Sabarimala: ಶಬರಿಮಲೆಯಲ್ಲಿ ಜನದಟ್ಟಣೆ: ಪಂಪಾದಲ್ಲಿ ಟ್ರಾಫಿಕ್ ಜಾಮ್- ಗಂಟೆಗಟ್ಟಲೆ ಕಾದರೂ ಭಕ್ತರಿಗಿಲ್ಲ ಅಯ್ಯಪ್ಪನ ದರ್ಶನ!
ಪತ್ತನಂತಿಟ್ಟ ಡಿಸೆಂಬರ್ 13: ಶಬರಿಮಲೆ ಸನ್ನಿಧಾನಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದ್ದು ಭಕ್ತರನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಇತ್ತ ಗಂಟೆಗಟ್ಟಲೆ ಕಾದರೂ ಆಯ್ಯಪ್ಪನ ದರ್ಶನ ಸುಲಭವಾಗದ ಹಿನ್ನೆಲೆಯಲ್ಲಿ ಭಕ್ತರೂ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಮಾತ್ರವಲ್ಲದೆ ಸರತಿ ಸಾಲಿನಲ್ಲಿ ಗಂಟೆಗಳ ಕಾಲ ಕಾಯುವ ವೇಳೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಭಕ್ತರು ಒತ್ತಾಯಿಸುತ್ತಿದ್ದಾರೆ.
ಈ ನಡುವೆ ಶಬರಿಮಲೆಯ ಅಯ್ಯಪ್ಪ ದೇಗುಲದ ಸನ್ನಿಧಾನದಲ್ಲಿ ಜನಸಂದಣಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ 88,000 ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ. ಪ್ರತಿ ಗಂಟೆಗೆ 4,000 ಕ್ಕೂ ಹೆಚ್ಚು ಜನರಿಗೆ ಪವಿತ್ರ 18 ಮೆಟ್ಟಿಲುಗಳನ್ನು ಏರಲು ಅವಕಾಶ ನೀಡಲಾಗುತ್ತಿದೆ. ಇದರಿಂದಾಗಿ ನೂಕುನುಗ್ಗಲು ಹೆಚ್ಚಾಗಿ ದರ್ಶನವನ್ನು ಪೂರ್ಣಗೊಳಿಸಿದ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಮಂಗಳವಾರ 1.2 ಲಕ್ಷ ಜನರು ಶಬರಿಮಲೆಕ್ಕೆ ಭೇಟಿ ನೀಡಿದ್ದಾರೆ. ಇಷ್ಟೆಲ್ಲ ಭಕ್ತರಿಗೆ ಬೆಟ್ಟ ಹತ್ತಲು ಅವಕಾಶ ನೀಡುವುದು ಅಸುರಕ್ಷಿತವಾಗಿರುವ ಕಾರಣ ಪೊಲೀಸರು ಪಂಪಾದಲ್ಲಿ ಜನಸಂದಣಿಯನ್ನು ನಿಯಂತ್ರಿಸುತ್ತಿದ್ದಾರೆ. ಪಂಪಾಕ್ಕೆ ತೆರಳಲು ಅನುಮತಿ ನೀಡದಿರುವ ಅಧಿಕಾರಿಗಳ ನಿರ್ಧಾರವನ್ನು ವಿರೋಧಿಸಿ ಹಲವು ಶಬರಿಮಲೆ ಯಾತ್ರಾರ್ಥಿಗಳು ಮಂಗಳವಾರ ಎರುಮೇಲಿಯಲ್ಲಿ ರಸ್ತೆ ತಡೆ ನಡೆಸಿದರು.
