ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ಕಾನೂನು; ಸೌರವ್ ಗಂಗೂಲಿ ಮಗಳನ್ನು ಎಳೆ ತಂದ ವಿರೋಧಿಗಳು!

|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ರಾಷ್ಟ್ರಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಇಂದು ಮತ್ತಷ್ಟು ಬಿರುಸು ಪಡೆದುಕೊಂಡಿವೆ. ಹೊಸ ತಿದ್ದುಪಡಿ ಕಾನೂನನ್ನು ವಿರೋಧಿಸಿ, ಎಡಪಕ್ಷಗಳು, ಮುಸ್ಲಿಂ ಸಂಘಟನೆಗಳು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಾ, ನಮಗೆ ಕಾಯ್ದೆ ಬೇಡ ಎಂದು ಹೇಳುತ್ತಿದ್ದಾರೆ.

ಆದರೆ, ಕಾಯ್ದೆಯನ್ನು ವಿರೋಧಿಸುವವರು ಕೆಲವು ಕುತಂತ್ರಗಳನ್ನೂ ಕೂಡ ಮಾಡುತ್ತಾ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಪರ್ಣಾ ಎಂಬುವವರು ಕಾಯ್ದೆ ವಿರೋಧಿಸುವ ಬರದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಮಗಳನ್ನು ಎಳೆ ತಂದು ವಿವಾದಕ್ಕೆ ಕಾರಣವಾಗಿದ್ದಾರೆ.

ವೈರಲ್ ಆದ ಸನಾ ಗಂಗೂಲಿ

ವೈರಲ್ ಆದ ಸನಾ ಗಂಗೂಲಿ

ಸೌರವ ಗಂಗೂಲಿ ಅವರ 18 ವರ್ಷದ ಮಗಳು ಸನಾ ಗಂಗೂಲಿ. ಸನಾ ಗಂಗೂಲಿ ಇನ್ಸ್ಟಾಗ್ರಾಮ್ ನಲ್ಲಿ ಕ್ರಿಯಾಶೀಲವಾಗಿದ್ದಾರೆ. ಇತ್ತ ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವ್ಯಾಪಕವಾದ ಪ್ರತಿಭಟನೆಗಳು ನಡೆಯುತ್ತಿವೆ. ಕಿಡಗೇಡಿಗಳು ಇದೇ ಸಮಯವನ್ನು ದುರುಪಯೋಗ ಪಡಿಸಿಕೊಂಡು ಸನಾ ಗಂಗೂಲಿ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್‌ ಒಂದನ್ನು ಹಾಕಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇದು ಟ್ವೀಟರ್ ಹಾಗೂ ಫೇಸ್‌ಬುಕ್ ನಲ್ಲಿ ವೈರಲ್ ಆಗಿದೆ. ಹೊಸ ಕಾಯ್ದೆ ವಿರೋಧಿಗಳು ಇದನ್ನೇ ಅಸ್ತ್ರ ಮಾಡಿಕೊಂಡು ಕೇಂದ್ರ ಸರ್ಕಾರಕ್ಕೆ ವಾಗ್ದಾಳಿ ನಡೆಸಿದ್ದಾರೆ.

ಸೌರವ್ ಗಂಗೂಲಿ ಬಿಜೆಪಿ ಸೇರ್ತಾರಾ? ಶಾ ಭೇಟಿ ಬಳಿಕ ದಾದಾ ಏನಂದ್ರು?ಸೌರವ್ ಗಂಗೂಲಿ ಬಿಜೆಪಿ ಸೇರ್ತಾರಾ? ಶಾ ಭೇಟಿ ಬಳಿಕ ದಾದಾ ಏನಂದ್ರು?

ಪೋಸ್ಟ್‌ ನಲ್ಲಿ ಏನಿತ್ತು?

ಪೋಸ್ಟ್‌ ನಲ್ಲಿ ಏನಿತ್ತು?

