ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಹಿಂಗ್ಯಾ ವಲಸಿಗರನ್ನು ನಾವು ಒಪ್ಪಿಕೊಳ್ಳುವುದಿಲ್ಲ: ಬಿಜೆಪಿ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ರೋಹಿಂಗ್ಯಾ ಮುಸ್ಲಿಮರು ಭಾರತದ ಭದ್ರತೆಗೆ ಯಾವತ್ತಿದ್ದರೂ ಅಪಾಯವೇ. ಆದ್ದರಿಂದ ಅವರಿಗೆ ಆಶ್ರಯ ನೀಡುವುದಕ್ಕೆ ನಾವೆಂದಿಗೂ ಒಪ್ಪುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಎಲ್ಲಿಂದಲೋ ಬಂದವರು, ಎಲ್ಲೂ ಇಲ್ಲವಾದ ರೋಹಿಂಗ್ಯಾ ಮುಸ್ಲಿಮರ ಸುತ್ತಮುತ್ತ ಎಲ್ಲಿಂದಲೋ ಬಂದವರು, ಎಲ್ಲೂ ಇಲ್ಲವಾದ ರೋಹಿಂಗ್ಯಾ ಮುಸ್ಲಿಮರ ಸುತ್ತಮುತ್ತ

ಭಾರತ ಮತ್ತು ಬಾಂಗ್ಲಾದೇಶದಿಂದ ರೋಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಕರೆಸಿಕೊಳ್ಳಿ ಎಂದು ಅಂತಾರಾಷ್ತ್ರೀಯ ಮಟ್ಟದಲ್ಲಿ ಮಯನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ಅವರ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆಯಾದರೂ, ಮಯನ್ಮಾರ್ ಸರ್ಕಾರ ರೋಹಿಂಗ್ಯಾಗಳಿಗೆ ತನ್ನ ನೆಲದಲ್ಲಿ ಆಸರೆ ನೀಡಲು ಒಪ್ಪುತ್ತಿಲ್ಲ. ಆದರೆ ಈ ವಿಷಯದಲ್ಲಿ ಭಾರತದ ನಡೆಯಂತೂ ಸ್ಪಷ್ಟವಾಗಿದೆ. ರೋಹಿಂಗ್ಯಾ ನಿರಾಶ್ರಿತರು ಭಾರತದ ಭದ್ರತೆಗೆ ಅಪಾಯಕಾರಿಯಾಗಿರುವುದರಿಂದ ಅವರನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಬಿಜೆಪಿ ನಾಯಕ ಎಸ್ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

Rohingya refugees are security threat, India will not accept them: BJP

ರೋಹಿಂಗ್ಯಾ ಮುಸ್ಲಿಮರನ್ನು ವಾಪಸ್ ಕರೆಯಿಸಿಕೊಳ್ಳುವಂತೆ ಈಗಾಗಲೇ ಭಾರತವೂ ಮಯನ್ಮಾರ್ ಮೇಲೆ ಒತ್ತಡ ಹೇರುತ್ತಿದೆ. ಜಾಗತಿಕ ಮಟ್ಟಡಲ್ಲಿ ಶಾಂತಿಯ ಪ್ರತಿಪಾದಕಿ ಎಂಬ ಬಿರುದು ಹೋದಿ, ನೊಬೆಲ್ ಶಾಂತಿ ಪಾರಿತೋಷಕ ಪಡೆದಿದ್ದ ಆಂಗ್ ಸಾನ್ ಸೂಕಿ ವರ್ಚಸ್ಸಿಗೂ ರೋಹಿಂಗ್ಯಾಗಳ ಬಗೆಗಿನ ಮಯನ್ಮಾರ್ ನ ಅಮಾನವೀಯ ನಡೆ ಗಾಸಿಯನ್ನುಂಟುಮಾಡಿದೆ.

ಅಕ್ರಮ ಬಾಂಗ್ಲಾ ವಲಸಿಗರು, ರೋಹಿಂಗ್ಯಾ ಮುಸಲ್ಮಾನರನ್ನು ಗಡಿಪಾರು ಮಾಡಿ ಅಕ್ರಮ ಬಾಂಗ್ಲಾ ವಲಸಿಗರು, ರೋಹಿಂಗ್ಯಾ ಮುಸಲ್ಮಾನರನ್ನು ಗಡಿಪಾರು ಮಾಡಿ

Rohingya refugees are security threat, India will not accept them: BJP

ರೋಹಿಂಗ್ಯಾಗಳ ಹೆಸರು ಹೇಳಿಕೊಂಡು ಹಲವು ಭಯೋತ್ಪಾದಕರೂ ಭಾರತದ ಗಡಿಯೊಳಕ್ಕೆ ಆಗಮಿಸುವ ಸಾಧ್ಯತೆಗಳಿರುವುದರಿಂದ ಮತ್ತು ಅಂಥ ಉದಾಹರಣೆಗಳನ್ನೂ ಭಾರತ ಕಂಡಿರುವುದರಿಂದ ರೋಹಿಂಗ್ಯಾಗಳನ್ನು ಭಾರತದ ಗಡಿಯೊಳಕ್ಕೆ ಸೇರಿಸಿಕೊಳ್ಳುವುದಕ್ಕೆ ಮನಸ್ಸು ಮಾಡುತ್ತಿಲ್ಲ.

English summary
The Bharatiya Janata Party (BJP) on Wednesday said that India will not take any Rohingya refugees as they pose a security threat to the nation, adding that the pressure is mounting on Myanmar State Councillor Aung San Suu Kyi to take back refugees migrated to India and Bangladesh in large numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X