#WATCH | Kerala | Sabarimala devotees block Pamba-Erumeli road, in protest against heavy rush at Nilakkal. (12.12.2023) pic.twitter.com/9LunYMK6WP
— ANI (@ANI) December 13, 2023
ಶರಣಪಥದಲ್ಲಿ (ಪಂಪಾದಿಂದ ಸನ್ನಿಧಾನಕ್ಕೆ ಹೋಗುವ ಮಾರ್ಗ) ಹೆಚ್ಚಿನ ವಾಹನ ದಟ್ಟಣೆ ಇಲ್ಲದಿದ್ದರೂ, ಪಂಪಾಕ್ಕೆ ಹೋಗುವ ಇತರ ಎಲ್ಲಾ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಅಲ್ಲದೇ ತಮಿಳುನಾಡಿನ ಭಕ್ತರೊಬ್ಬರು ಮಂಗಳವಾರ ಸನ್ನಿಧಾನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ವಾರ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ತಲುಪುವ ಪಾದಯಾತ್ರೆಯ ನಡುವೆ ತಮಿಳುನಾಡಿನ 12 ವರ್ಷದ ಬಾಲಕಿ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾರೆ.
#WATCH | Thiruvananthapuram: BJP Yuva Morcha holds a protest against Kerala Government over Sabarimala mismanagement issue. pic.twitter.com/MtBSo6o1P3
— ANI (@ANI) December 13, 2023
ಕೋರ್ಟ್ ಮಧ್ಯಪ್ರವೇಶ...
ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಕೋರ್ಟ್ ಮಧ್ಯಪ್ರವೇಶ ಮಾಡಿದೆ. ದೇಗುಲಕ್ಕೆ ಆಗಮಿಸುವ ಶಬರಿಮಲೆ ಯಾತ್ರಾರ್ಥಿಗಳಿಗೆ ಅಗತ್ಯ ಅನುಕೂಲ ಮತ್ತು ವಾಹನಗಳಿಗೆ ಸಾಕಷ್ಟು ಪಾರ್ಕಿಂಗ್ ಸೌಲಭ್ಯಗಳನ್ನು ಒದಗಿಸುವಂತೆ ಕೇರಳ ಹೈಕೋರ್ಟ್ ಮಂಗಳವಾರ ಅಧಿಕಾರಿಗಳಿಗೆ ಸೂಚಿಸಿದೆ. ನ್ಯಾಯಾಲಯವು ಇಂದು ಮತ್ತೆ ಪ್ರಕರಣವನ್ನು ಪರಿಗಣಿಸಲಿದೆ.
ನ್ಯಾಯಮೂರ್ತಿ ಅನಿಲ್ ನರೇಂದ್ರನ್ ಮತ್ತು ಜಿ ಗಿರೀಶ್ ಅವರ ಪೀಠ, ಬೆಟ್ಟದ ದೇಗುಲಕ್ಕೆ ದಟ್ಟಣೆಯನ್ನು ನಿಯಂತ್ರಣಕ್ಕೆ ತರಲು ರಾಜ್ಯ ಪೊಲೀಸರಿಗೆ ಸೂಚಿಸಿದೆ. ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಲು ಅವಕಾಶ ನೀಡದಂತೆ ಮತ್ತು ಪ್ರತಿದಿನ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
"ಶಿಕ್ಷಣ ಸಂಸ್ಥೆಗಳಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರ ಮೂಲಕ ಅಥವಾ ಸಂಬಂಧಪಟ್ಟ ಸ್ಥಳೀಯ ಸ್ವಯಂ ಸರ್ಕಾರಿ ಸಂಸ್ಥೆಗಳ ಸಹಾಯದಿಂದ ಯಾತ್ರಾರ್ಥಿಗಳಿಗೆ ಅಂತಹ ಸ್ಥಳಗಳಲ್ಲಿ ಕುಡಿಯುವ ನೀರು ಮತ್ತು ಬಿಸ್ಕೆಟ್‌ಗಳನ್ನು ಒದಗಿಸಬಹುದೇ ಎಂಬುದನ್ನು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಪರಿಗಣಿಸುತ್ತದೆ" ಎಂದು ನ್ಯಾಯಾಲಯ ಹೇಳಿದೆ.












Click it and Unblock the Notifications