ಶಬರಿಮಲೆಗೆ ಬರುವ ಪುರುಷ ಭಕ್ತರ ಪರಿಶುದ್ಧತೆಗೆ ಪರೀಕ್ಷಿಸಿ: ಟ್ವಿಂಕಲ್

Written By:
Subscribe to Oneindia Kannada

ನವದೆಹಲಿ, ಫೆಬ್ರವರಿ 09: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಸಂಬಂಧಿಸಿದಂತೆ ನಟಿ, ನಿರ್ಮಾಪಕಿ ಟ್ವಿಂಕಲ್ ಖನ್ನಾ ಅವರು ಸವಾಲಿನ ಪ್ರಶ್ನೆ ಹಾಕಿದ್ದಾರೆ.

ಋತುಚಕ್ರವಾಗುವ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಟ್ವಿಂಕಲ್ ಖನ್ನಾ, ದೇಗುಲಗಳಲ್ಲಿ ಪುರುಷರ ಪಾವಿತ್ರ್ಯತೆ ಪರೀಕ್ಷೆಗೆ ಒಳಪಡಿಸಬೇಕು, ಬ್ರಹ್ಮಚರ್ಯ ಆಚರಣೆಯ ಪರೀಕ್ಷೆಯಾಗಬೇಕು ಎಂದಿದ್ದಾರೆ.

Twinkle Khanna

ಶಬರಿಮಲೆ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಋತುಮತಿಯಾದ ಮಹಿಳೆಯರು ಪ್ರವೇಶಿಸುವುದನ್ನು ನಿಷಿದ್ಧಗೊಳಿಸಲಾಗಿದೆ. ಕಾನೂನು ಎಂಬುದು ಎಲ್ಲರಿಗೂ ಒಂದೇ ಆಗಿರಬೇಕು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ನಿಯಮಗಳನ್ನು ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ವಾಹಿನಿ ಜತೆ ಮಾತನಾಡುತ್ತಾ, ಇದರರ್ಥ ಪುರುಷರು ನಮ್ಮ ವಿರುದ್ಧವಿದ್ದಾರೆ ಎಂಬುದಲ್ಲ. ಬದಲಾಗಿ ಮಹಿಳೆಯರೇ ತಮ್ಮ ಬಗ್ಗೆ ಸಂಕುಚಿತ ಮನಸ್ಸನ್ನು ಹೊಂದಿದ್ದಾರೆ. ಋತುಮತಿಯಾದ ಬಗ್ಗೆ ಅವರು ಹೇಳಲು ಹಿಂಜರಿಯುತ್ತಾರೆ ಎಂದು ಅಭಿಪ್ರಾಯಪಟ್ಟರು.

ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಲು ಯತ್ನಿಸಿದ ಮಹಿಳೆ

ನೈಜ ಹಿಂದೂ ಮಹಿಳೆ ಯಾವುದೇ ಕಾರಣಕ್ಕೂ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸುವುದಿಲ್ಲ. ಆಕೆಗೆ ನಿಷೇಧವಿದೆ ಎಂಬ ಕಾರಣದಿಂದ ಅಲ್ಲ, ಬದಲಿಗೆ ಅದು ಆಕೆಯ ನಂಬಿಕೆಯ ಪ್ರಶ್ನೆಯಾಗಿದೆ. ಸಮಾನತೆ ಹಕ್ಕಿಗಾಗಿ ನಾವು ಹೋರಾಟ ನಡೆಸೋಣ. ಟ್ವಿಂಕಲ್ ಖನ್ನಾ ಮಾತಿಗೆ ನನ್ನ ಸಹಮತವಿಲ್ಲ ಎಂದು ಸಾಮಾಜಕ ಕಾರ್ಯಕರ್ತ ರಂಜಿತ್ ಕೇಶವ್ ಅವರು ತಮ್ಮ ವಿರೋಧ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sabarimala row: Actor-turned-producer-activist Twinkle Khanna on Friday said if menstruating women are not allowed in religious places like the Kerala temple, then men should also be tested for celibacy before they enter the temple.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