• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಗೆಲುವನ್ನು ಕಾಂಗ್ರೆಸ್‌ ಪ್ರದರ್ಶನಕ್ಕೆ ಹೋಲಿಸಿದ ಸಂಜಯ್ ಝಾ

|

ನವದೆಹಲಿ, ಜನವರಿ 19: ಆಸ್ಟ್ರೇಲಿಯಾದಲ್ಲಿ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವುದನ್ನು ಕಾಂಗ್ರೆಸ್ ತನ್ನ ರಾಜಕೀಯ ಭವಿಷ್ಯದೊಂದಿಗೆ ಸಮೀಕರಿಸಿಕೊಂಡಿದೆ. ಈ ಗೆಲುವು ಕಾಂಗ್ರೆಸ್‌ಗೆ ಎಲ್ಲೋ ಒಂದು ಕಡೆ ಪಾಠವಾಗಲಿದೆ ಮತ್ತು ಭಾರತೀಯ ಕ್ರಿಕೆಟ್ ತಂಡದಂತೆ ಮೇಲೇಳಲಿದೆ ಎಂದು ಪಕ್ಷದ ಮುಖಂಡ ಸಂಜಯ್ ಝಾ ಹೇಳಿದ್ದಾರೆ.

'ಅವರು ಮೊದಲ ಟೆಸ್ಟ್‌ನಲ್ಲಿ ಕೇವಲ 36ಕ್ಕೆ ಆಲೌಟ್ ಆಗಿದ್ದರು. ಪುಟಿದೆದ್ದ ರೀತಿ ಕಾಲ್ಪನಿಕ ಕಥೆಯಂತೆ ಇತ್ತು. ನನ್ನ ಪುರಾತನ ಪಕ್ಷಕ್ಕೆ ಸ್ಫೂರ್ತಿದಾಯಕ ಸಂದೇಶ ಇಲ್ಲಿದೆ. ನಮಗೆ 44 ಸಿಕ್ಕಿತ್ತು' ಎಂದು ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 44 ಸೀಟುಗಳಲ್ಲಿ ಮಾತ್ರ ಗೆದ್ದಿದ್ದನ್ನು ನೆನಪಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ, ಮೋದಿ ಪ್ರಶಂಸೆಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ, ಮೋದಿ ಪ್ರಶಂಸೆ

44 ಸೀಟುಗಳಷ್ಟೇ ಸಿಕ್ಕಿತ್ತು ಎಂದು ನಾವು ದೃತಿಗೆಡುವುದು ಅಗತ್ಯವಿಲ್ಲ. ಭಾರತ ತಂಡ ಹೀನಾಯ ಪ್ರದರ್ಶನದ ಬಳಿಕ ಎದ್ದು ನಿಂತಂತೆ ಕಾಂಗ್ರೆಸ್ ಕೂಡ ಎದ್ದು ನಿಲ್ಲಬಹುದು ಎಂದು ಅವರು ಹೇಳಿದ್ದಾರೆ. 'ಎದ್ದೇಳಿ, ಕೊಳೆ ಮತ್ತು ದೂಳು ಕೊಡವಿಹಾಕಿ ಮತ್ತು ಹೋರಾಡಿ. ಭೂತಕಾಲದಲ್ಲಿ ಆಗಿದ್ದರ ಬಗ್ಗೆ ಅಳುವುದು ಮತ್ತು ಪ್ರಲಾಪಿಸುವುದನ್ನು ನಿಲ್ಲಿಸಿ' ಎಂದು ಸಂಜಯ್ ಝಾ, ಕಾಂಗ್ರೆಸ್ಸಿಗರಿಗೆ ಉತ್ಸಾಹ ತುಂಬಿದ್ದಾರೆ.

ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರರಾಗಿದ್ದ ಸಂಜಯ್ ಝಾ, 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 44 ಸೀಟುಗಳಲ್ಲಿ ಜಯಗಳಿಸಿದ್ದನ್ನು ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೆಯ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 36 ರನ್‌ಗಳಿಗೆ ಆಲೌಟ್ ಆಗಿದ್ದನ್ನು ಹೋಲಿಸಿದ್ದಾರೆ.

English summary
Congress leader Sanjay Jha compares Indian cricket team's comeback against Australia after bowled out for 36 runs to party's 44 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X