ಆರ್‌ಎಸ್‌ಎಸ್ ಚೆಡ್ಡಿ ಸುಡುತ್ತಿರುವ ಪೋಸ್ಟ್: ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್, ಬಿಜೆಪಿ ಸಮರ
ಬೆಂಗಳೂರು, ಸೆಪ್ಟೆಂಬರ್ 12: ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಿಂದೆ ಬಳಸುತ್ತಿದ್ದ ಖಾಕಿ ಚೆಡ್ಡಿಯನ್ನು ಸುಡುತ್ತಿರುವ ಟ್ವೀಟ್‌ನ್ನು ಕಾಂಗ್ರೆಸ್ ಮಾಡಿದ್ದು, ಇದು ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿಯವರು ರಾಷ್ಟ್ರವ್ಯಾಪಿ ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ಹೊಸ ಘರ್ಷಣೆಯನ್ನು ಇದು ಉಂಟುಮಾಡಿದೆ. #BharatJodoYatra ಎಂಬ ಹ್ಯಾಶ್‌ಟ್ಯಾಗ್ ಬಳಸಿ, ಕಾಂಗ್ರೆಸ್ ಇಂದು ಬೆಳಗ್ಗೆ ತನ್ನ ಟ್ವೀಟ್‌ನಲ್ಲಿ ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ-ಆರ್‌ಎಸ್‌ಎಸ್ ಮಾಡಿದ ಹಾನಿಯನ್ನು ನಿಯಂತ್ರಿಸಲು ಹಂತ ಹಂತವಾಗಿ ನಾವು ನಮ್ಮ ಗುರಿಯನ್ನು ತಲುಪುತ್ತೇವೆ ಎಂದಿದ್ದು. ಚಿತ್ರದಲ್ಲಿ ಆರ್‌ಎಸ್‌ಎಸ್‌ನ ಖಾಕಿ ಚೆಡ್ಡಿಗೆ ಬೆಂಕಿ ಹೊತ್ತಿಸಿ ಇನ್ನೂ 145 ದಿನಗಳು ಬಾಕಿಯಿದೆ ಎಂಬ ಶೀರ್ಷಿಕೆ ನೀಡಲಾಗಿದೆ.
ಸಂಘಟನೆಯ ಹೆಗ್ಗುರತಾಗಿರುವ ಖಾಕಿ ಚೆಡ್ಡಿಯನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಟ್ವೀಟ್ ಮಾಡಿ 1984ರಲ್ಲಿ ಕಾಂಗ್ರೆಸ್‌ನ ಬೆಂಕಿ ದೆಹಲಿಯನ್ನು ಸುಟ್ಟಿತು. ಇದು 2002ರಲ್ಲಿ ಗೋಧ್ರಾದಲ್ಲಿ 59 ಕರ ಸೇವಕರನ್ನು ಜೀವಂತವಾಗಿ ಸುಟ್ಟು ಹಾಕಲಾಯಿತು. ಅವರು ಮತ್ತೆ ಹಿಂಸೆಯ ಕರೆ ನೀಡಿದ್ದಾರೆ. ರಾಹುಲ್ ಗಾಂಧಿ ಭಾರತ ದೇಶದ ವಿರುದ್ಧ ಹೋರಾಡುವುದರೊಂದಿಗೆ ಸಾಂವಿಧಾನದ ಮೇಲೆ ನಂಬಿಕೆಯಿರುವ ರಾಜಕೀಯ ಪಕ್ಷವಾಗುದರಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿದೆ ಎಂದಿದ್ದಾರೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬೆಂಕಿ
ಈ ಚಿತ್ರವು ಕಾಂಗ್ರೆಸ್ ಮಾಡುತ್ತಿರುವ ರಾಜಕಾರಣದ ಸಂಕೇತವಾಗಿದೆ. ಇದು ದೇಶದಲ್ಲಿ ಬೆಂಕಿ ಹೊತ್ತಿಸುವ ಪ್ರಯತ್ನವಾಗಿದೆ. ಅವರು ಈ ಹಿಂದೆ ಹಚ್ಚಿದ ಬೆಂಕಿಯು ಭಾರತದ ಹೆಚ್ಚಿನ ಭಾಗಗಳಲ್ಲಿ ಜನರನ್ನು ಬಲಿಪಡೆದಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಉಳಿದಿರುವ ಉರಿಗಳು ಸಹ ಶೀಘ್ರದಲ್ಲೇ ಬೂದಿಯಾಗುತ್ತವೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ. .

