ಅಮ್ರಪಾಲಿ ಪ್ರಕರಣದಲ್ಲಿ ಧೋನಿ ಪತ್ನಿ ಸಾಕ್ಷಿಗೆ ಸಮನ್ಸ್

Posted By: Chethan
Subscribe to Oneindia Kannada

ನವದೆಹಲಿ, ಜ. 5: ಇಂದಷ್ಟೇ ಭಾರತೀಯ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಡೆಯ ನಾಯಕತ್ವ ತೊರೆದಿರುವ ಮಹೇಂದ್ರ ಸಿಂಗ್ ಧೋನಿ ಪತ್ನಿಯಾದ ಸಾಕ್ಷಿ ಧೋನಿಗೆ ದೆಹಲಿಯ ನ್ಯಾಯಾಲಯವೊಂದು ಸಮನ್ಸ್ ಜಾರಿಗೊಳಿಸಿದೆ.

ರಿಯಲ್ ಎಸ್ಟೇಟ್ ಕಂಪನಿಯಾದ ಅಮ್ರಪಾಲಿಯ ಕಡೆಯಿಂದ ಗ್ರಾಹಕರಿಗೆ ಆಗಿರುವ ತೊಂದರೆ ಕುರಿತಂತೆ ಸಾಕ್ಷಿಯವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ದೆಹಲಿ ಮೂಲದ ಅನಿತಾ ಕುಮಾರ್ ಹಾಗೂ ಪದ್ಮಾ ಚಾಂದ್ ಎಂಬುವರು ದಾವೆ ಹೂಡಿರುವ ಹಿನ್ನೆಲೆಯಲ್ಲಿ ಸಮನ್ಸ್ ನೀಡಲಾಗಿದೆ.

Sakshi Dhoni is summoned by Delhi court

2007ರಲ್ಲಿ ಸಾಕ್ಷಿ, ಅಮ್ರಪಾಲಿ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಅವರ ಪತಿ ಧೋನಿ, ಆಗ ಆ ಕಂಪನಿಯ ಪ್ರಚಾರ ರಾಯಭಾರಿಯೂ ಆಗಿದ್ದರು. ಈಗ ಇಬ್ಬರೂ ಆ ಸ್ಥಾನಗಳಿಲ್ಲ.

ಆದರೆ, 2007ರಲ್ಲಿ ಕಂಪನಿಯು ಗ್ರೇಟರ್ ನೊಯ್ಡಾದಲ್ಲಿ ಖಚಿತ ರಿಟರ್ನ್ಸ್ ಆಧಾರದಡಿ ಮನೆ ನೀಡುವ ಯೋಜನೆಯನ್ನು ಘೋಷಿಸಿತ್ತು. ಅದೊಂದು ದೊಡ್ಡ ವಸತಿ ಸಮುಚ್ಛಯದ ಅಮ್ರಪಾಲಿ ಐಟಿ ಪಾರ್ಕ್ ಎಂಬ ಯೋಜನೆ. ಹಲವಾರು ಜನರು ಇದರಲ್ಲಿ ಹಣ ಹೂಡಿದ್ದರು.

ಹಾಗಾಗಿ, ದೆಹಲಿ ಮೂಲದ ಅನಿತಾ ಕುಮಾರ್ ಹಾಗೂ ಪದ್ಮಾ ಚಾಂದ್ ಕೂಡಾ ಸುಮಾರು ಒಂದು ಲಕ್ಷ ಹೂಡಿಕೆ ಮಾಡಿದ್ದರು. ಆದರೆ, ಕಂಪನಿಯು ನಿಗದಿತ ಅವಧಿಯಲ್ಲಿ ಮನೆಗಳನ್ನು ಪೂರ್ಣಗೊಳಿಸಲೇ ಇಲ್ಲ. ಜನರಿಗೆ ಮಾತು ಕೊಟ್ಟಿದ್ದಂತೆ ರಿಟರ್ನ್ಸ್ ಹಣವನ್ನೂ ಕೊಡಲಿಲ್ಲ. ಇದು ವಿವಾದಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ, ಕಳೆದ ಫೆಬ್ರವರಿಯಲ್ಲಿ ಅನಿತಾ, ಪದ್ಮಾ ಚಾಂದ್ ನ್ಯಾಯಾಲಯದ ಮೆಟ್ಟಿಲೇರಿ ತಾವು ನೀಡಿದ ಹಣ ವಾಪಸ್ ಬೇಕು. ಅಲ್ಲದೆ, ಕಂಪನಿಯಲ್ಲಿ ಠೇವಣಿ ಇಟ್ಟಾಗಿನಿಂದ ಈವರೆಗೆ ಶೇ. 24ರಷ್ಟು ಬಡ್ಡಿಯೊಂದಿಗೆ ನಮಗೆ ಬರಬೇಕಾದ ಹಣವನ್ನು ಕೊಡಿಸಬೇಕೆಂದು ದಾವೆ ಹೂಡಿದ್ದರು.

ಈ ಪ್ರಕರಣದಲ್ಲಿ ಪ್ರಾಜೆಕ್ಟ್ ಆರಂಭವಾದಾಗ ಕಂಪನಿಯ ಆಡಳಿತ ಮಂಡಳಿ
ನಿರ್ದೇಶಕರಲ್ಲೊಬ್ಬರಾಗಿದ್ದ ಾಕ್ಷಿಯವರನ್ನು ್ರತಿವಾದಿಗಳಲ್ಲೊಬ್ಬರನ್ನಾಗಿಸಲಾಗಿದೆ ಎಂದು ಅನಿತಾ, ಪದ್ಮಾ ಪರವಾಗಿ ವಾದ ಮಂಡಿಸುತ್ತಿರುವ ವಕೀಲ ಸುಮಿತ್ ಕೌಶಲ್ ತಿಳಿಸಿದ್ದಾರೆ.

ಹಾಗಾಗಿ, ಕಂಪನಿಯ ಸಹವಾಸ ಬಿಟ್ಟರೂ ಧೋನಿ ದಂಪತಿಗಳಿಗೆ ಕಂಪನಿ ಕುರಿತ ತಲೆನೋವು ತಪ್ಪಿಲ್ಲ ಎನ್ನುವಂತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wife of Mahendra singh Dhoni, Sakshi Dhoni got summons from Delhi court in a commercial project by the real estate group Amrapali at Greater Noida.
Please Wait while comments are loading...