ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿಯೇ ಶರಣಂ ಅಯ್ಯಪ್ಪ, ಸರತಿ ಸಾಲಲ್ಲಿ ಬನ್ರಪ್ಪ

By Mahesh
|
Google Oneindia Kannada News

ಶಬರಿಮಲೆ, ನ.17: ಕೇರಳದ ಹಿಂದೂ ಪವಿತ್ರಕ್ಷೇತ್ರ ಶಬರಿಮಲೆ ಯಾತ್ರೆ ಆರಂಭವಾಗಿದೆ. ಇನ್ನೆರಡು ತಿಂಗಳುಗಳ ಕಾಲ ಹರಿಹರಸುತ ಭಕ್ತಾದಿಗಳಿಗೆ ದರ್ಶನ ನೀಡಲಿದ್ದಾನೆ. ಭಾನುವಾರ ಸಂಜೆಯಿಂದಲೇ ಭಕ್ತಾದಿಗಳು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತಂಡೋಪತಂಡವಾಗಿ ಆಗಮಿಸಿದ್ದರು.

ಪಂಪಾನದಿ ತೀರದ ಈ ಪವಿತ್ರಕ್ಷೇತ್ರದೆಲ್ಲೆಡೆ 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂಬ ವಾಕ್ಯ ದಿಕ್ಕು ದಿಕ್ಕುಗಳಲ್ಲಿ ಕೇಳಿ ಬರುತ್ತಿತ್ತು. 41 ದಿನಗಳ ಮಂಡಲ ಪೂಜೆ ಕೈಂಕರ್ಯವನ್ನು ಹಮ್ಮಿಕೊಂಡಿರುವ ಭಕ್ತರು ನಂತರ ಮಕರವಿಳಕ್ಕು ಆಚರಿಸಲಿದ್ದಾರೆ. ಮುಂದಿನ ವರ್ಷದ ಜನವರಿ 14ರಂದು ಮಕರಜ್ಯೋತಿ ದರ್ಶನ ಪಡೆಯಲಿದ್ದಾರೆ. ಮಕರ ಜ್ಯೋತಿ ದರ್ಶನದ ತನಕ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. [ಅಯ್ಯಪ್ಪಸ್ವಾಮಿ ಪ್ರಸಾದಕ್ಕೆ CFTRI ತಂತ್ರಜ್ಞಾನದ ಮೆರುಗು]

ಡಿಸೆಂಬರ್ 27ರಂದು ಮಂಡಲ ಪೂಜೆಯು ನಡೆಯಲಿದೆ ಎಂದು ಮಂಡಲ-ಮಕರವಿಳಕ್ಕು ಋತುವಿನ ಪೂಜಾ ಕೈಂಕರ್ಯಕ್ಕೆ ಚಾಲನೆ ನೀಡಿದ ಪ್ರಧಾನ ಅರ್ಚಕ ಪಿ.ಎನ್ ನಂಬೂದಿರಿ ಅವರು ಹೇಳಿದರು. ಶಬರಿಮಲೆ ದೇಗುಲ ತೆರೆದ ನಂತರದ ಕಾರ್ಯಕ್ರಮಗಳ ವಿವರ ಮುಂದೆ ಚಿತ್ರ ಸಮೇತ ನೋಡಿ.. ಓದಿ... [ಶಬರಿಮಲೆ ದೇಗುಲ ಸೇರಿದ ಚಿನ್ನಾಭರಣ]

ವಿಶೇಷ ರೈಲಿನ ವ್ಯವಸ್ಥೆ: ನಾಗರಕೋಯಿಲ್-ಮಂಗಳೂರು ಜಂಕ್ಷನ್ ನಿಂದ ಡಿ.14,21,28ಕ್ಕೆ ವಿಶೇಷ ರೈಲು ಹೊರಡಿಲಿದೆ. ಮಂಗಳೂರು ಜಂಕ್ಷನ್ ನಿಂದ ಡಿ.15,22 ಹಾಗೂ 29 ರ ಮಧ್ಯಾಹ್ನ ವೇಳೆ ನಾಗರಕೋಯಿಲ್ ಕಡೆಗೆ ರೈಲುಗಳು ಸಂಚರಿಸಲಿವೆ. ಎಸಿ, 12 ಸ್ಲೀಪರ್ ಕೋಚ್, 3 ಬುಕ್ಕಿಂಗ್ ರಹಿತ, 2 ಲಗ್ಗೇಜ್ ಕೋಚುಗಳಿರುತ್ತವೆ.

