ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಿ, ಮಾಜಿ ಸಂಸದರ ಉಚಿತ ರೈಲು ಪ್ರಯಾಣಕ್ಕೆ 62 ಕೋಟಿ ಖರ್ಚು

|
Google Oneindia Kannada News

ನವದೆಹಲಿ ಜುಲೈ 03: ಹಾಲಿ ಸಂಸದರು ಮತ್ತು ಮಾಜಿ ಸಂಸದರಿಗೆ ಒದಗಿಸಲಾದ ಉಚಿತ ಹವಾ ನಿಯಂತ್ರಿತ (ಎಸಿ) ರೈಲು ಪ್ರಯಾಣ ಸೇವೆಗಾಗಿ ಕಳೆದ ಐದು ವರ್ಷದಲ್ಲಿ ಒಟ್ಟು 62 ಕೋಟಿ ರೂ. ವ್ಯಯಿಸಲಾಗಿದೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ, ಸಾಂಕ್ರಾಮಿಕ ಕಾಲದಲ್ಲೂ ಮಾಜಿ ಸಂಸದರು ಮತ್ತು ಹಾಲಿ ಸಂಸದರು ಈ ಉಚಿತ ಸೇವೆ ಬಳಸಿದ್ದರಿಂದ ಸರ್ಕಾರಿ ಬೊಕ್ಕಸದಿಂದ 2.5ಕೋಟಿ ರೂಪಾಯಿ ಖರ್ಚಾಗಿದೆ. ಮಾಜಿ ಸಂಸದರು ಸಹ AC 2 ಶ್ರೇಣಿಯ ಯಾವುದೇ ರೈಲಿನಲ್ಲಿ ಸಹವರ್ತಿಯೊಂದಿಗೆ ಅಥವಾ AC 1 ನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸಲು ಅರ್ಹರಾಗಿರುತ್ತಾರೆ.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ?ಕ್ಯಾಪ್ಟನ್ ಅಮರಿಂದರ್ ಸಿಂಗ್ ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ?

ಪ್ರಸ್ತುತ ಹಾಲಿ ಲೋಕಸಭಾ ಸದಸ್ಯರು ಪ್ರಥಮ ಶ್ರೇಣಿಯ ಹವಾ ನಿಯಂತ್ರಿತ (ಎಸಿ) ರೈಲು ಸೇವೆಯನ್ನು ಉಚಿತವಾಗಿ ಬಳಸಲು ಅರ್ಹರಾಗಿರುತ್ತಾರೆ. ಅಲ್ಲದೇ ಅವರ ಸಂಗಾತಿ ಸಹ ಕೆಲವು ಷರತ್ತುಗಳನ್ನು ಒಪ್ಪಿಕೊಂಡು ಅವರು ಸಹ ರೈಲ್ವೆ ಉಚಿತ ಪ್ರಯಾಣಿಸಲು ಅವಕಾಶ ಇದೆ.

ಇನ್ನು ಮಾಜಿ ಸಂಸದರು ತಮ್ಮ ಸಹಾಯಕರ ಜತೆಗೆ ತೆರಳಬೇಕೆಂದರೆ ದ್ವಿತೀಯ ದರ್ಜೆಯ ಹವಾನಿಯಂತ್ರಿತ (ಎಸಿ-2) ಉಚಿತ ರೈಲು ಸೇವೆ ಬಳಸಬಹುದು. ಅದರಲ್ಲೇ ಮಾಜಿ ಸಂಸದರೊಬ್ಬರೆ ತೆರಳಲು ಬಯಲಿಸಿದ ಹವಾ ನಿಯಂತ್ರಿತ ಮೊದಲ ಶ್ರೇಣಿಯ ರೈಲಿನಲ್ಲೇ ಉಚಿತವಾಗಿ ಪ್ರಯಾಣಿಸಲು ಅವಕಾಶ ಇದೆ ಎನ್ನಲಾಗಿದೆ.

ಪ್ರಧಾನಿ ಮೋದಿ, ಬಿಜೆಪಿ ಮೇಲೆ ಯಾಕೀ ಸಿಟ್ಟು? ಭಯವೇ ಕೆಸಿಆರ್?ಪ್ರಧಾನಿ ಮೋದಿ, ಬಿಜೆಪಿ ಮೇಲೆ ಯಾಕೀ ಸಿಟ್ಟು? ಭಯವೇ ಕೆಸಿಆರ್?