ದ್ವೇಷದ ಬೆಂಕಿಯನ್ನು ಹೊತ್ತಿಸುವವರು
ಇನ್ನೂ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, "ಕಾಂಗ್ರೆಸ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಪ್ರಯತ್ನಿಸುತ್ತಿದೆ. ಈ ಟ್ವೀಟ್ ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸುತ್ತದೆಯೇ ಹೊರತು ಬೇರೇನೂ ಅಲ್ಲ, ಇದನ್ನು ಗಾಂಧಿ ಕುಟುಂಬದ ನಿರ್ದೇಶನದ ಮೇಲೆ ಮಾಡಲಾಗಿದೆ," ಎಂದು ಪಾತ್ರ ಹೇಳಿದರು.
ಆದರೆ ಕಾಂಗ್ರೆಸ್ ತನ್ನ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದೆ. ದ್ವೇಷದ ಬೆಂಕಿಯನ್ನು ಹೊತ್ತಿಸುವವರು, ಮತಾಂಧತೆ ಮತ್ತು ಪೂರ್ವಾಗ್ರಹದ ಬೆಂಕಿಯನ್ನು ಹೊತ್ತಿಸುವವರು ಕೆಲವು ವಿಷಯಗಳನ್ನು ಅದೇ ಬಗೆಯಲ್ಲಿ ಹಿಂದಕ್ಕೆ ತೆಗೆದುಕೊಳ್ಳಲು ಸಿದ್ಧರಾಗಿರಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ರಾಷ್ಟ್ರವನ್ನು ಒಂದುಗೂಡಿಸುವ ಗುರಿ
ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ದ್ವೇಷ, ಪೂರ್ವಾಗ್ರಹ, ಸುಳ್ಳು ಮತ್ತು ಸುಳ್ಳನ್ನು ಬಿತ್ತರಿಸಿದ ವಿಧಾನವನ್ನು ನಾನು ಎಣಿಸಲು ಹೋಗಲ್ಲ. ಆರೆಸ್ಸೆಸ್ ಮತ್ತು ಬಿಜೆಪಿಯು ಕಾಂಗ್ರೆಸ್‌ನಿಂದ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದಿಲ್ಲ. ಆದರೆ, ಕಾಂಗ್ರೆಸ್ ಆಕ್ರಮಣಕಾರಿಯಾದಾಗ ಅವರು ಹೀಗೆ ಹಿಂದೆ ಸರಿಯುತ್ತಾರೆ. ರಾಹುಲ್ ಗಾಂಧಿಯವರು ಕಳೆದ ವಾರ ದೇಶಾದ್ಯಂತ 150 ಕಿಮೀ "ಭಾರತ್ ಜೋಡೋ'' ಯಾತ್ರೆ ಪ್ರಾರಂಭಿಸಿದ್ದಾರೆ. ದ್ವೇಷದ ಸಿದ್ಧಾಂತದಿಂದ ವಿಭಜಿತವಾಗಿರುವ ರಾಷ್ಟ್ರವನ್ನು ಒಂದುಗೂಡಿಸುವ ಗುರಿಯನ್ನು ಅವರ ಅಭಿಯಾನ ಹೊಂದಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಹೇಳಿದ್ದಾರೆ.

ರಾಹುಲ್ ಗಾಂಧಿ ನೋಡಲು ನೂರಾರು ಜನ
ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಎರಡನೇ ದಿನವು ರಾಹುಲ್ ಗಾಂಧಿ ವೆಲ್ಲಯಾಣಿ ಜಂಕ್ಷನ್‌ನಿಂದ ಪಾದಯಾತ್ರೆಯನ್ನು ಪ್ರಾರಂಭಿಸುತ್ತಿದ್ದಂತೆ ಭಾರಿ ಜನಸ್ಪಂದನೆ ಸಿಕ್ಕಿದೆ. ಯಾತ್ರೆಗೆ ಸೇರಲು ಬರುವವರಲ್ಲದೆ ಕೇರಳದ ವಯನಾಡಿನ ಸಂಸದರೂ ಆಗಿರುವ ಗಾಂಧಿ ನೇತೃತ್ವದ ಪಾದಯಾತ್ರೆಯನ್ನು ವೀಕ್ಷಿಸಲು ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ಜನರು ಸಾಲುಗಟ್ಟಿ ನಿಂತಿದ್ದರು. ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು 150 ದಿನಗಳ ಅವಧಿಯಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 3,570 ಕಿ.ಮೀ. ಕ್ರಮಿಸುವ ಗುರಿ ಹೊಂದಿದೆ.












Click it and Unblock the Notifications