ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‌ ಪುತ್ರನ ಬಂಧನ

Subscribe to Oneindia Kannada

ದೆಹಲಿ, ಅಕ್ಟೋಬರ್ 24: ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್‌ ಪುತ್ರ ಸಯ್ಯದ್ ಶಾಹಿದ್ ಯೂಸುಫ್‌ನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ದ ಅಧಿಕಾರಿಗಳು ಬಂಧಿಸಿದ್ದಾರೆ. 2011ರ ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಯೂಸೂಫ್ ನನ್ನು ಬಂಧಿಸಲಾಗಿದೆ.

ಯೂಸುಫ್ ಜಮ್ಮು ಮತ್ತು ಕಾಶ್ಮೀರದ ಕೃಷಿ ಇಲಾಖೆ ಉದ್ಯೋಗಿಯಾಗಿದ್ದಾನೆ. ತಂದೆ ಹಾಗೂ ಇನ್ನೋರ್ವ ಉಗ್ರ ಐಜಾಜ್ ಅಹಮದ್ ಭಟ್ ರಿಂದ ಹಣ ಪಡೆದುಕೊಂಡಿದ್ದರು ಎಂಬ ಆರೋಪದಲ್ಲಿ ಯೂಸುಫ್ ರನ್ನು ಎನ್ಐಎ ಕಚೇರಿಗೆ ಕರೆಸಿಕೊಳ್ಳಲಾಗಿತ್ತು. ಈ ವೇಳೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Salahuddin's son arrested in terror funding case

ಇತ್ತೀಚೆಗೆ ಎನ್ಐಎ ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಸೈಯದ್ ಅಲಿ ಶಾ ಗಿಲಾನಿ ಸಂಬಂಧಿ ಸೇರಿ 10 ಜನರನ್ನು ಬಂಧಿಸಲಾಗಿತ್ತು. ಇನ್ನು ಈ ವರ್ಷದ ಜೂನ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ನನ್ನು ಜಾಗತಿಕ ಉಗ್ರ ಎಂದು ಅಮೆರಿಕಾ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Syed Shahid Yousuf, son of globally wanted terrorist Syed Salahuddin, was arrested by the National Investigation Agency today in connection with a 2011 terror funding case for allegedly receiving money from his father.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