'ಕೇಸರಿ ಭಯೋತ್ಪಾದನೆ' ಹೆಸರಿನಲ್ಲಿ ಆಲ್ ಖೈದಾ ವಿಡಿಯೋ: ಹಿಂದು ನಾಯಕರೇ ಗುರಿ!
ನವದೆಹಲಿ, ನವೆಂಬರ್ 28: 'ಕೇಸರಿ ಭಯೋತ್ಪಾದನೆ'(Saffron Terror) ಎಂಬ ಹೆಸರಿನಲ್ಲಿ ಆಲ್ ಖೈದಾ ಬಿಡುಗಡೆ ಮಾಡಿದ ವಿಡಿಯೋವನ್ನು ತನಿಖೆಗೊಳಪಡಿಸಲು ಭಾರತೀಯ ತನಿಖಾ ದಳ ನಿರ್ಧರಿಸಿದೆ.
Saffron Terror ಹೆಸರಿನಲ್ಲಿ ಸರಣಿ ವಿಡಿಯೋಗಳನ್ನು ಹೊರತರುವ ಯೋಜನೆ ಹಾಕಿದ್ದ ಆಲ್ ಖೈದಾ ಭಯೋತ್ಪಾದಕ ಸಂಘಟನೆ, ಈ ವಿಡಿಯೋಗಳ ಮೂಲಕ ಪ್ರಸಿದ್ಧ ಹಿಂದು ನಾಯಕರನ್ನು ತಾನು ಗುರಿಮಾಡಿರುವುದಾಗಿ ಹೇಳಿಕೊಂದಿತ್ತು. ಈ ವಿಡಿಯೋದ ಮೊದಲ ಕಂತು ಈಗಾಗಲೇ ತನಿಖಾ ದಳಕ್ಕೆ ಸಿಕ್ಕಿದೆ.

ಈ ವಿಡಿಯೋ ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಿದ್ದಿರಬಹುದು ಎಂದು ತನಿಖಾ ದಳ ಸಂಶಯವ್ಯಕ್ತಪಡಿಸಿದೆ.
ಇತ್ತೀಚೆಗೆ ತಾನೇ ಇಸ್ಲಾಮಿಕ್ ಸ್ಟೇಟ್ಸ್ (ಐಸಿಸ್) ಉಗ್ರ ಸಂಘಟನೆ ಭಾರತದ ಹಲವೆಡೆ ಬಾಂಬ್ ಸ್ಫೋಟಿಸುವ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಆಹಾರಗಳಿಗೆ ವಿಷ ಹಾಕುವ ಯೋಜನೆಯ ವಿಡಿಯೋವೊಂದು ವೈರಲ್ ಆಗಿ ಎದೆನಡುಗಿಸಿತ್ತು. ಇದೀಗ ಆಲ್ ಖೈದಾ ಸಹ ಅಂಥದೇ ವಿಡಿಯೋವನ್ನು ಬಿಡುಗಡೆ ಮಾಡಿರುವುದು ಭಯ ಹುಟ್ಟಿಸಿದೆ.












Click it and Unblock the Notifications