ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯದ ಬಿಜೆಪಿ ಸೋಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಣವೇ!?

|
Google Oneindia Kannada News

ನವದೆಹಲಿ, ಅಕ್ಟೋಬರ್ 10: ಭಾರತದಲ್ಲಿ ಬಿಜೆಪಿ ಅಂದ್ರೆ ಪ್ರಧಾನಮಂತ್ರಿ ನರಂದ್ರ ಮೋದಿ.. ಪ್ರಧಾನಿ ನರೇಂದ್ರ ಮೋದಿ ಎಂದರೆ ಬಿಜೆಪಿ ಎನ್ನುವಂತಹ ರಾಜಕೀಯ ಚಿತ್ರಣ ಸೃಷ್ಟಿ ಆಗಿದೆ. ಮೋದಿಯಿಲ್ಲದೇ ಬಿಜೆಪಿಗೆ ಭವಿಷ್ಯವೇ ಇಲ್ಲ ಎನ್ನುವಂತೆ ಬಿಂಬಿಸಲಾಗುತ್ತಿದೆ. ಬಿಜೆಪಿಯ ಈ ಆಟಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಬ್ರೇಕ್ ಬೀಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯ ಏಕಚಕ್ರಾಧಿಪತ್ಯಕ್ಕೆ ಪ್ರಜೆಗಳಷ್ಟೇ ಅಲ್ಲದೇ ಸ್ವತಃ ಬಿಜೆಪಿ ನಾಯಕರೇ ರೋಸಿ ಹೋಗಿದ್ದಾರೆ. ಕೇಂದ್ರದ ಲೋಕಸಭೆಯಲ್ಲಿ ಕೇವಲ 2 ಸ್ಥಾನದಿಂದ 303 ಸ್ಥಾನದವರೆಗೂ ತಲುಪಿದ ಬಿಜೆಪಿಗೆ ಕೇಡುಗಾಲ ಶುರುವಾಗುತ್ತಿದೆ. 2024ರಿಂದ ಬಿಜೆಪಿಯ ಭವಿಷ್ಯವಿಲ್ಲ ಉಲ್ಟಾ ಹೊಡೆಯುತ್ತೆ ಎಂದು ಹೇಳಲಾಗುತ್ತಿದೆ.

ಭಾರತ್‌ ಜೋಡೋಗೆ ಬಿಜೆಪಿ ಪ್ರತಿತಂತ್ರ; 7 ಬೃಹತ್ ಸಮಾವೇಶ!ಭಾರತ್‌ ಜೋಡೋಗೆ ಬಿಜೆಪಿ ಪ್ರತಿತಂತ್ರ; 7 ಬೃಹತ್ ಸಮಾವೇಶ!

ಭಾರತದಲ್ಲಿ ಲೋಕಸಭೆ ಚುನಾವಣೆಗೆ ಇನ್ನೂ ಕೆಲವೇ ತಿಂಗಳು ಬಾಕಿ ಇರುವಂತೆ ಬಿಜೆಪಿಯೇ ಬೆಚ್ಚಿ ಬೀಳುವಂತಹ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ 2 ಸ್ಥಾನದಿಂದ ಶುರುವಾದ ಬಿಜೆಪಿಯ ವಿಜಯ ಯಾತ್ರೆ ಇಂದು 303ಕ್ಕೆ ಬಂತು ನಿಂತಿದೆ. ಇಲ್ಲಿಂದ ಮತ್ತೆ ಹಿಮ್ಮುಖವಾಗಿ ಬಿಜೆಪಿಯು ಸೋಲಿನ ಕಡೆಗೆ ಹೊರಡುತ್ತದೆ ಎಂಬ ಭವಿಷ್ಯವನ್ನು ಹೇಳಲಾಗುತ್ತಿದೆ. ಬಿಜೆಪಿ ಭವಿಷ್ಯವನ್ನು ಬದಲಿಸುವಲ್ಲಿ ಪ್ರಧಾನಿ ಮೋದಿ ಕಾರ್ಯವೈಖರಿ ಹೇಗೆ ಪ್ರಮುಖ ಪಾತ್ರ ವಹಿಸುತ್ತಿದೆ?, ಬಿಜೆಪಿಗೆ ಕೇಡುಗಾಲ ಶುರುವಾಗುತ್ತೆ ಎಂದು ಹೇಳುತ್ತಿರುವುದು ಏಕೆ?, ರಾಜಕೀಯ ವಿಮರ್ಶಕರು ಹಾಗೂ ಪ್ರತಿಪಕ್ಷಗಳ ಮಾತಿನಲ್ಲಿ ಬಿಜೆಪಿಯ ಮುಂದಿನ ಪರಿಸ್ಥಿತಿ ಏನು? ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಇಂಥದೊಂದು ಚರ್ಚೆ ಹುಟ್ಟಿಕೊಳ್ಳುವುದಕ್ಕೆ ಕಾರಣವೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

