Highway Toll Pass: ₹3,000 ವಾರ್ಷಿಕ ಟೋಲ್ ಪಾಸ್ ವ್ಯವಸ್ಥೆ ಶುರು: 200 ವಹೀವಾಟು ಬಳಿಕ ಮುಂದೇನು?
Toll Fastag Annual Pass: ಭಾರತದ ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್ ಶುಲ್ಕ ಕಟ್ಟುವಾಗ ಉಂಟಾಗುತ್ತಿದ್ದ ಸಮಸ್ಯೆಗಳಿಗೆ ಮುಕ್ತಿ ನೀಡಲು ಕೇಂದ್ರ ಹೆದ್ದಾರಿ ಸಚಿವಾಲಯ ಘೋಷಿಸಿದ ಹೊಸ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ವ್ಯವಸ್ಥೆಯು ಇಂದು ಆಗಸ್ಟ್ 15ರಿಂದ ಕರ್ನಾಟಕ ಸೇರಿದಂತೆ ಭಾರತಾದ್ಯಂತ ಜಾರಿಗೆ ಬಂದಿದೆ. 3,000 ರೂಪಾಯಿಯ ಪಾಸ್ ಇದಾಗಿದ್ದು, ಇದರ ಪ್ರಯೋಜನ, ಯಾವ ವಾಹನಗಳಿಗೆ ಅನ್ವಯವಾಗುತ್ತದೆ?, 200 ವಹೀವಾಟು ಬಳಿಕ ಮುಂದೇನು ಎಂಬ ಪೂರ್ಣ ವಿವರ ಇಲ್ಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಯೋಜನೆ ಈಗಾಗಲೇ ಘೋಷಿಸಿದೆ. ಅದನ್ನು ಆಗಸ್ಟ್ 15 ರಿಂದ ಆರಂಭಿಸುತ್ತಿದೆ. ಈ ಯೋಜನೆ ಆಗಾಗ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಕಟ್ಟುವಾಗ ಪ್ರಯಾಣಿಕರಿಗೆ ಉಂಟಾಗುತ್ತಿದ್ದ ಸಣ್ಣ ಪುಟ್ಟಣ ಸಮಸ್ಯೆ ಹಾಗೂ ಪ್ರಿಪೇಯ್ಡ್ ಪರಿಹಾರ ಒದಗಿಸುತ್ತದೆ. 3,000 ರೂಪಾಯಿ ಕೊಟ್ಟು ಒಮ್ಮೆ ಪಾಸ್ ಪಡೆದರೆ ನೀವು ಒಂದು ವರ್ಷ ಪೂರ್ತಿ 200 ಟೋಲ್ ಕ್ರಾಸಿಂಗ್‌ಗಾಗಿ ಬಳಸಬಹುದಾಗಿದೆ. ಮುಂದಿನ ವರ್ಷ ಮತ್ತೆ ನಿಗದಿತ ಶುಲ್ಕ ನೀಡಿ ಮತ್ತೆ ಪಾಸ್ ಪಡೆಯಬಹುದಾಗಿದೆ.

FASTag ವಾರ್ಷಿಕ ಪಾಸ್
ವಾರಗಳ ಹಿಂದೆ ಈ FASTag ವಾರ್ಷಿಕ ಪಾಸ್ ಮಾಹಿತಿ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಹ ಮಾಹಿತಿ ನೀಡಿದ್ದರು. ಆಗಸ್ಟ್ 15ರಿಂದ ಈ ವ್ಯವಸ್ಥೆ ಲೋಕಾರ್ಪಣೆ ಆಗಲಿದೆ ಎಂದಿದ್ದರು. ವಾಣಿಜ್ಯೇತರ ಖಾಸಗಿ ವಾಹನಗಳಿಗಾಗಿ ಈ FASTag ವಾರ್ಷಿಕ ಪಾಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ವಾಹನ ಸವಾರರು ಪಾಸ್ ಪಡೆದು ಸರಾಗ ಚಾಲನೆ ಮಾಡಬಹುದಾಗಿದೆ.
FASTag ವಾರ್ಷಿಕ ಪಾಸ್ ಪ್ರಯೋಜನಗಳು ಏನು?
ಹೆದ್ದಾರಿಯಲ್ಲಿನ ಸುಗಮ ಪ್ರಯಾಣಕ್ಕೆ ಈ ಯೋಜನೆ ಪೂರಕ ವಾತಾವರಣ ನಿರ್ಮಿಸುತ್ತದೆ. ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುತ್ತದೆ. ಕೆಲವೊಮ್ಮೆ ಫಾಸ್ಟ್ಯಾಗ್ ಇದ್ದರು ಎರಡು ಬಾರಿ ಹಣ ಕಡಿತ, ಹೆಚ್ಚಿನ ಹಣ ಕಡಿತ, ಇಲ್ಲವೇ ಹಣ ಪಾವತಿಯಲ್ಲಿನ ತಾಂತ್ರಿಕ ವಿಳಂಬದಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ದೀರ್ಘಕಾಲದವರೆಗೆ ವಾಹನ ಸವಾರರು ತೊಂದರೆ ಇಲ್ಲದ ಚಾಲನೆ ಮಾಡಬಹುದಾಗಿದೆ. ಮುಖ್ಯವಾಗಿ ಟೋಲ್ ಬೂತ್ ಬಳಸಿ ದೈನಂದಿ ಸಂಚಾರ ಮಾಡುವ ವಾಹನ ಸಾರರಿಗೆ ಈ ಪಾಸ್ ವ್ಯವಸ್ಥೆ ಹೆಚ್ಚು ಪ್ರಯೋಜನಕ್ಕೆ ಬರಲಿದೆ.
ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ 200 ಟೋಲ್ ಕ್ರಾಸಿಂಗ್‌ಗಳು ಅಥವಾ ಒಂದು ವರ್ಷದ ಮಾನ್ಯತೆ ಸೌಲಭ್ಯ ನೀಡುತ್ತದೆ. ಪ್ರಸ್ತುತ ವ್ಯವಸ್ಥೆಯಂತೆ ಸಂಪರ್ಕರಹಿತ ವಹಿವಾಟುಗಳಿಗೆ ಇದರಿಂದ ಉತ್ತೇಜನ ಸಿಕ್ಕಂತಾಗುತ್ತದೆ. ಪಾಸ್ ಪಡೆಯದೇ ಎಂದಿನಂತೆ ಫಾಸ್ಟ್ಯಾಗ್ ವ್ಯವಸ್ಥೆಯು ಮುಂದುವರಿಯಲಿದೆ. ಸದ್ಯ ಫಾಸ್ಟ್‌ಟ್ಯಾಗ್ ಬಳಕೆದಾರರು ವಾರ್ಷಿಕ ಚಂದಾದಾರಿಕೆಗೆ ಅಪ್‌ಗ್ರೇಡ್ ಆಗಬಹುದು. ತೊಂದರೆ ಮುಕ್ತ ಸಂಚಾರ ನಿಮ್ಮದಾಗಿಸಿಕೊಳ್ಳಬಹುದು.
ಟೋಲ್ ಪಾಸ್ ಪಡೆಯುವುದು ಹೇಗೆ?
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿರುವಂತೆ ಈ FASTag ವಾರ್ಷಿಕ ಪಾಸ್ ಪಡೆಯುವವರು ನಿಮ್ಮ ವಾಹನ ಸಂಖ್ಯೆ ಮತ್ತು FASTag ಯಟಿ ಬಳಸಿ ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್ ಮೂಲಕ ಪಡೆಯಬಹುದು.ಇಲ್ಲವೇ https://morth.nic.in/nhai ಈ ಅಧಿಕೃತ ವೆಬ್‌ಸೈಟ್ ಗೆ ಭಟಿ ನೀಡಿ ಪಾಸ್ ಖರೀದಿಸಬಹುದು. ನಂತರ FASTag ಸಕ್ರಿಯ ಮತ್ತು ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಂಡು 3,000 ರೂಪಾಯಿ ಹಣ ಪಾವತಿಸಿದರೆ ತಕ್ಷಣವೇ ನಿಮ್ಮ ವಾರ್ಷಿಕ ಪಾಸ್ ಬಳಕೆಗೆ ಸಕ್ರಿಯವಾಗುತ್ತದೆ. ಈ ಪಾಸ್ ಅವಧಿ ಸಕ್ರಿಯಗೊಂಡ ದಿನದಿಂದ ಒಂದು ವರ್ಷದ ವರೆಗೆ ಚಾಲ್ತಿಯಲ್ಲಿರುತ್ತದೆ.
200 ಬಾರಿ ಸಂಚಾರ/ವಹೀವಾಟು ಬಳಿಕೆ ಮುಂದೇನು?
ಒಂದು ವರ್ಷ ಮುಗಿದ ಬಳಿಕ ಇಲ್ಲವೇ ಅವಧಿಗೂ ಮೊದಲೇ 200 ಬಾರಿ ನೀವು ಟೋಲ್ ಕ್ರಾಸ್ ಮಾಡಿದರೆ ತದನಂತರ FASTag ವಾರ್ಷಿಕ ಪಾಸ್ ನಿಂದ ಸ್ವಯಂಚಾಲಿತವಾಗಿ ಸಾಮಾನ್ಯ FASTag ವ್ಯವಸ್ಥೆಗೆ ಮರಳುತ್ತದೆ. ಇದನ್ನು ನೀವು ಗಮನಿಸಿಕೊಂಡು ವಾರ್ಷಿಕ ಪಾಸ್ ಪ್ರಯೋಜನ ಮತ್ತೆ ಪಡೆಯಲು ವಾಹನ ಸವಾರರು ಮತ್ತೆ ಅರ್ಜಿ ಸಲ್ಲಿಸಿ ಪುನಃ 3,000 ರೂಪಾಯಿ ಪಾವತಿಸಿಬೇಕು. ಒಂದು ವರ್ಷದ ಬಳಿಕ ಸ್ವಯಂ-ನವೀಕರಣ ಅವಕಾಶ ಇರುವುದಿಲ್ಲ. ಈ ಪಾಸ್ ಖರೀದಿ ದಿನದಿಂದ ಒಂದು ವರ್ಷ ಇಲ್ಲವೇ 200 ಬಾರಿ ಟೋಲ್ ಕ್ರಾಸಿಂಗ್‌ವರೆಗೆ ಸಕ್ರಿಯವಾಗಿರುತ್ತದೆ ಎಂದು ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿದೆ.












Click it and Unblock the Notifications