62 ಕೋಟಿ ರೂಪಾಯಿ ಖರ್ಚು

62 ಕೋಟಿ ರೂಪಾಯಿ ಖರ್ಚು

ಈ ರೀತಿಯ ಉಚಿತ ರೈಲು ಸೇವೆ ಬಳಸಿಕೊಂಡ ಹಾಲಿ ಮತ್ತು ಮಾಜಿ ಲೋಕಸಭಾ ಸದಸ್ಯರ ಪ್ರಯಾಣದಿಂದ ಕಳೆದ ಐದು ವರ್ಷಗಳಲ್ಲಿಸರ್ಕಾರದ ಬೊಕ್ಕಸದಿಂದ 62 ಕೋಟಿ ರೂಪಾಯಿ ವ್ಯೆಯಿಸಲಾಗಿದೆ. ಇಷ್ಟು ಹಣದ ಪೈಕಿ ಕೋವಿಡ್ ಪಿಡುಗಿನ ಕಾಲವಾಗಿದ್ದ 2020-21ರ ಒಂದು ವರ್ಷದ ಅವಧಿಯಲ್ಲೇ ಒಟ್ಟು ಸುಮಾರು 2.5 ಕೋಟಿ ರೂ. ಖರ್ಚಾಗಿದೆ ಎಂಬ ಅಂಕಿ ಅಂಶಗಳು ಮಧ್ಯ ಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಎಂಬುವವರು ಸಲ್ಲಿಸಿದ್ದ ಮಾಹಿತಿ ಹಕ್ಕು (ಆರ್‌ಟಿಐ) ಅಡಿ ದೊರೆತ ಉತ್ತರದಿಂದ ಬಹಿರಂಗವಾಗಿದೆ.

ಕೋವಿಡ್ ಕಾಲದಲ್ಲೂ ಉಚಿತ ರೈಲು ಸೇವೆ ಬಳಕೆ

ಕೋವಿಡ್ ಕಾಲದಲ್ಲೂ ಉಚಿತ ರೈಲು ಸೇವೆ ಬಳಕೆ

ಚಂದ್ರಶೇಖರ್ ಗೌರ್ ಅವರ ಆರ್‌ಟಿಐ ಪ್ರಶ್ನೆಗೆ ಲೋಕಸಭೆಯ ಸಚಿವಾಲಯವು ಉತ್ತರಿಸಿದೆ. ಈ ಉತ್ತರದಲ್ಲಿ ಹಾಲಿ ಲೋಕಸಭಾ ಸದಸ್ಯರ ಪ್ರಯಾಣಕ್ಕಾಗಿ ರೈಲ್ವೆ ಇಲಾಖೆಯಿಂದ 35.21 ಕೋಟಿ ರೂ. ಹಾಗೂ 26.82 ಕೋಟಿ ರೂ. ಪ್ರಯಾಣ ಬಿಲ್ ಸ್ವೀಕರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಬಿಲ್ ಗಳು 2017-2018ರ ವರ್ಷದಿಂದ ಕಳೆದ 2021-22 ರ ಸಾಲಿನಲ್ಲಿ ಸಂಚರಿಸಿ ಉಚಿತ ರೈಲು ಪ್ರಮಾಣದ ಶುಲ್ಕವಾಗಿದೆ ಎಂದು ಲೋಕಸಭೆ ಸಚಿವಾಲಯ ಹೇಳಿದೆ.

ಸಚಿವಾಲಯದ ಪ್ರಕಾರ, ಹಾಲಿ ಸಂಸದರು ಹಾಗೂ ಮಾಜಿ ಸಂಸದರು 2020-21ನೇ ಸಾಲಿನ ಕೋವಿಡ್ ಕಾಲದಲ್ಲೂ ಉಚಿತ ರೈಲ್ವೆ ಪ್ರಯಾಣದ ಪಾಸುಗಳನ್ನು ಬಳಸಿದ್ದಾರೆ. ಹೀಗಾಗಿ ಹಾಲಿ ಸಂಸದರ ಪ್ರಯಾಣಕ್ಕಾಗಿ ರೈಲ್ವೆ ಇಲಾಖೆಗೆ 1.29 ಕೋಟಿ ರೂ. ಮತ್ತು ಮಾಜಿ ಸಂಸದರ ಪ್ರಯಾಣಕ್ಕೆ 1.18 ಕೋಟಿ ರೂ. ಕೇಂದ್ರ ಸರ್ಕಾರ ಖರ್ಚು ಮಾಡಿದೆ. ಈ ಕುರಿತ ಬಿಲ್ ಗಳನ್ನುರೈಲ್ವೆ ಇಲಾಖೆಯ ವೇತನ ಹಾಗೂ ಖಾತೆಗಳ ಇಲಾಖೆ ಸರ್ಕಾರ ಕಾರ್ಯದರ್ಶಿಗಳಿಗೆ ರವಾನಿಸಿದೆ.