ಪ್ರಧಾನ ಅರ್ಚಕರ ಅಧಿಕಾರ ಹಸ್ತಾಂತರ

ಪ್ರಧಾನ ಅರ್ಚಕರ ಅಧಿಕಾರ ಹಸ್ತಾಂತರ

ಪ್ರಧಾನ ಅರ್ಚಕರ ಅಧಿಕಾರ ಹಸ್ತಾಂತರ ಕಾರ್ಯವೂ ಈ ಋತುವಿನಲ್ಲೇ ನಡೆಯಲಿದೆ. ಪಿ.ಎನ್ ನಾರಾಯಣ್ ನಂಬೂದಿರಿ ಅವರು ತಮ್ಮ ಅಧಿಕಾರವನ್ನು ಇಳಿಕ್ಕಾಡ್ ಕೃಷ್ಣನ್ ನಂಬೂದಿರಿ ಹಾಗೂ ಮಲಿಕಾಪುರಂ ಮೆಲ್ಸಂತಿ ಕೇಶವನ್ ನಂಬೂದಿರಿ ಅವರಿಗೆ ಹಸ್ತಾಂತರಿಸಲಿದ್ದಾರೆ.

ದಟ್ಟಾರಣ್ಯದಲ್ಲಿದೆ ಶಬರಿ ಗಿರಿ

ದಟ್ಟಾರಣ್ಯದಲ್ಲಿದೆ ಶಬರಿ ಗಿರಿ

ಕೇರಳ ಪದನಮತಿಟ್ಟ ಜಿಲ್ಲೆಯ ಪೂರ್ವದಲ್ಲಿ ನೆಲೆ ನಿಂತಿರುವ ಶಬರಿಮಲೆ, ಕೇರಳದ ಸೌಂದರ್ಯವನ್ನು ಹೆಚ್ಚಿಸಿದ ಸಂರಕ್ಷಿತ ಪೆರಿಯಾರ್ ಹುಲಿ ಸಂರಕ್ಷಣಾ ಅರಣ್ಯದಲ್ಲಿ ಈ ದೇಗುಲವಿದೆ

ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ

ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ

ಪ್ರತಿವರ್ಷ ಸರಿಸುಮಾರು 45-50 ದಶಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಿದ್ದು, ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚು ವಾರ್ಷಿಕ ಭಕ್ತರು ಭೇಟಿ ನೀಡುವ ತೀರ್ಥಕ್ಷೇತ್ರಗಳಲ್ಲಿ ಒಂದೆನಿಸಿದೆ.

ಶಬರಿಮಲೆಯಲ್ಲಿ ಭಾರಿ ಭದ್ರತಾ ವ್ಯವಸ್ಥೆ

ಶಬರಿಮಲೆಯಲ್ಲಿ ಭಾರಿ ಭದ್ರತಾ ವ್ಯವಸ್ಥೆ

ಸುಮಾರು 1500 ಪೊಲೀಸ್ ಸಿಬ್ಬಂದಿ, ಕೊಯಮತ್ತೂರಿನ ಕ್ಷಿಪ್ರ ಕಾರ್ಯಪಡೆಯ 150 ಸಿಬ್ಬಂದಿಗಳು ದೇಗುಲದ ಸುತ್ತ ಸದಾ ಸನ್ನದ್ಧರಾಗಿರುತ್ತಾರೆ, ಇದಲ್ಲದೆ, ಲೋಹ ಶೋಧಕ, ಬ್ಯಾಗ್ ಸ್ಕ್ಯಾನರ್ ಮುಂತಾದ ಉಪಕರಣಗಳನ್ನು ಬಳಸಲಾಗುತ್ತದೆ.