 ಬಿಜೆಪಿಗೆ ಕೇಡುಗಾಲ ಎಂದು ಪ್ರತಿಪಾದಿಸಿದ ಆರ್‌ಜೆಡಿ

ಬಿಜೆಪಿಗೆ ಕೇಡುಗಾಲ ಎಂದು ಪ್ರತಿಪಾದಿಸಿದ ಆರ್‌ಜೆಡಿ

ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಪಕ್ಷವು ಈ ರೀತಿಯ ಪ್ರತಿಪಾದನೆ ಮಾಡಿದೆ. ದೇಶದಲ್ಲಿ ಬಿಜೆಪಿಯು ಮತ್ತೊಮ್ಮೆ ಹಿಮ್ಮುಖವಾಗಿ ಸಾಗಲಿದೆ ಎಂದು ಆರ್‌ಜೆಡಿ ಹೇಳಿದೆ. ಇದರ ಮಧ್ಯೆ ಆರ್‌ಜೆಡಿ ಪಕ್ಷದಲ್ಲೇ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸಹ ಚರ್ಚೆಗೆ ಗ್ರಾಸವಾಗಿವೆ.

ಆರ್‌ಜೆಡಿಯ ಬಿಹಾರ ಘಟಕದ ಮುಖ್ಯಸ್ಥ ಜಗದಾನಂದ್ ಸಿಂಗ್ ಪುತ್ರ ಸುಧಾಕರ್ ಸಿಂಗ್ ಅವರಿಗೆ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲ. ಅವರ ರಾಜೀನಾಮೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಆರ್‌ಜೆಡಿ ವಿರುದ್ಧ ಮುನಿಸಿಕೊಂಡಿರುವ ಜಗದಾನಂದ್ ಸಿಂಗ್, ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಗೈರುಹಾಜರಾಗಿದ್ದರು. ಇದರಿಂದ ರಾಜ್ಯದಲ್ಲಿ ಪಕ್ಷದ ಸಂಘಟನೆಯಲ್ಲಿ ಬದಲಾವಣೆಗಳ ಚರ್ಚೆಯನ್ನು ಹೆಚ್ಚಿಸಿದ್ದಾರೆ.

ತಂದೆ ಗೈರು ಹಾಜರಾಗಿರುವ ಬಗ್ಗೆ ಪುತ್ರನ ಮೌನ

ತಂದೆ ಗೈರು ಹಾಜರಾಗಿರುವ ಬಗ್ಗೆ ಪುತ್ರನ ಮೌನ

ಜಗದಾನಂದ್ ಸಿಂಗ್ ಗೈರು ಹಾಜರಿಯ ಬಗ್ಗೆ ಸಭೆಗೆ ಹಾಜರಾಗಿದ್ದ ಸುಧಾಕರ್ ಸಿಂಗ್ ಮೌನವಾಗಿದ್ದರು. ಈ ಸಭೆಯಿಂದ ತಂದೆ ಏಕೆ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಆದರೆ ಜಗದಾನಂದ್ ಸಿಂಗ್ ಅನುಪಸ್ಥಿತಿಯ ಕುರಿತು ಕೇಳಲಾದ ಪ್ರಶ್ನೆಗೆ, ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಮನೋಜ್ ಝಾ ಪ್ರತಿಕ್ರಿಯೆ ನೀಡಿದ್ದು, ಅವರು ಪಕ್ಷದ ಉನ್ನತ ನಾಯಕತ್ವದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಭಾನುವಾರದ ಒಂದು ದಿನ ಬರಲಿಲ್ಲ ಎಂಬುದು ಇಷ್ಟು ದಿನ ಅವರು ಉಪಸ್ಥಿತಿಯಲ್ಲೇ ಸಭೆ ನಡೆದಿದೆ ಎಂಬ ಸತ್ಯವನ್ನು ಸುಳ್ಳಾಗಿಸುವುದಕ್ಕೆ ಸಾಧ್ಯವಿಲ್ಲ. ಕೆಲವು ಕಾರಣಗಳಿಂದ ಅವರು ಬಂದಿಲ್ಲ. ಜಗದಾನಂದ್ ಸಿಂಗ್ ನಮ್ಮೊಂದಿಗಿದ್ದರು, ನಮ್ಮೊಂದಿಗಿದ್ದಾರೆ ಮತ್ತು ನಮ್ಮೊಂದಿಗೆ ಇರುತ್ತಾರೆ ಎಂದು ನಾನು ನಿಮಗೆ ಬರೆದು ಕೊಡಬಲ್ಲೆ," ಎಂದು ಝಾ ಹೇಳಿದರು.

