ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕೆಟ್ ರದ್ದತಿಯಿಂದಲೇ ರೈಲ್ವೇಗೆ 1,407 ಕೋಟಿ ಆದಾಯ!!

By Sachhidananda Acharya
|
Google Oneindia Kannada News

ಇಂದೋರ್, ಜೂನ್ 29: ಇದು ಅಚ್ಚರಿಯಾದರೂ ಸತ್ಯ. ರೈಲ್ವೇಗೆ ಟಿಕೆಟ್ ರದ್ಧತಿಯಿಂದಲೇ 2016-17ನೇ ಆರ್ಥಿಕ ವರ್ಷದಲ್ಲಿ 1,407 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಮುಂಗಡ ಕಾಯ್ದಿರಿಸಿದ ಟಿಕೆಟ್ ಗಳನ್ನು ಪ್ರಯಾಣಿಕರು ರದ್ದು ಮಾಡಿದಾಗ ವಿಧಿಸುವ ದಂಡದಿಂದ ಈ ಮೊತ್ತ ಸಂಗ್ರಹವಾಗಿದೆ.

ಚಂದ್ರಶೇಖರ್ ಗೌಡ್ ಎಂಬವರು ರೈಲ್ವೇಗೆ ಆರ್.ಟಿ.ಐ ಮೂಲಕ ಪ್ರಶ್ನೆ ಕೇಳಿದಾಗ ಅದಕ್ಕೆ ಇಲಾಖೆ ನೀಡಿರುವ ಉತ್ತರದಲ್ಲಿ ಈ ಮಾಹಿತಿಗಳು ಬಹಿರಂಗವಾಗಿವೆ.

ನಿಮ್ಮ ಮನೆಗೆ ಟ್ರೈನ್ ಟಿಕೆಟ್ ತಲುಪಿಸುತ್ತೇವೆ : ಐಆರ್ ಸಿಟಿಸಿನಿಮ್ಮ ಮನೆಗೆ ಟ್ರೈನ್ ಟಿಕೆಟ್ ತಲುಪಿಸುತ್ತೇವೆ : ಐಆರ್ ಸಿಟಿಸಿ

Rs 1,407 crore income for Railway from ticket cancellation in 2016-17

2015-16ರಲ್ಲಿ 1,123 ಕೋಟಿ ರೂಪಾಯಿ ಟಿಕೆಟ್ ರದ್ಧತಿಯಿಂದ ಬಂದಿದ್ದರೆ, 2016-17ರಲ್ಲಿ 1,407 ಕೋಟಿ ರೂಪಾಯಿ ಬಂದಿದೆ.

ಟಿಕೆಟ್ ಕ್ಯಾನ್ಸಲ್ ಮಾಡುವ ನಿಯಮಾವಳಿಗಳನ್ನು ಕಳೆದ ನವೆಂಬರ್ ನಲ್ಲಿ ಬದಲಾವಣೆ ಮಾಡಲಾಗಿತ್ತು. ಟಿಕೆಟ್ ರದ್ಧತಿಗೆ ವಿಧಿಸಲಾಗುತ್ತಿದ್ದ ದಂಡದ ಹಣವನ್ನು ಎರಡು ಪಟ್ಟು ಹೆಚ್ಚಿಸಲಾಗಿತ್ತು.

ಹೀಗಾಗಿ ಆದಾಯದಲ್ಲಿ ಭಾರೀ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2016-17ರಲ್ಲಿ ಶೇಕಡಾ 25.29ರಷ್ಟು ಆದಾಯ ಹೆಚ್ಚಾಗಿದೆ.

English summary
The Indian Railways collected Rs 1,407 crores through cancellation of reserved tickets on the request of the commuters in financial year Y 2016-17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X