ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತ ರಾಮಚಂದ್ರನ್ ಕೊಲೆ

Posted By:
Subscribe to Oneindia Kannada

ಕಣ್ಣೂರು, ಜುಲೈ 12: ಕೇರಳದಲ್ಲಿ ರಾಜಕೀಯ ಪ್ರೇರಿತ ಕೊಲೆಗಳು ಮುಂದುವರೆದಿದೆ. ಸಿಪಿಐ(ಎಂ) ಮತ್ತು ಬಿಜೆಪಿಯ ಇಬ್ಬರು ಕಾರ್ಯಕರ್ತರು ಹತ್ಯೆಯಾಗಿದ್ದಾರೆ.

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಪಯ್ಯನ್ನೂರಿನಲ್ಲಿ ಸಿಪಿಐ (ಎಂ) ಕಾರ್ಯಕರ್ತ ಧನರಾಜ್​ಎಂಬವರ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಕೊಲೆ ವರದಿಯಾಗಿದೆ.[ಸಾಮಾಜಿಕ ಭದ್ರತೆ: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?]

RSS and Majdoor Sangh functionary CK Ramachandran Killed

ಮೊದಲ ಕೊಲೆ ಮಾಡಿದ ಅದೇ ಗುಂಪು ಮಂಗಳವಾರ ಮುಂಜಾನೆ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ಹಾಗೂ ರಾಷ್ಟೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್) ​ನ ಸಕ್ರಿಯ ಕಾರ್ಯಕರ್ತ ಸಿ.ಕೆ ರಾಮಚಂದ್ರನ್ ಅವರನ್ನು ಕಚ್ಚಾ ಬಾಂಬ್ ಎಸೆದು ಕೊಲೆ ಮಾಡಿದೆ. ಈ ಎರಡು ಸರಣಿ ಕೊಲೆಗಳ ನಂತರ ಇದೀಗ ಕಣ್ಣೂರಿನಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ.[ಕೇರಳ ವಿಧಾನಸಭೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ]

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡರಂಗ ಪಕ್ಷ ಗೆಲುವು ಸಾಧಿಸಿ, ಅಧಿಕಾರ ಹಿಡಿದ ಬೆನ್ನಲ್ಲೇ ಇಂಥ ದುರ್ಘಟನೆಗಳು ಹೆಚ್ಚಾಗುತ್ತಿವೆ. ಪಯ್ಯನ್ನೂರಿನ ಆಟೋರಿಕ್ಷಾ ಚಾಲಕರ ಸಂಘದ ಮುಖಂಡರಾಗಿ, ಚಾಲಕರಾಗಿ ಸಿಕೆ ರಾಮಚಂದ್ರನ್ ಅವರು ಜನಪ್ರಿಯತೆ ಗಳಿಸಿದ್ದರು.

ಸಿಕೆ ರಾಮಚಂದ್ರನ್ ಅವರ ಹತ್ಯೆಯನ್ನು ಆರೆಸ್ಸೆಸ್, ಬಿಎಂಸ್ ಹಾಗೂ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಮಜ್ದೂರ್ ಸಂಘದವರು ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿವೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
RSS Swayamsevak and local Bharatiya Majdoor Sangh (BMS) functionary CK Ramachandran, 52years, was brutally murdered by miscreants on early morning of Tuesday at Payyannur of Kannur district, Kerala.
Please Wait while comments are loading...