ರೋಹಿಂಗ್ಯಾ: ಹರಿಯಾಣದ ನುಹ್‌ನಲ್ಲಿ ಕಾಂಗ್ರೆಸ್‌ನ ನಿಜವಾದ ಬೆಂಬಲಿಗರು ಬಹಿರಂಗ
ಮಮನ್ ಖಾನ್, ಹರಿಯಾಣ ರಾಜ್ಯದ ನುಹ್ ಜಿಲ್ಲೆಯ ಜಿರ್ಕಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಧಾನಸಭೆ ಚುನಾವಣೆಯಲ್ಲಿ 98,441 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಖಾನ್ 1,30,497 ಮತಗಳನ್ನು ಪಡೆದಿದ್ದಾರೆ.
ಆದಾಗ್ಯೂ ಖಾನ್ ಜಯಭೇರಿ ವಿವಾದಕ್ಕೆ ಕಾರಣವಾಗಿದೆ. ಅವರು ಸದ್ಯ ಅಕ್ರಮ ಚಟುವಟಿಕೆಗಳ(ತಡೆ) ಕಾಯ್ದೆ (ಯುಪಿಪಿಎ) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ. ನುಹ್‌ನಲ್ಲಿ ಜುಲೈ 31, 2023ರಲ್ಲಿ ನಡೆದ ಕೋಮು ಗಲಭೆಯಲ್ಲಿ ಅವರ ಪಾತ್ರವಿದೆ ಎಂಬುದು ಆರೋಪ.

ಖಾನ್ ಗೆಲುವಿನ ಹಿಂದೆ ಸ್ಥಳೀಯ ಮುಸ್ಲಿಂ ಸಮುದಾಯದ ಬೆಂಬವಿದೆ ಎಂದು ಅಂದಾಜಿಸಲಾಗುತ್ತಿದೆ, ವರದಿಗಳ ಪ್ರಕಾರ ಅವರು ಸ್ಥಳೀಯವಾಗಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾ ವಲಸಿಗರ ಬೆಂಬಲವನ್ನು ಪಡೆದಿದ್ದಾರೆ.
ಗಮನಾರ್ಹವಾದ ಮುಸ್ಲಿಂ ಸಮಯದಾಯದ ಜನರಿರುವ ಹರಿಯಾಣ ರಾಜ್ಯದ ಒಂದು ಜಿಲ್ಲೆ ನುಹ್. ಜಿಲ್ಲೆಯಲ್ಲಿ ಶೇ 80ರಷ್ಟು ಇದೇ ಸಮಯದಾಯದವರಿದ್ದಾರೆ. ಆದರೆ ಈ ಭೌಗೋಳಿಕತೆ ಬದಲಾಗುತ್ತಾ ಬಂದಿದ್ದು ಅಕ್ರಮವಾಗಿ ರೋಹಿಂಗ್ಯಾ ವಲಸಿಗರು ಬಂದ ಮೇಲೆ. ನುಹ್‌ನಲ್ಲಿ ಹಿಂಸಾಚಾರದ ಬಳಿಕ ಪೊಲೀಸರು ಹಲವಾರು ರೋಹಿಂಗ್ಯಾ ವಲಸಿಗರನ್ನು ಕೋಮು ಸಂಘರ್ಷದಲ್ಲಿ ಭಾಗಿಯಾದ ಶಂಕೆಯ ಮೇಲೆ ಬಂಧಿಸಿದರು.
ಆದರೆ ಇಲ್ಲಿ ಇನ್ನೂ ಬೆಳಕಿಗೆ ಬಾರದ ಹಲವು ಅಂಶಗಳಿವೆ. ಅಕ್ಟೋಬರ್ 7ರಂದು ಆರ್ಗನೈಸರ್ ವೀಕ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿತು. ನುಹ್‌ನ ಮದರಸಾದಲ್ಲಿ ಅಕ್ರಮವಾಗಿ ವಲಸಿಗರಿಗೆ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿದೆ ಎಂದು. ವಿಡಿಯೋದಲ್ಲಿ, ಮದರಸಾದಲ್ಲಿ ತಾತ್ಕಾಲಿಕ ಆಶ್ರಯ ಪಡೆದ ಮಕ್ಕಳು "ಅವಿಶ್ವಾಸಿಗಳನ್ನು ನರಕದಲ್ಲಿ ಸುಡುತ್ತಾರೆ" ಎಂದು ಹೇಳುತ್ತಿರುವುದು ಕೇಳಿಸುತ್ತಿದೆ. ವರದಿಗಳ ಪ್ರಕಾರ, ಸುಮಾರು 400 ಅಕ್ರಮ ವಲಸಿಗರು ಆ ಪ್ರದೇಶದಲ್ಲಿ ವಾಸವಾಗಿದ್ದಾರೆ.