ಹಿರಿಯ ನಾಗರಿಕರ ವಿನಾಯಿತಿ ಸ್ಥಗಿತ

ಹಿರಿಯ ನಾಗರಿಕರ ವಿನಾಯಿತಿ ಸ್ಥಗಿತ

ಮುಖ್ಯವಾಗಿ ಇತ್ತೀಚೆಗೆ ರೈಲ್ವೆ ಇಲಾಖೆಯು ರೈಲು ಪ್ರಯಾಣದಲ್ಲಿ ದೇಶದ ಕೆಲವು ವರ್ಗದ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ಪ್ರಯಾಣದ ರಿಯಾಯಿತಿಗಳನ್ನು ಸ್ಥಗಿತಗೊಳಿಸಿದೆ. ಆದರೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ಪಡೆಯುವ ಜನಪ್ರತಿನಿಧಿಗಳಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದೆ ಎಂದು ಸಾರ್ವಜನಿಕ ವಲಯದ ಆಕ್ರೋಶಕ್ಕೂ ಗುರಿಯಾಗಿದೆ. ಅಲ್ಲದೇ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ಪ್ರಯಾಣದ ವಿನಾಯಿತಿ ನಿಲ್ಲಿಸಿಕ್ಕೆ ರೈಲ್ವೆ ಇಲಾಖೆ ನಡೆಯನ್ನು ಖಂಡಿಸಲಾಗಿದೆ.

7.31 ಕೋಟಿ ರಿಯಾಯಿತಿ ಸ್ಥಗಿತ

7.31 ಕೋಟಿ ರಿಯಾಯಿತಿ ಸ್ಥಗಿತ

ಮೂಲಗಳ ಪ್ರಕಾರ, 2020ರ ಮಾರ್ಚ್ ತಿಂಗಳಿನಿಂದ 2022ರ ಮಾರ್ಚ್ 30ರ ಮಧ್ಯದ ಅವಧಿಯಲ್ಲಿ ರೈಲ್ವೆ ಇಲಾಖೆಯು ದೇಶದ ಹಿರಿಯ ನಾಗರಿಕರಿಗೆ ನೀಡಬೇಕಿದ್ದ ಸುಮಾರು 7.31 ಕೋಟಿ ಪ್ರಮಾಣದ ರಿಯಾಯಿತಿಯನ್ನು ನೀಡಿಲ್ಲ. ಈ ಹಿರಿಯ ನಾಯಕರ ಪೈಕಿ 60 ವರ್ಷ ವಯಸ್ಸಿಗಿಂತ ಹೆಚ್ಚಿನವರಲ್ಲಿ 4.46 ಕೋಟಿ ಪುರುಷ ನಾಗರಿಕರು ಹಾಗೂ 58 ವರ್ಷಕ್ಕಿಂತ ಮೇಲ್ಪಟ್ಟ 2.84 ಕೋಟಿ ಮಹಿಳಾ ನಾಗರಿಕರಿದ್ದಾರೆ. ಅಲ್ಲದೇ 8,310 ತೃತೀಯ ಲಿಂಗಿಗಳು ಸಹ ಸೇರಿದ್ದಾರೆ ಎನ್ನಲಾಗಿದೆ. ರೈಲ್ವೆ ಇಲಾಖೆ ಹಿರಿಯ ನಾಗರಿಕರಿಗೆ ಇರುವ ರಿಯಾಯಿತಿ ಸೌಲಭ್ಯಗಳನ್ನು ಪುನಃ ಆರಂಭಿಸಬೇಕೆಂಬ ಆಗ್ರಹವು ಇದೇ ವೇಳೆ ಕೇಳಿ ಬಂದಿದೆ.

Recommended Video

ಮೆಕ್ಸಿಕೋದಲ್ಲಿ ಇದೇ ಕಾರಣಕ್ಕೆ ಮೇಯರ್ ಮೊಸಳೆನ ಮದುವೆ ಆಗಿರೋದು !! | OneIndia Kannada

English summary
Free Train Travels of sitting and former loksabha members over the last 5 years have cost Rs 62 crore spent from the central exchequer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X