ಸನಾ ಗಂಗೂಲಿ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪೌರತ್ವ ತಿದ್ದುಪಡಿ ಮಸೂದೆಯನ್ನು ಖಂಡಿಸಿ ಪೋಸ್ಟ್ ಹಾಕಲಾಗಿದೆ. ಇದಕ್ಕೆ ಖುಸ್ವಂತ್ ಸಿಂಗ್ ಅವರ ಎಂಡ್ ಆಫ್ ಇಂಡಿಯಾ ಪುಸ್ತಕದಲ್ಲಿನ ಅಭಿಪ್ರಾಯವನ್ನು ಉಲ್ಲೇಖಿಸಲಾಗಿದೆ. 'ಮೂರ್ಖರ ಸ್ವರ್ಗದಲ್ಲಿ ಧ್ವನಿ ಕಳೆದುಕೊಂಡವರನ್ನು ಸಾಯಿಸಲಾಗುತ್ತದೆ. ಅಲ್ಲಿ ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ, ಸತ್ಯ ಹೇಳುವವರಿಗೆ ಬೆಲೆ ಇಲ್ಲ. ಅವರು ಹೇಳಿದಂತೆ ಬದುಕು ನಡೆಸಬೇಕಾಗುತ್ತದೆ. ಏನೇ ಮಾಡಿದರೂ ಕಡೆಗೆ ಜೈ ಶ್ರೀರಾಮ ಎಂದು ಘೋಷಣೆ ಕೂಗಿ ಮುಚ್ಚಿಹಾಕುತ್ತಾರೆ' ಎಂದು ಪೋಸ್ಟ್ ಹಾಕಲಾಗಿದೆ. ಇದನ್ನೇ ಪೌರತ್ವ ಕಾಯ್ದೆ ವಿರೋಧಿಸುವವರು ಟ್ವೀಟರ್ ಫೇಸ್‌ಬುಕ್ ನಲ್ಲಿ ಭರ್ಜರಿ ಓಡಿಸಿದ್ದಾರೆ.

"'ಇದರಿಂದ ದೂರ ಇರು ಸನಾ" ಗಂಗೂಲಿ ಸಲಹೆ

ಸನಾ ಗಂಗೂಲಿದು ಎನ್ನಲಾದ ಈ ಪೋಸ್ಟ್‌ ವಿವಾದವಾಗುತ್ತಿದ್ದಂತೆ ಸ್ವತಂ ಸೌರವ್ ಗಂಗೂಲಿ ಅವರು ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಏಕೆಂದರೆ ಅವರು ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ವಿವಾದ ತನ್ನ ಮೈಮೇಲೆ ಸುತ್ತಿಕೊಳ್ಳಬಹುದು ಎಂದು ತೆರೆ ಎಳೆದಿದ್ದಾರೆ. 'ಇಂತಹ ವಿವಾದಗಳಿಂದ ದೂರ ಇರು ಸನಾ. ಸನಾ ಹೆಸರಿನಲ್ಲಿ ಹಾಕಿರುವ ಪೋಸ್ಟ್‌ ನಿಜವಲ್ಲ. ಸನಾ ಇನ್ನೂ ಚಿಕ್ಕವಳು. ರಾಜಕೀಯದ ಇಂತಹ ವಿಷಯಗಳನ್ನು ತಿಳಿದುಕೊಳ್ಳಲು' ಎಂದು ಟ್ವೀಟ್ ಮಾಡಿ, ವಿವಾದಕ್ಕೆ ತೆರೆ ಎಳೆದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಹೊತ್ತಿಸಿದ 'ಪಂಜಿ'ಗೆ ದೆಹಲಿ ಧಗಧಗಪೌರತ್ವ ತಿದ್ದುಪಡಿ ಕಾಯ್ದೆ ಹೊತ್ತಿಸಿದ 'ಪಂಜಿ'ಗೆ ದೆಹಲಿ ಧಗಧಗ

ನೆಟ್ಟಿಗರಿಂದ ಅಸಮಾಧಾನ

ನೆಟ್ಟಿಗರಿಂದ ಅಸಮಾಧಾನ

ಈ ಕುರಿತು ಟ್ವೀಟ್ಟಿಗರು ಪರ ವಿರೋಧ ವ್ಯಕ್ತಪಡಿಸಿದ್ದರೆ, ಒಬ್ಬ ತಂದೆ ಆಗಿ ಗಂಗೂಲಿ ಅವರು ಸರಿಯಾಗಿ ತಿಳಿ ಹೇಳಿದ್ದಾರೆ. ಅವರೊಬ್ಬ ಮಾದರಿ ತಂದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಬೇರೆಯವರ ಮಕ್ಕಳನ್ನು ಬಲಿ ಕೊಡುವುದನ್ನು ನಿಲ್ಲಿಸಬೇಕು ಎಂದು ಫೇಕ್ ಪೋಸ್ಟ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲೂ ಕೂಡ ಹಲವರು ನೀರಂತರವಾಗಿ ಪೋಸ್ಟ್‌ಗಳನ್ನು ಹಾಕುವುದನ್ನು ಮುಂದುವರೆಸಿದ್ದಾರೆ.

English summary
Sana Ganguly Instagram Fake Post Goes Viral: Sourav Says Its Fake
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X