ಶಿಕ್ಷಕರೊಬ್ಬರು ಅವರು ಮಯನ್ಮಾರ್ (ಬರ್ಮಾ) ದೇಶದಕ್ಕೆ ಸೇರಿದವರು ಮತ್ತು ಭಾರತಕ್ಕೆ ಅಕ್ರಮವಾಗಿ ಪ್ರವೇಶ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ನುಹ್‌ನಲ್ಲಿ ಅವರು ಯಾವುದೇ ಸಮಸ್ಯೆಯನ್ನು ಎದುರಿಸಿಲ್ಲ ಮತ್ತು ಅವರು ಅತಿಥಿಗಳಂತೆ ವಾಸಿಸುತ್ತಿದ್ದಾರೆ. ವಿವಿಧ ಮಾಧ್ಯಮಗಳ ಕ್ಯಾಮರಾ ಮುಂದೆ ಅವರು ಮಕ್ಕಳಿಗೆ ಉರ್ದು, ಫಾರ್ಸಿ, ಇಂಗ್ಲಿಶ್, ಹಿಂದಿ ಭಾಷೆಕ ಕಲಿಸುತ್ತೇವೆ ಎಂದು ಹೇಳಿದ್ದಾರೆ.
ಪತ್ರಕರ್ತರಿಗೆ ಮಕ್ಕಳ ಜೊತೆ ಮಾತನಾಡಲು ಸಹ ಅವಕಾಶ ನೀಡಲಾಗಿದೆ. ಅವರು ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದು ಹೇಳುವುದಿಲ್ಲ, 'ಹಫೀಜ್' ರೀತಿ ಆಗಬೇಕು ಎಂಬ ಬಯಕೆ ಹೊಂದಿದ್ದಾರೆ. ಕುರಾನ್ ನೆನಪಿಸಿಕೊಳ್ಳುತ್ತಾರೆ.
ಮಯನ್ಮಾರ್‌ನಲ್ಲಿ 2016ರಲ್ಲಿ ಹಿಂಸಾಚಾರ ಸಂಭವಿಸಿದಾಗ ಬಾಂಗ್ಲಾದೇಶ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶ ಪಡೆದೆ ಎಂದು ಒಬ್ಬ ರೋಹಿಂಗ್ಯಾ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಪಾಸ್‌ಪೋರ್ಟ್ ಮತ್ತು ವೀಸಾದ ಕೊರತೆ ಇದ್ದರೂ ಸಹ ಸ್ಥಳೀಯರ ನೆರವಿನಿಂದ ಗಡಿದಾಟಿದೆ ಎಂದು ಒಪ್ಪಿಕೊಂಡಿದ್ದಾನೆ.
ಮಾಧ್ಯಮ ವರದಿಗಳ ಪ್ರಕಾರ ಆತ ಗಡಿದಾಟುವಾಗ ಆತನ ಬಳಿ ಇದ್ದ ಒಂದೇ ದಾಖಲೆ UNHCR ನಿರಾಶ್ರಿತರ ಕಾರ್ಡ್, ಇದನ್ನು ಭಾರತವೇ ನಿರಾಶ್ರಿತರನ್ನು ಗುರುತಿಸಲು ನೀಡುತ್ತದೆ. ಗಡಿಯಲ್ಲಿ ಸಂಘರ್ಷಗಳು ಇದ್ದರೂ ಸಹ ಸ್ಥಳೀಯವಾಗಿ ಇಮಿಗ್ರೇಷನ್ ತಪಾಸಣೆ ಮಾಡಿಲ್ಲ ಎಂಬ ಬಗ್ಗೆ ಇದು ಪ್ರಶ್ನೆಯನ್ನು ಎತ್ತುವಂತೆ ಮಾಡಿದೆ.
ಈ ಸಂಶೋಧನೆಗಳು ಹಲವು ಕಠಿಣ ಪ್ರಶ್ನೆಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಕೇಳಿವೆ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಹೊರಗಿನವರಿಗೆ ಬೆಂಬಲ ನೀಡುತ್ತಿದೇಯೇ?, ರೋಹಿಂಗ್ಯಾ ವಲಸಿಗರಿಗೆ ವಸತಿ ನೀಡುವವರ ಪರವಾಗಿ ಕಾಂಗ್ರೆಸ್ ಏಕಿದೆ?, ಪಕ್ಷ ರೋಹಿಂಗ್ಯಾಗಳನ್ನು ವೋಟ್‌ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುತ್ತಿದೆಯೇ?, ಗೆಲುವಿನಲ್ಲಿ ರೋಹಿಂಗ್ಯಾಗಳ ಪಾತ್ರವಿದೆ ಎಂದು ಪಕ್ಷ ಸ್ಪಷ್ಟವಾಗಿ ಒಪ್ಪುತ್ತದೆಯೇ?.
ಎಲ್ಲಿಯ ತನಕ ಕಾಂಗ್ರೆಸ್‌ನ ಈ ಕೆಟ್ಟ ರಾಜಕೀಯ, ಮೌನ ಬೆಂಬಲ ಮುಂದುವರೆಯುತ್ತದೆ ಎಂದು ನಾವು ಕಾದು ನೋಡಬೇಕಿದೆ.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ












Click it and Unblock the Notifications