ಶೀಘ್ರದಲ್ಲೇ ಸೈಡಿಗೆ ಸರಿಯಲಿವೆ 2 ಸಾವಿರ ರುಪಾಯಿ ನೋಟು?

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜುಲೈ 26: ಎರಡು ಸಾವಿರ ರುಪಾಯಿ ನೋಟುಗಳ ವಿತರಣೆಯನ್ನು ಸರಕಾರ ಸದ್ಯದಲ್ಲೇ ನಿಲ್ಲಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎರಡು ಸಾವಿರ ರುಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. ಈ ನೋಟನ್ನು ಕಳೆದ ವರ್ಷ ನವೆಂಬರ್ ನಲ್ಲಿ ಪರಿಚಯಿಸಲಾಗಿತ್ತು.

ಸದ್ಯದಲ್ಲೇ ಬರಲಿದೆ 200 ರೂಪಾಯಿಯ ಹೊಸ ನೋಟು

ಇದೀಗ ಈ ನೋಟಿನ ಬದಲಿಗೆ ಇನ್ನೂರು ರುಪಾಯಿ ಸೇರಿದಂತೆ ಉಳಿದ ಮುಖಬೆಲೆಯ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಹೆಚ್ಚಿಸಿದೆ. ಸದ್ಯಕ್ಕೆ ಇನ್ನೂರು ರುಪಾಯಿ ನೋಟುಗಳ ಮುದ್ರಣ ನಡೆಯುತ್ತಿದ್ದು, ಶೀಘ್ರದಲ್ಲೇ ಚಾಲ್ತಿಗೆ ಬರಲಿದೆ.

Rs 2,000 note to be phased out soon?

'ಮಿಂಟ್'ನಲ್ಲಿ ವರದಿಯೊಂದು ಪ್ರಕಟವಾಗಿದೆ. ಅದರಲ್ಲಿ ರಿಸರ್ವ್ ಬ್ಯಾಂಕ್ ನ ಮೂಲಗಳನ್ನು ಉದಾಹರಿಸಿದ್ದು, ಮೂನ್ನೂರಾ ಎಪ್ಪತ್ತು ಕೋಟಿಯಷ್ಟು ಎರಡು ಸಾವಿರ ರುಪಾಯಿ ನೋಟು ಮುದ್ರಿಸಲಾಗಿದೆ. ಅಂದರೆ ಆ ಮೊತ್ತ 7.4 ಲಕ್ಷ ಕೋಟಿ ರುಪಾಯಿ ಆಗುತ್ತದೆ. ಅಂದರೆ ಈ ಹಿಂದೆ ಆರುನೂರಾ ಮೂವತ್ತು ಕೋಟಿ ಒಂದು ಸಾವಿರ ರುಪಾಯಿ ನೋಟು ಚಾಲ್ತಿಯಲ್ಲಿತ್ತು.

ಅದರ ಅಪನಗದೀಕರಣ ಆಗಿತ್ತು. ಆ ಪೈಕಿ ಮುದ್ರಣವಾದ ಶೇ ತೊಂಬತ್ತರಷ್ಟು ನೋಟುಗಳು ಹೊಸ ಐನೂರು ರುಪಾಯಿ ಮುಖಬೆಲೆಯವು. ಈ ವರೆಗೆ ಸಾವಿರದ ನಾನೂರು ಕೋಟಿ ಹೊಸ ನೋಟುಗಳು ಮುದ್ರಣವಾಗಿವೆ. ಈ ಹಿಂದೆ ಚಲಾವಣೆಯಲ್ಲಿದ್ದ ಸಾವಿರದ ಐನೂರಾ ಎಪ್ಪತ್ತು ಕೋಟಿ ಐನೂರು ರುಪಾಯಿ ನೋಟುಗಳನ್ನು ಹಿಂಪಡೆಯಲಾಗಿತ್ತು.

RBI says, 200 Rs Note will be launched very soon | Oneindia Kannada

ಅಂದಹಾಗೆ, ಇಲ್ಲಿ ಕೊಟ್ಟಿರುವುದೆಲ್ಲ ನೋಟುಗಳ ಸಂಖ್ಯೆ. ಮೌಲ್ಯವನ್ನಲ್ಲ ಎಂಬುದು ಗಮನದಲ್ಲಿರಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The government is likely to stop issuing the new Rs 2,000 note soon. Reports suggested that the RBI has stopped the printing of the Rs 2,000 notes that were introduced in November last year.
Please Wait while comments are loading...