ಕೇಂದ್ರ ಸಚಿವ ಸ್ಥಾನದ ಗುಸುಗುಸು ಸ್ಟಾರ್ಟ್: ಬಿಜೆಪಿ, ಟಿಡಿಪಿ, ಜೆಡಿಯು ಬಳಿ ಇರುವ ಖಾತೆಗಳು ಯಾವುವು?
ದೇಶದಲ್ಲಿ 18ನೇ ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ ಮ್ಯಾಜಿಕ್ ನಂಬರ್ ದಾಟಿದೆ. ಈ ಬಾರಿಯೂ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಬೇಕಿದ್ದ ಸ್ಥಾನಗಳು ಇಲ್ಲದೇ ಇರುವುದರಿಂದ ಮತ್ತೆ ಎನ್‌ಡಿಎ ಮೈತ್ರಿ ಕೂಟಗಳತ್ತ ಮುಖ ಮಾಡಿದೆ.
ಬುಧವಾರ ರಾತ್ರಿ ದೆಹಲಿಯಲ್ಲಿ ನಡೆದ ಎನ್‌ಡಿಎ ಮೈತ್ರಿ ಕೂಟದ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಎಲ್ಲ ಪಕ್ಷಗಳು ಸಚಿವ ಸ್ಥಾನಕ್ಕೆ ಆಫರ್ ಇಟ್ಟಿವೆ. ಅಲ್ಲದೆ ಇನ್ನು ದೊಡ್ಡ ಸಂಖ್ಯೆಯನ್ನು ಹೊಂದಿರುವ ಪಕ್ಷಗಳು ಕ್ಯಾಬಿನೆಟ್ ಸ್ಥಾನದ ಮೇಲೆ ಕಣ್ಣು ನೆಟ್ಟಿವೆ.

ಕೆಳದ ಎರಡು ಬಾರಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರಿಂದ ಸಚಿವ ಸ್ಥಾನ ಹಂಚುವ ತಲೆ ನೋವು ಅವರಿಗೆ ಇರಲಿಲ್ಲ. ಆದರೆ ಈ ಬಾರಿ ಈ ಚಿಂತೆ ಬಿಜೆಪಿಗೆ ಬಹುವಾಗಿ ಕಾಡಲಿದೆ. ಆದರೆ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿರುವ ಬಿಜೆಪಿ, ಮೈತ್ರಿ ಪಕ್ಷಗಳು ಕೇಳಿರುವ ಸಚಿವ ಸ್ಥಾನಗಳನ್ನು ನೀಡದೇ ಬೇರೆ ವಿಧಿಯಿಲ್ಲದಂತಾಗಿದೆ. ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿ ಪಕ್ಷಗಳು ಬೇಡಿಕೆ ಇಟ್ಟಿರುವ ಸಚಿವ ಸ್ಥಾನದ ಬಗ್ಗೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ.
ಬಿಜೆಪಿಗೆ ಯಾವೆಲ್ಲಾ ಖಾತೆ ಸಿಗಬಹುದು?
240 ಲೋಕಸಭಾ ಸ್ಥಾನಗಳಲ್ಲಿ ಜಯ ಸಾಧಿಸಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆ ಸೇರಿದಂತೆ ಪ್ರಮುಖ ಐದು ಖಾತೆಗಳು ಬಿಜೆಪಿ ತೆಕ್ಕೆಗೆ ಸೇರುವ ಸಾಧ್ಯತೆ ಇದೆ. ಅದ್ರಲ್ಲೂ ರೈಲ್ವೈ, ಗೃಹ, ಹಣಕಾಸು, ರಕ್ಷಣಾ, ಕಾನೂನು ಹಾಗೂ ಐಟಿ ಅಂತಹ ಖಾತೆಗಳು ಬಿಜೆಪಿಗೆ ಸಿಗುವ ಸಾಧ್ಯತೆ ಇವೆ. ಇನ್ನು ಕರ್ನಾಟಕದಲ್ಲಿ 17+2 ಸ್ಥಾನಗಳನ್ನು ಗೆಲ್ಲಿಸಿಕೊಟ್ಟ ರಾಜ್ಯಕ್ಕೆ ಕೇಂದ್ರ ಏನು ನೀಡುತ್ತದೆ ಎಂದು ಕಾದು ನೋಡಬೇಕಿದೆ.

ಜೆಡಿಯುಗೆ ಸಿಗವಹುದಾದ ಖಾತೆಗಳು?
ಬಿಹಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಯು ಭರ್ಜರಿ ಗೆಲುವು ದಾಖಲಿಸಿವೆ. ಹೀಗಾಗಿ ಜೆಡಿಯುಗೂ ಪ್ರಮುಖ ಖಾತೆಗಳಲ್ಲಿ ಕೆಲವು ಸಿಗುವ ಸಾಧ್ಯತೆ ದಟ್ಟವಾಗಿದೆ. ಅಂದಹಾಗೆ ಜೆಡಿಯು ರೈಲು ಖಾತೆಯತ್ತ ಕಣ್ಣು ನೆಟ್ಟಿದೆ ಎಂದು ತಿಳಿದು ಬಂದಿದೆ. ಗ್ರಾಮೀಣಾಭಿವೃದ್ಧಿ, ಕೃಷಿ, ಸೇರಿದಂತೆ ಎರಡು ರಾಜ್ಯ ಖಾತೆಗಳು ಸಿಗುವ ಸಂಭವವಿದೆ.
ಟಿಡಿಪಿಗೆ ಬಂಪರ್
ತೆಲಂಗಾಣದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಭರ್ಜರಿ ಜಯ ದಾಖಲಿಸಿರುವ ಚಂದ್ರಬಾಬು ನಾಯ್ಡು ಮುಂದಾಳತ್ವದ ಟಿಡಿಪಿ ಪಕ್ಷಕ್ಕೂ ದೊಡ್ಡ ಬಂಪರ್ ಸಿಗುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ, ಟಿಡಿಪಿಗೆ ಲೋಕಸಭಾ ಸ್ಪೀಕರ್ ಸೇರಿದಂತೆ ಗ್ರಾಮಿಣಾಭಿವೃದ್ಧಿ, ಬಂದರು, ರಸ್ತೆ ಹಾಗೂ ಸಾರಿಗೆ, ಜಲ ಶಕ್ತಿ ಖಾತೆಗಳು ಟಿಡಿಪಿ ತೆಕ್ಕೆಗೆ ಜಾರುವ ಸಂಭವವಿದೆ.
ಇನ್ನು ಎಲ್‌ಜೆಪಿ ಹಾಗೂ ಶಿವಸೇನೆಗೆ ಒಂದು ಕ್ಯಾಬಿನೇಟ್ ಪೋಸ್ಟ್, ಎರಡು ರಾಜ್ಯ ಖಾತೆಗಳು ಸಿಗುವ ಸಂಭವವಿದೆ. ಜೆಡಿಎಸ್ ಕೃಷಿ ಖಾತೆಯ ಮೇಲೆ ಕಣ್ಣು ನೆಟ್ಟಿದೆ.












Click it and Unblock the Notifications