ಕಳೆದ ಹಣಕಾಸು ವರ್ಷದಲ್ಲಿ 560 ಕೋಟಿ ರು. ಕಪ್ಪು ಹಣ ವಶ

Posted By:
Subscribe to Oneindia Kannada

ನವದೆಹಲಿ, ಜುಲೈ 31: ಕಳೆದ ಹಣಕಾಸು ವರ್ಷದಲ್ಲಿ 562.36 ಕೋಟಿ ರು. ಕಪ್ಪು ಹಣವನ್ನು ಸಂಗ್ರಹಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಹಣಕಾಸು ಗುಪ್ತಚರ ದಳ (ಎಫ್ಐಯು) ಹೇಳಿದೆ.

ಸರ್ಕಾರದ ಪ್ರಯತ್ನದಿಂದ ಸ್ವಿಸ್ ಬ್ಯಾಂಕ್ ಕಪ್ಪು ಹಣ ಇಳಿಕೆ: ಮೋದಿ

ಈ ಬಗ್ಗೆ ವಿವರಣೆಯನ್ನು ನೀಡಿರುವ ಎಫ್ಐಯು, 2014-15ರಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಅನುಮಾನಾಸ್ಪದವಾಗಿ ಜಮೆಯಾಗುತ್ತಿದ್ದ ಹಣದ ಬಗ್ಗೆ ಸುಮಾರು 80 ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಆದರೆ, 2015-16ರಲ್ಲಿ , ಈ ಪ್ರಕರಣಗಳ ಸಂಖ್ಯೆ 1.6 ಕೋಟಿ ಆಗಿತ್ತು ಎಂದು ಹೇಳಿದೆ.

Rs 560 crore black money unearthed during last fiscal

ಕಳ್ಳ ಹಣದ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ, ಈ ಬಗ್ಗೆ ಕಣ್ಣಿಟ್ಟಿದ್ದ ಹಣಕಾಸು ಇಲಾಖೆಯು ಕಾಳಹಣ ದಂಧೆಕೋರರ ಮೇಲೆ ಸಮರ ಸಾರಿತ್ತು. ಇದರ ಪರಿಣಾಮವಾಗಿ, 560 ಕೋಟಿ ರು.ಗಳಷ್ಟು ಕಪ್ಪುಹಣವನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ದಳ ಹೇಳಿದೆ.

ITR Filing : No Extension In Deadline For IT Returns Filing says, IT Department | Oneindia Kannada

ಇಂಥ ಕಾಳಧನಕೋರರನ್ನು ಪತ್ತೆ ಹಚ್ಚಲು ತಂತ್ರಜ್ಞಾನ ನೆರವೂ ಅಪಾರವಾಗಿ ತಮಗೆ ಸಿಕ್ಕಿದೆ ಎಂದು ಎಫ್ಐಯು ಹೇಳಿದೆ. ಆದಾಯ ತೆರಿಗೆ ಇಲಾಖೆಯ ತನ್ನಲ್ಲಿ ಹಲವಾರು ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದರಿಂದಾಗಿಯೇ ಈ ಅಪಾರ ಮೊತ್ತದ ಕಳ್ಳಧನವನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಎಫ್ಐಯು ತಿಳಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least Rs 560 crore black has been unearthed in the last fiscal year, the government has said in a report.
Please Wait while comments are loading...