ಶಬರಿಮಲ ದೇವಸ್ಥಾನ ಪರ್ವತಗಳ ಸಾಲು

ಶಬರಿಮಲ ದೇವಸ್ಥಾನ ಪರ್ವತಗಳ ಸಾಲು

ಶಬರಿಮಲ ದೇವಸ್ಥಾನ ಪರ್ವತಗಳ ಸಾಲು ಹಾಗೂ ದಟ್ಟ ಅರಣ್ಯಗಳಿಂದ ಸುತ್ತುವರಿದಿದ್ದು ಸಮುದ್ರ ಮಟ್ಟದಿಂದ 1535 ಅಡಿ ಎತ್ತರದಲ್ಲಿದೆ. ಸುಮಾರು 18ಕ್ಕೂ ಅಧಿಕ ಬೆಟ್ಟಗಳ ಸಾಲು ಇಲ್ಲಿದೆ.

ಪ್ರತಿದಿನ ದೇಗುಲದಲ್ಲಿ ದರ್ಶನ ವ್ಯವಸ್ಥೆ

ಪ್ರತಿದಿನ ದೇಗುಲದಲ್ಲಿ ದರ್ಶನ ವ್ಯವಸ್ಥೆ

ಪ್ರತಿದಿನ 16.5 ಗಂಟೆಗಳ ಕಾಲ ಅಯ್ಯಪ್ಪ ಸ್ವಾಮಿಯ ದರ್ಶನ ಸಾರ್ವಜನಿಕರಿಗೆ ಸಿಗಲಿದೆ. ಬೆಳಗ್ಗೆ 4 ಗಂಟೆಗೆ ಆರಂಭವಾಗುವ ದರ್ಶನ ಸಮಯ ಮಧ್ಯಾಹ್ನ 1.30ಕ್ಕೆ ಉಚ್ಛಪೂಜೆಗೆ ಬಾಗಿಲು ಮುಚ್ಚಲಿದೆ ನಂತರ 4 ಗಂಟೆಗೆ ಬಾಗಿಲು ತೆರೆದರೆ 11ಗಂಟೆಗೆ ಅಥಳಪೂಜೆ ನಂತರ ದರ್ಶನ ಮುಕ್ತಾಯವಾಗಲಿದೆ.

ವಿಶೇಷ ದಿನಗಳು, ಪೂಜೆಗಳು

ವಿಶೇಷ ದಿನಗಳು, ಪೂಜೆಗಳು

41 ದಿನಗಳ ಮಂಡಲ ಪೂಜೆ ಯಾತ್ರೆ ಡಿಸೆಂಬರ್ 27ಕ್ಕೆ ಸಂಪನ್ನವಾಗಲಿದೆ. ನಂತರ ಎರಡು ದಿನ ದೇಗುಲ ಮುಚ್ಚಲಾಗುತ್ತದೆ ನಂತರ ಡಿಸೆಂಬರ್ 30ರಂದು ಸಂಜೆ 5.30 ಮತ್ತೆ ಬಾಗಿಲು ತೆರೆಯಲಾಗುತ್ತದೆ.

ಮಕರವಿಳಕ್ಕು ಪೂಜೆ ಜನವರಿ 14ರಂದು ಮಕರ ಜ್ಯೋತಿ ದರ್ಶನದೊಂದಿಗೆ ದೇಗುಲ ಈ ಋತುವಿಗೆ ಮುಕ್ತಾಯವಾಗಲಿದೆ.

English summary
The two-month-long pilgrimage to the Lord Ayyappa temple here got underway with hundreds of devotees trekking up the holy hillock as the shrine opened this evening(Nov.16).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X