ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ದಾರ್ ಪ್ರತಿಮೆಗೆ 200 ಕೋಟಿ ಟ್ವೀಟ್ ಲೋಕದಲ್ಲಿ ಶಾಕ್

By Mahesh
|
Google Oneindia Kannada News

ಬೆಂಗಳೂರು, ಜು.10: ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಾಣ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಬಜೆಟ್ ನಲ್ಲಿ 200 ಕೋಟಿ ರು ಅನುದಾನ ಸಿಕ್ಕಿರುವುದನ್ನು ಕಂಡು ಸಾಮಾಜಿಕ ಜಾಲ ತಾಣ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ದಿಗ್ಭ್ರಮೆ ವ್ಯಕ್ತವಾಗಿದೆ.

ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 100 ಕೋಟಿ ರು ನೀಡಿರುವ ಅರುಣ್ ಜೇಟ್ಲಿ, ಸರ್ದಾರ್ ಹೆಸರಿನಲ್ಲಿ ನಿರ್ಮಿಸುತ್ತಿರುವ ಪ್ರತಿಮೆಗೆ ಸೌಲಭ್ಯ ಒದಗಿಸಲು ಗುಜರಾತ್ ಸರ್ಕಾರಕ್ಕೆ 200 ಕೋಟಿ ರು ನೀಡುತ್ತಿರುವುದೇಕೆ ಎಂದು ಪ್ರಶ್ನಿಸಲಾಗಿದೆ.[ಜೇಟ್ಲಿ 'ಸ್ಮಾರ್ಟ್' ಬಜೆಟ್ ಹೈಲೈಟ್ಸ್]

ಸ್ವತಂತ್ರ ಭಾರತದ ಪ್ರಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ನೆನಪಿಗಾಗಿ 'ಏಕತೆಯ ಪ್ರತಿಮೆ'ಯನ್ನು ನಿರ್ಮಿಸಲು ರೈತರಿಂದ ಕಬ್ಬಿಣದ ಚಿಕ್ಕ ಚಿಕ್ಕ ತುಂಡುಗಳನ್ನು ಸಂಗ್ರಹಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಆರಂಭಿಸಿ ವರ್ಷ ಕಳೆದಿದೆ.

ಉಕ್ಕಿನ ಮನುಷ್ಯರೆಂದೇ ಖ್ಯಾತರಾದ ಸರ್ದಾರ್ ವಲ್ಲಭಬಾಯ್ ಪಟೇಲ್‌ರ ಈ ಬೃಹತ್ ಪ್ರತಿಮೆಯು 182 ಮೀಟರ್ (392 ಅಡಿ) ಎತ್ತರವಿರುವುದು ಹಾಗೂ ಅದನ್ನು ದಕ್ಷಿಣ ಗುಜರಾತ್‌ನಲ್ಲಿ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಎದುರಿನಲ್ಲಿ ನಿರ್ಮಿಸಲಾಗುತ್ತಿದೆ. [ಜೇಟ್ಲಿ ಬಜೆಟ್ ಬಗ್ಗೆ ಆತಂಕದ ಪ್ರತಿಕ್ರಿಯೆ]

ಒಟ್ಟು ಯೋಜನಾ ವೆಚ್ಚ 2,063 ಕೋಟಿ ರು ಗೂ ಅಧಿಕ ಎಂದು ಗುಜರಾತ್ ಸರ್ಕಾರದ ಅಧಿಕೃತ ವೆಬ್ ತಾಣಗಳೇ ಹೇಳಿವೆ. ಈಗ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ನೀಡಲಾಗಿರುವ ಮೊತ್ತಕ್ಕಿಂತ ಸರ್ದಾರ್ ಪ್ರತಿಮೆಗೆ ನೀಡಿರುವ ಮೊತ್ತ ಎಲ್ಲರ ಹುಬ್ಬೇರಿಸಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ಓದಿ...

ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆ

ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆ

ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಾಣ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಬಜೆಟ್ ನಲ್ಲಿ 200 ಕೋಟಿ ರು ಅನುದಾನ ಸಿಕ್ಕಿರುವುದನ್ನು ಕಂಡು ಸಾಮಾಜಿಕ ಜಾಲ ತಾಣ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ದಿಗ್ಭ್ರಮೆ ವ್ಯಕ್ತವಾಗಿದೆ.

ಸರ್ದಾರ್ ಹೆಸರಿನಲ್ಲಿ ಕಂಪನಿ ತೆರೆಯಲೇ

ಸರ್ದಾರ್ ಹೆಸರಿನಲ್ಲಿ ಕಂಪನಿ ತೆರೆಯಲೇ ಎಂದು ಯೋಚಿಸುತ್ತಿದ್ದೇನೆ ನನಗೆ 10,200 ಕೋಟಿ ಅನುದಾನ ಸಿಗಬಹುದು.

ಮೋದಿ ಸೆಲ್ಫಿಗಾಗಿ ಕಾಯುತ್ತಿದ್ದೇನೆ

ನಿಜವಾಗಲೂ ಪ್ರತಿಮೆ ಬಳಿ ನಿಂತು ಪ್ರಧಾನಿ ಮೋದಿ ಸೆಲ್ಫಿ ಫೋಟೋ ತೆಗೆದುಕೊಳ್ಳುವುದನ್ನು ನೋಡಬೇಕಿದೆ.

ಬುದ್ಧಿವಂತ ಅಶಿಕ್ಷಿತರ ಹೇಳಿಕೆ

ಬುದ್ಧಿವಂತ ಅಶಿಕ್ಷಿತರ ಹೇಳಿಕೆ ಸರ್ದಾರ್ ಪ್ರತಿಮೆಗೆ ಹಣ ನೀಡಿಕೆ ಬಗ್ಗೆ ಪ್ರಶ್ನಿಸುವವರು ಕಸಬ್ ಸಾಕಲು ಬಳಸಿದ ಹಣದ ಅರಿವಿದೆಯೇ?

ರಾಜದೀಪ್ ಸರ್ದೇಸಾಯಿ ಹೇಳಿಕೆ

ಪತ್ರಕರ್ತ ರಾಜದೀಪ್ ಸರ್ದೇಸಾಯಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದು ಹೀಗೆ

ಜೇಟ್ಲಿಯೊಳಗೆ ಮಾಯಾವತಿ

ಯಾಕೋ ನಂಗೆ ಜೇಟ್ಲಿಯೊಳಗೆ ಮಾಯಾವತಿ ಅವತಿರುವಂತೆ ಕಾಣುತ್ತಿದೆ

ಏಮ್ಸ್ ಐಐಟಿ ಸಿಕ್ಕಿಲ್ಲ ಪ್ರತಿಮೆಗೆ ದುಡ್ಡು

ಬಜೆಟ್ ನಲ್ಲಿ ಹಂಚಿಕೆ ಸರಿಯಾಗಿ ಆಗಿಲ್ಲ

English summary
The Sardar Patel statue in Gujarat, christened the 'Statue of Unity', appeared to be a non-starter but is back in the news. Here are some of the tweets expressing concern about the budget allocation of the Sardar Patel statue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X