಅವರು ತಮ್ಮ ಅಭಿಮಾನಿಗಳನ್ನು ಅಗಲಿದ್ದು, ನಿರೂಪಕಿ ಸರಳ ಮಹೇಶ್ವರಿ ಅವರು ಇದೀಗ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

Sarla Maheshwari

ಭಾರತೀಯರ ನೆಚ್ಚಿನ ನಿರೂಪಕಿ ಸರಳ ಮಹೇಶ್ವರಿ

ದೂರದರ್ಶನ ನ್ಯೂಸ್ ಎಂದರೆ ಆಗಿನ ಕಾಲದಲ್ಲಿ ಎಲ್ಲಾ ಕೆಲಸ ಬಿಟ್ಟು ಟಿವಿ ಎದುರು ಕೂರುವ ಕೋಟಿ ಕೋಟಿ ಜನರು ಇದ್ದರು. ಏಕೆಂದರೆ ಸುದ್ದಿ ತಿಳಿಯಲು ಆಗ ಇದ್ದ ಒಂದೇ ಒಂದು ಚಾನಲ್ ಎಂದರೆ ಅದು ದೂರದರ್ಶನ ಮಾತ್ರ. ಹೀಗಿದ್ದಾಗ ದೂರದರ್ಶನದ ತೆರೆ ಮೇಲೆ ನಿರೂಪಕಿ ಸರಳ ಮಹೇಶ್ವರಿ ಅವರು ನ್ಯೂಸ್ ಓದುತ್ತಿದ್ದರೆ, ಭಾರತೀಯರು ಕಣ್ಣು ಮಿಟುಕಿಸದೆ ನೋಡುತ್ತಿದ್ದ ಸಮಯ ಇತ್ತು. ಸುದ್ದಿಗೆ ಸೊಬಗು ಮತ್ತು ಸರಳತೆ ತುಂಬುವ ಜೊತೆಯಲ್ಲೇ ಜೀವಂತಿಕೆ ಕೊಡುತ್ತಿದ್ದರು ಸರಳ ಮಹೇಶ್ವರಿ ಅವರು.

ಈ ಕಾರಣಕ್ಕೆ ಕೋಟಿ ಕೋಟಿ ಅಭಿಮಾನಿಗಳು ಅವರನ್ನು ಮೆಚ್ಚಿಕೊಂಡಿದ್ದರು. ಹಾಗೇ ಇಂದಿಗೂ ನಿರೂಪಕಿ ಸರಳ ಮಹೇಶ್ವರಿ ಅವರ ಹಳೆಯ & ನ್ಯೂಸ್ ಓದುವ ವಿಡಿಯೋಗಳು, ಆಗಾಗ ಸೋಷಿಯಲ್ ಮೀಡಿಯಾಗಳ ಮೂಲಕ ವೈರಲ್ ಆಗುತ್ತಿದ್ದವು. ಆದರೆ ಇಂದು ಅವರು ನಿಧನರಾಗಿದ್ದು ಭಾರತೀಯರು ಕಂಬನಿ ಮಿಡಿದು & ಸಂತಾಪ ಸೂಚಿಸಿದ್ದಾರೆ. ಅಲ್ಲದೇ ವಿದೇಶದಲ್ಲೂ ಅಪಾರ ಖ್ಯಾತಿ ಗಳಿಸಿರುವ ನಿರೂಪಕಿ ಸರಳ ಮಹೇಶ್ವರಿ ಅವರಿಗೆ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ದೊಡ್ಡ ದೊಡ್ಡ ಘಟನೆಗಳ ನಿರೂಪಣೆ

ನಿರೂಪಕಿ ಸರಳ ಮಹೇಶ್ವರಿ ಅವರು ಭಾರತೀಯ ರಾಜಕೀಯ ಸೇರಿದಂತೆ ಹಲವು ಪ್ರಮುಖ ಘಟನೆಗಳನ್ನ ನಿರೂಪಣೆ ಮಾಡಿದ್ದರು. 1991ರ ಸಮಯದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಬಗ್ಗೆ ಬಂದ ಆಘಾತಕಾರಿ ಸುದ್ದಿಯನ್ನು ಪ್ರಕಟಿಸಿದ್ದು, ಇದರ ಜೊತೆಗೆ 1997ರ ಸಮಯದಲ್ಲಿ ಮದರ್ ತೆರೇಸಾ ಅವರ ಅಂತ್ಯಕ್ರಿಯೆ ಸುದ್ದಿ ನಿರೂಪಣೆ ಕೂಡ ಪ್ರಮುಖ ಘಟನೆಗಳಲ್ಲಿ ಸೇರಿವೆ. 1984ರಲ್ಲಿ ಅವರು ಮದುವೆಯನ್ನ ಕೂಡ ಆಗಿದ್ದರು, ಬಿಬಿಸಿ ವಾಹಿನಿಗೆ ಕೂಡ ಕೆಲಸ ಮಾಡಿದ ಅನುಭವ ಅವರಿಗೆ ಇತ್ತು. 1988ರ ಸಮಯಕ್ಕೆ ಮತ್ತೆ ಅವರು ದೂರದರ್ಶನಕ್ಕೆ ಮರಳಿ ಸೇವೆ ಆರಂಭಿಸಿ 2005 ತನಕವೂ ಸೇವೆ ಸಲ್ಲಿಸಿ ಆ ನಂತರ ಕುಟುಂಬದ ಜೊತೆಗೆ ಸಮಯ ಕಳೆಯಲು ರಾಜೀನಾಮೆ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+