• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಹು ನಿರೀಕ್ಷಿತ ಸೇಕ್ರೆಡ್ ಗೇಮ್ಸ್ 2 ಲೀಕ್; ನೆಟ್ ಫ್ಲಿಕ್ಸ್ ಗೆ ಭಾರಿ ನಷ್ಟ

|

ಬೆಂಗಳೂರು, ಆಗಸ್ಟ್ 16: ಬಹುನಿರೀಕ್ಷಿತ ಸೇಕ್ರೆಡ್ ಗೇಮ್ಸ್ 2 ಸರಣಿ ಆಗಸ್ಟ್ 15ರಂದು ಬಿಡುಗಡೆಯಾಗಿದೆ. ಆದರೆ, ಬಿಡುಗಡೆ ಬೆನ್ನಲ್ಲೇ ಆನ್ ಲೈನ್ ನಲ್ಲಿ ಲೀಕ್ ಆಗಿದೆ. ಪೈರಸಿ ವೆಬ್ ತಾಣ ತಮಿಳ್ ರಾಕರ್ಸ್ ತಂಡದಿಂದ ಸೇಕ್ರೆಡ್ ಗೇಮ್ಸ್ ಸೋರಿಕೆಯಾಗಿದ್ದು, ನೆಟ್ ಫ್ಲಿಕ್ಸ್ ಗೆ ಭಾರಿ ನಷ್ಟ ಉಂಟಾಗಿದೆ.

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳನ್ನು ಬಿಡುಗಡೆಯಾದ ದಿನವೇ ಆನ್ ಲೈನ್ ನಲ್ಲಿ ಹಂಚುವ ಮೂಲಕ ಪೈರಸಿ ಲೋಕದಲ್ಲಿ ಹೊಸ ಕ್ರಾಂತಿ ಹಾಗೂ ನಿರ್ಮಾಪಕರಿಗೆ ಭೀತಿ ಉಂಟು ಮಾಡುವುದರಲ್ಲಿ ತಮಿಳ್ ರಾಕರ್ಸ್ ಅನೇಕಬಾರಿ ಯಶಸ್ವಿಯಾಗಿದೆ.

ಈಗ ನೆಟ್ ಫ್ಲಿಕ್ಸ್ ಹಾಗೂ ಅಮೆಜಾನ್ ನಂಥ್ ಆಪ್ ಅಧಾರಿತ ಸರಣಿಗಳನ್ನು ಕೂಡಾ ತಮಿಳ್ ರಾಕರ್ಸ್ ಪೈರಸಿ ಮಾಡಿ ಆನ್ ಲೈನ್ ನಲ್ಲಿ ಹಂಚಲು ಶುರು ಮಾಡಿದೆ. ಈ ಮುಂಚೆ ಎಚ್ ಬಿಒ ಸರಣಿಯ್ ಗೇಮ್ ಆಫ್ ಥ್ರೋನ್ಸ್, ನೆಟ್ ಫ್ಲಿಕ್ಸ್ ನ ನಾರ್ಕೋಸ್ ಸೇರಿದಂತೆ ಹಲವು ಜನಪ್ರಿಯ ಸರಣಿಯನ್ನು ತಮಿಳ್ ರಾಕರ್ಸ್ ಲೀಕ್ ಮಾಡಿದೆ.

ಅಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಬಳಿಕ ಬಂದಿದೆ ಕನ್ನಡದ್ದೇ ಆದ ಪ್ಲೆಫಿಕ್ಸ್

ಏನಿದು ಸೇಕ್ರೆಡ್ ಗೇಮ್ಸ್ : ಮುಂಬೈನ ಭೂಗತ ಜಗತ್ತು, ರಾಜಕೀಯ, ಧರ್ಮ ಎಲ್ಲದರ ಬಗ್ಗೆ ಕಥೆ ಹೇಳುವ ಸೇಕ್ರೆಡ್ ಗೇಮ್ ಮೊದಲ ಸರಣಿ ಭಾರಿ ಯಶಸ್ಸು ತಂದಿತ್ತು. ಹೀಗಾಗಿ, ಸರಿ ಸುಮಾರು 100 ಕೋಟಿ ರು ಅಧಿಕ ಮೊತ್ತ ಹೂಡಿಕೆ ಮಾಡಿ ಎರಡನೇ ಸರಣಿಯನ್ನು ನೆಟ್ ಫ್ಲಿಕ್ ಬಿಡುಗಡೆ ಮಾಡಿತ್ತು.

ವಿಕ್ರಮ್ ಚಂದ್ರ ಎಂಬವರ ಕಾದಂಬರಿ ಆಧಾರಿತ ಕಥೆಯನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಇನ್ನು ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ ಹಾಗೂ ರಾಧಿಕಾ ಅಪ್ಟೆ ಮುಖ್ಯ ಭೂಮಿಕೆಯಲ್ಲಿದ್ದ ವೆಬ್​ ಸರಣಿ ವೀಕ್ಷಕರ ಮನ ಗೆದ್ದಿತ್ತು. ಎರಡನೇ ಸೀಸನ್ ನಲ್ಲಿ ರಣವೀರ್ ಶೋರೆ ಹಾಗೂ ಕಲ್ಕಿ ಕೋಚ್ಲಿನ್ ಸೇರ್ಪಡೆಗೊಂಡಿದ್ದಾರೆ.

ನೆಟ್ ಫ್ಲಿಕ್ಸ್ ನ ವೆಬ್ ಸರಣಿ 'ಸೇಕ್ರೆಡ್ ಗೇಮ್ಸ್'ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅವಮಾನಿಸುವಂಥ ಡೈಲಾಗ್ ಇದೆ ಎಂದು ಆರೋಪಿಸಲಾಗಿತ್ತು. ಪಶ್ಚಿಮಬಂಗಾಳದ ಕಾಂಗ್ರೆಸ್ ನಾಯಕರೊಬ್ಬರು ನಟ ನವಾಝುದ್ದೀನ್ ಸಿದ್ದಿಕಿ, ನೆಟ್‌ಫ್ಲಿಕ್ಸ್ ಹಾಗೂ ವೆಬ್ ಸರಣಿಯ ನಿರ್ಮಾಪಕರ ವಿರುದ್ಧ ಕೋಲ್ಕತ್ತಾ ಪೊಲೀಸರ ಬಳಿ ದೂರು ದಾಖಲಿಸಿದ್ದರು. ಈ ಬಗ್ಗೆ ರಾಜೀವ್ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಅವರು ಪ್ರತಿಕ್ರಿಯಿಸಿ, ಟಿವಿ ಸರಣಿಯಿಂದ ನನ್ನ ತಂದೆಯ ವ್ಯಕ್ತಿತ್ವವನ್ನು ಅಳೆಯಲಾಗದು ಎಂದಿದ್ದರು.

English summary
After the release of Netflix's highly anticipated web series Sacred Games 2, all episodes leaked online by Tamilrockers; Netflix incurs huge loss
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X