ರಜನಿಗೆ ಆರೋಗ್ಯ ಸರಿ ಇಲ್ವಂತೆ, ಗಾಳಿ ಸುದ್ದಿ ಹಬ್ಬುತ್ತಿದೆ!

Posted By:
Subscribe to Oneindia Kannada

ಬೆಂಗಳೂರು, ಜೂನ್ 16: 'ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸ್ಥಿರವಾಗಿದೆ' ಎಂದು ಒಂದು ಸಾಲಿನ ಸ್ಪಷ್ಟನೆಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ರಜನಿಗೆ ಆರೋಗ್ಯ ಸರಿ ಇಲ್ಲ ಎಂಬ ಗಾಳಿ ಸುದ್ದಿ ಕಾಡ್ಗಿಚ್ಚಿನಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬುತ್ತಿದೆ.

ಕಬಾಲಿ ಚಿತ್ರೀಕರಣ ಮುಗಿಸಿಕೊಂಡು ಅಮೆರಿಕದಲ್ಲಿ ಸುತ್ತಾಡಲು ತೆರಳಿರುವ ರಜನಿ ಅವರ ಆರೋಗ್ಯದ ಬಗ್ಗೆ ಮತ್ತೊಮ್ಮೆ ಗಾಳಿಸುದ್ದಿ ಹಬ್ಬುತ್ತಿದೆ. ರಜನಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಯುಎಸ್ ಗೆ ತೆರಳಿದ್ದಾರೆ ಎಂಬ ಸುದ್ದಿ ಫೇಸ್ ಬುಕ್, ಟ್ವಿಟ್ಟರ್ ಹಾಗೂ ವೆಬ್ ತಾಣಗಳಲ್ಲಿ ಹರಿದಾಡಿದೆ. ['ರಾಜಕೀಯಕ್ಕೆ ರಜನಿಕಾಂತ್ ಬರುವುದು ಬೇಡ']

Rumours about Rajini’s ill-health spike

ರಜನಿ ಅವರ ವಕ್ತಾರ ಸ್ಪಷ್ಟನೆ: ರಜನಿ ಕಾಂತ್ ಅವರು ಯುಎಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ, ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ರೀತಿಯಲ್ಲಿ ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ರಜನಿ ಕಾಂತ್ ಅವರ ಕಚೇರಿ ಪ್ರಕಟಿಸಿದೆ.

ಈ ರೀತಿ ಗಾಳಿಸುದ್ದಿ ಹಬ್ಬಲು ಕಾರಣವೂ ಇದೆ. ಇತ್ತೀಚೆಗೆ ಕಬಾಲಿ ಚಿತ್ರ ಆಡಿಯೋ ರಿಲೀಸ್ ಸರಳವಾಗಿ ನೆರವೇರಿಸಲಾಗಿತ್ತು. ರಜನಿ ಅವರು ಈ ಕಾರ್ಯಕ್ರಮಕ್ಕೂ ಮುಂಚಿತವಾಗಿ ಯುಎಸ್ ಗೆ ತೆರಳಿದ್ದರು. ರಜನಿ ಅನುಪಸ್ಥಿತಿ ಬಗ್ಗೆ ಕಥೆಗಳು ಹುಟ್ಟಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿಯಾಗಿವೆ. [ಶಿಕ್ಷಕಿಯ ಕಷ್ಟಕ್ಕೆ ಮಿಡಿದ ರಜನಿಕಾಂತ್ ಹೃದಯ!]

ಸದ್ಯದಲ್ಲೇ ಈ ಬಗ್ಗೆ ರಜನಿಕಾಂತ್ ಅವರ ಅಧಿಕೃತ ಟ್ವಿಟ್ಟರ್ ಐಡಿ(@superstarrajini)ಯಿಂದ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ.

65 ವರ್ಷ ವಯಸ್ಸಿನ ಪದ್ಮವಿಭೂಷಣ ರಜನಿ ಅವರು ಬಹುನಿರೀಕ್ಷಿತ ಚಿತ್ರ ಕಬಾಲಿ ನಂತರ ಶಂಕರ್ ನಿರ್ದೇಶನದ ಎಂದಿರನ್ 2 ಚಿತ್ರಕ್ಕೆ ಸಿದ್ಧವಾಗುತ್ತಿದ್ದಾರೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rumours about the health of actor Rajnikanth, who is currently in the U.S. on vacation, sent his fans into a tizzy on Thursday. But the actor’s office assured he was fine.
Please Wait while comments are loading...