ಗುಜರಾತಿನಲ್ಲಿ ಭೀಕರ ಅಪಘಾತ: 13 ಮಂದಿ ದುರ್ಮರಣ
ಖೇಡಾ(ಗುಜರಾತ್), ನವೆಂಬರ್ 07: ಅಹಮದಾಬಾದ್-ಇಂದೋರ್ ಹೆದ್ದಾರಿಯಲ್ಲಿ ನಿನ್ನೆ(ನ.06) ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಅಸುನೀಗಿದ್ದು, 9 ಜನ ಗಾಯಗೊಂಡಿದ್ದಾರೆ.
ಗುಜರಾತಿನ ಖೇಡಾ ಜಿಲ್ಲಯ ಕತ್ಲಾಲ್ ಎಂಬಲ್ಲಿ, ಲಾರಿ ಮತ್ತು ಬಸ್ ನಡುವೆ ಅಪಘಾತ ನಡೆದಿದೆ. ಎರಡು ವಾಹನಗಳೂ ರಾತ್ರಿ ವೇಗವಾಗಿ ಸಂಚರಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ.

ಗಾಯಗೊಂಡ ಹಲವರು ಗಂಭೀರ ಸ್ಥಿತಿಯಲ್ಲಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications