ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಸಾ ನೀಡಿದ ರೋಹ್ಟಕ್ ಸಿಸ್ಟರ್ಸ್ ಗೆ ಸನ್ಮಾನ

|
Google Oneindia Kannada News

ಹರ್ಯಾಣ, ಡಿ. 1 : ಕಾಮುಕರಿಗೆ ಬಸ್ ನಲ್ಲಿ ಸರಿಯಾಗಿ ಗೂಸಾ ನೀಡಿದ ಸಹೋದರಿಯರನ್ನು ಸನ್ಮಾನಿಸಲು ಹರ್ಯಾಣ ಸರ್ಕಾರ ತೀರ್ಮಾನಿಸಿದೆ. ಗಣರಾಜ್ಯೋತ್ಸವದ ವೇಳೆ ರೋಹ್ಟಕ್ ಸಹೋದರಿಯರನ್ನು ಗೌರವಿಸಲಾಗುವುದು ಎಂದು ತಿಳಿಸಿದೆ.

ಕಿರುಕುಳ ನೀಡಲು ಶುರುವಿಟ್ಟುಕೊಂಡ ಮೂವರು ಯುವಕರ ವಿರುದ್ಧ ಹೋರಾಡಿದ ಯುವತಿಯರ ಧೈರ್ಯ ಮೆಚ್ಚಲೇ ಬೇಕು. ಬಸ್ ನಲ್ಲಿಯೇ ಯುವಕರಿಗೆ ಸರಿಯಾದ ಏಟು ನೀಡಿ ಇತರ ಯುವತಿಯರಿಗೆ ಮಾರ್ಗದರ್ಶಕರಾಗಿದ್ದಾರೆ. ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ರಕ್ಷಣೆಗೆ ಇನ್ನಷ್ಟು ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಲಾಗುವುದು ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.[ಯುವತಿ ಕೈ ಹಿಡಿದು ಎಳೆದಾಡಿದ ಕಾಮಾಂಧರ ಸೆರೆ]

sisters

ಯುವತಿಯರಿಗೆ ನಗದು ಬಹುಮಾನ ನೀಡಲಾಗುವುದು. ಇಂಥ ಘಟನೆಯಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದೆ. ಮಹಿಳೆಯರ ರಕ್ಷಣೆಗೆ ಯಾವ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಬೇಕು ಎಂಬ ಮಾಹಿತಿ ಕಲೆಹಾಕುತ್ತಿದೆ ಎಂದು ತಿಳಿಸಿದರು.

ಹೆಣ್ಣು ಮಕ್ಕಳು ಯುವಕರನ್ನು ಥಳಿಸುತ್ತಿದ್ದರೂ ಯಾವ ಪ್ರಯಾಣಿಕರು ಸಹಾಯಕ್ಕೆ ಧಾವಿಸಿರಲಿಲ್ಲ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾಮಾಂಧರಾದ ಕುಲ್ ದೀಪ್, ಮೋಹಿತ್ ಮತ್ತು ದೀಪಕ್ ನನ್ನು ಬಂಧಿಸಲಾಗಿದೆ.[ಯುವತಿ ತೊಡೆ ಮೇಲಿದ್ದ ಟ್ಯಾಟೂ ಕ್ಲಿಕ್ಕಿಸಿದ ಮ್ಯಾನೇಜರ್]

ಎಲ್ಲ ಹೆಣ್ಣು ಮಕ್ಕಳು ಈ ರೀತಿ ಗಟ್ಟಿಗಿತ್ತಿಯರಾಗಿರಬೇಕು. ಈ ರೀತಿಯಲ್ಲೇ ಸಮಾಜದಲ್ಲಿ ಬದಲಾವಣೆ ಪರ್ವ ಆರಂಭವಾಗಬೇಕು. ಹೆಣ್ಣು ಮಕ್ಕಳು ಯಾವ ಬಗೆಯ ವಸ್ತ್ರವನ್ನಾದರೂ ತೊಟ್ಟಿರಲಿ, ಮಹಿಳೆಯರಿಗೆ ಗೌರವ ನೀಡುವುದು ಮುಖ್ಯ ಎಂದು ಕೇಂದ್ರ ಸಚಿವೆ ಉಮಾಭಾರತಿ ಘಟನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

English summary
Haryana government on Monday announced that it will honour the two sisters, who single-handedly took on three alleged molesters in a moving bus, on Republic Day as the girls came in for praise for their bravery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X