Putin India Visit: ಭಾರತಕ್ಕೆ ಬಂದರು ರಷ್ಯಾ ಅಧ್ಯಕ್ಷ ಪುಟಿನ್, ಪಾಕಿಸ್ತಾನಕ್ಕೆ ಶುರು ಭಯ!
ಭಾರತ ಇಡೀ ಜಗತ್ತಿನಲ್ಲೇ ವಿಶೇಷವಾದ ದೇಶ, ಏಕೆಂದರೆ ತನ್ನದೇ ಆದ ಮೂಲ ನಿಯಮಗಳನ್ನ ಹೊಂದಿರುವ ಭಾರತ ಯಾವುದೇ ಕಲಹ ಅಂದರೆ ಯುದ್ಧ ಬಯಸದೇ ಅಭಿವೃದ್ಧಿ ಕಡೆಗೆ ಮಾತ್ರ ಗಮನ ಹರಿಸುತ್ತದೆ. ಭಾರತದ ಜೊತೆಗೆ ಸ್ನೇಹ ಬಯಸಲು ಪ್ರಪಂಚದ ಪ್ರತಿಯೊಂದು ದೇಶ ಕೂಡ ಮುಂದೆ ಬರುತ್ತದೆ. ಪಾಶ್ಚಿಮಾತ್ಯ ದೇಶಗಳೇ ಇರಲಿ ಅಥವಾ ಪಾಶ್ಚಿಮಾತ್ಯ ದೇಶಗಳ ಶತ್ರು ದೇಶವೇ ಇರಲಿ ಭೂಮಿ ಮೇಲೆ ಜೀವನ ನಡೆಸಲು ಪ್ರತಿಯೊಂದು ದೇಶಕ್ಕೂ ಭಾರತದ ಸ್ನೇಹ ಬೇಕೆ ಬೇಕು. ಹೀಗಿದ್ದಾಗ ಭಾರತದ ಆಪ್ತ ಗೆಳೆಯ ರಷ್ಯಾ ದೇಶದ ಅಧ್ಯಕ್ಷ ಪುಟಿನ್ ಅವರು ಭಾರತಕ್ಕೆ ಬಂದಿದ್ದು ಪಾಕಿಸ್ತಾನಕ್ಕೆ ನಡುಕ ತರಿಸಿದೆ!
ಭಾರತದ ವಿರುದ್ಧ ಪದೇ, ಪದೇ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಭಾರತ ಮತ್ತು ರಷ್ಯಾ ನಡುವೆ ಸಂಬಂಧ ಸುಧಾರಣೆ ಜೊತೆಗೆ, ಹೊಸ ಹೊಸದಾಗಿ ರಕ್ಷಣಾ ಒಪ್ಪಂದಗಳು ಕೂಡ ಇಂದು ನಡೆಯಲಿವೆ. ಹೀಗಾಗಿ ಬೆಚ್ಚಿ ಬಿದ್ದಿರುವ ಪಾಪಿ ಪಾಕಿಸ್ತಾನ ನಾಯಕರು, ಭಾರತ ಮತ್ತು ರಷ್ಯಾ ನಡುವೆ ದೊಡ್ಡ ಮಟ್ಟದಲ್ಲಿ ರಕ್ಷಣಾ ಒಪ್ಪಂದ ನಡೆದರೆ ಅದು ಎಲ್ಲಿ ಪಾಕಿಸ್ತಾನದ ಬುಡ ಅಲ್ಲಾಡಿಸುತ್ತೋ? ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಪದೇ, ಪದೇ ಭಾರತದ ವಿರುದ್ಧ ಜಗಳ ಕಾಯುವ ಪಾಪಿ ಪಾಕಿಸ್ತಾನಕ್ಕೆ ಈಗ ಇಷ್ಟೊಂದು ಟೆನ್ಷನ್ ಜಾಸ್ತಿ ಆಗಲು ಕಾರಣ ಆಗಿರುವುದೇ ಎಸ್-500 ಎಂಬ ಹೊಸ ಬ್ರಹ್ಮಾಸ್ತ್ರ!

ಎಸ್-500 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಒಪ್ಪಂದ?
ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿದ್ದು, ಹೀಗೆ ಎರಡೂ ದೇಶಗಳು ಮತ್ತಷ್ಟು ಹತ್ತಿರವಾಗುತ್ತಿವೆ. ಪ್ರಮುಖವಾಗಿ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ & ಎಸ್-500 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಮಾಡುವ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆ ರಷ್ಯಾ ನಿರ್ಮಿತ ಕ್ಷಿಪಣಿಗಳ ಖರೀದಿಗೆ ಕೂಡ ಭಾರತ ಒಲವು ತೋರಿದ್ದು, ಭವಿಷ್ಯದಲ್ಲಿ ಇದು ಭಾರತಕ್ಕೆ ಸಾಕಷ್ಟು ಲಾಭದಾಯಕ ಎನ್ನಲಾಗಿದೆ. ಆದರೆ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ & ಎಸ್-500 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪಾಕಿಸ್ತಾನದ ಬುಡ ಅಲ್ಲಾಡಿ ಹೋಗುವಂತೆ ಮಾಡುತ್ತಿದೆ.
ಪಾಪಿ ಪಾಕಿಸ್ತಾನಕ್ಕೆ ಶುರುವಾಯ್ತು ಭಯ!
ಒಟ್ನಲ್ಲಿ ಭಾರತದ ಶತ್ರು ದೇಶಗಳು, ಅದರಲ್ಲೂ ಅಕ್ಕಪಕ್ಕ ಇರುವ ಶತ್ರು ದೇಶಗಳಿಗೆ ಈಗ ನಿದ್ದೆ ಬಂದಿಲ್ಲ. ಯಾಕಂದ್ರೆ ರಷ್ಯಾ ಅಧ್ಯಕ್ಷರು ಭಾರತದ ಜೊತೆಗೆ ಮಾಡಿಕೊಳ್ಳುತ್ತಿರುವ ಪ್ರಮುಖವಾದ ಒಪ್ಪಂದಗಳು ಟೆನ್ಷನ್ ಜಾಸ್ತಿ ಮಾಡುತ್ತಿದೆ. ಮತ್ತೊಂದು ಕಡೆ ಪಾಕಿಸ್ತಾನದ ನಾಯಕರು ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಒಪ್ಪಂದಗಳಿಂದ ಸಿಕ್ಕಾಪಟ್ಟೆ ಆಘಾತಕ್ಕೆ ಒಳಗಾಗಿದ್ದು, ಮುಂದೆ ಇದು ತಮ್ಮ ಬುಡಕ್ಕೆ ಬರುತ್ತೆ ಅನ್ನೋದನ್ನ ಈಗಲೇ ಕಂಡುಕೊಂಡಿದ್ದಾರೆ. ಹೀಗಾಗಿಯೇ ಪಾಪಿ ಪಾಕಿಸ್ತಾನ ಈಗ ಭಾರತದಲ್ಲಿ ಏನಾಗುತ್ತಿದೆ? ಎಂಬುದನ್ನ ನಿದ್ದೆ ಬಿಟ್ಟು ನೋಡುವಂತೆ ಆಗಿದೆ!












Click it and Unblock the Notifications