ತೇಜ್ ಪ್ರತಾಪ್ ಯಾದವ್ ಅಸಮಾಧಾನ

ತೇಜ್ ಪ್ರತಾಪ್ ಯಾದವ್ ಅಸಮಾಧಾನ

ಆರ್‌ಜೆಡಿ ಪಕ್ಷದ ನಾಯಕ ಶ್ಯಾಮ್ ರಜಾಕ್ ತಮ್ಮ ಸಿಬ್ಬಂದಿಯನ್ನು ನಿಂದಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ಸಚಿವ ಹಾಗೂ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಸಭಯಿಂದ ಎದ್ದು ಹೊರ ನಡೆದರು. ಲಾಲೂ ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಮತ್ತು ಪಕ್ಷದ ಹಿರಿಯ ನಾಯಕ ಶರದ್ ಯಾದವ್ ಭಾಷಣ ಮಾಡಿದ ಸಭೆಯಲ್ಲಿ ಮೂರು ನಿರ್ಣಯಗಳನ್ನು ಮಂಡಿಸಲಾಗಿದ್ದು, ಅದರ ಬಗ್ಗೆ ಚರ್ಚಿಸಲಾಯಿತು.

ಪ್ರಮುಖವಾಗಿ ಮೂರು ನಿರ್ಣಯ ಮಂಡಿಸಿದ ಆರ್‌ಜೆಡಿ

ಪ್ರಮುಖವಾಗಿ ಮೂರು ನಿರ್ಣಯ ಮಂಡಿಸಿದ ಆರ್‌ಜೆಡಿ

ದೇಶದ ಆರ್ಥಿಕತೆಯು ಪಾತಾಳಕ್ಕೆ ಕುಸಿಯುತ್ತಿರುವ ಸಂದರ್ಭದಲ್ಲಿ ವಿದೇಶಾಂಗ ನೀತಿ ಮತ್ತು ಆರ್ಥಿಕತೆಗೆ ಸಂಬಂಧಿಸಿದಂತೆ ಮಂಡಿಸಿರುವ ಮೂರು ನಿರ್ಣಯಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ," ಎಂದು ಝಾ ಹೇಳಿದರು. ಲಾಲು ಪ್ರಸಾದ್, ತೇಜಸ್ವಿ ಯಾದವ್ ಮತ್ತು ಶರದ್ ಯಾದವ್ ಭಾಷಣಗಳ ಸಾರವೇ ಗರಿಷ್ಠ ನಿರುದ್ಯೋಗವಾಗಿತ್ತು. ಈ ಬಗ್ಗೆ "ಸರ್ಕಾರದ ಬಳಿ ಯಾವುದೇ ನೀಲನಕ್ಷೆ ಇಲ್ಲ, ನೀವು ನಿರುದ್ಯೋಗದ ಬಗ್ಗೆ ಮಾತನಾಡಿದರೆ, ಅವರು ಬುಲ್ಡೋಜರ್ ಮತ್ತು ಹಿಜಾಬ್ ಬಗ್ಗೆ ಮಾತನಾಡುತ್ತಾರೆ. ಎಲ್ಲಿ ಕೋಮು ಸೌಹಾರ್ದತೆ ಬಲಪಡಿಸುವ ಇಚ್ಛೆ ಇರಬೇಕೋ ಅಲ್ಲಿ ಬಿಜೆಪಿಯವರು ಹಿಂದೂ-ಮುಸ್ಲಿಂ ಎಂದು ಮಾಡುತ್ತಿದ್ದಾರೆ. ದೇಶಕ್ಕೆ 75ನೇ ವರ್ಷದಲ್ಲಿ ಹೊಸ ದಿಕ್ಕೊಂದು ಅಗತ್ಯವಿದೆ," ಎಂದು ಝಾ ಹೇಳಿದರು.

ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಆರ್‌ಜೆಡಿ

ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಆರ್‌ಜೆಡಿ

ಎಲ್ಲಾ ಭಿನ್ನಾಭಿಪ್ರಾಯವನ್ನು ಬಿಟ್ಟು ಅಹಂಕಾರವನ್ನು ಬದಿಗಿಟ್ಟು ಒಗ್ಗಟ್ಟಿನ ಮಂತ್ರ ಜಪಿಸಬೇಕಿದೆ ಎಂದು ಆರ್‌ಜೆಡಿ ಹೇಳಿತು. ಪ್ರತಿಪಕ್ಷಗಳೆಲ್ಲ ಒಟ್ಟಾಗಿ ಕುಳಿತುಕೊಳ್ಳಬೇಕಾಗಿದ್ದು, ನಿರುದ್ಯೋಗ, ಹಣದುಬ್ಬರ, ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕಿದೆ. ಆ ಮೂಲಕ 75 ವರ್ಷಗಳ ನಂತರ ಸ್ವಾತಂತ್ರ್ಯ ಹೋರಾಟಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಬಿಹಾರದಿಂದಲೇ ಅಗತ್ಯವಿರುವ ಬದಲಾವಣೆ ಪ್ರಾರಂಭವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ವಿರೋಧ ಪಕ್ಷಗಳು ಒಟ್ಟಿಗೆ ಕುಳಿತಿವೆ. ನಾವು ಒಟ್ಟಿಗೆ ಕುಳಿತಾಗ, ಉತ್ತಮ ಪರ್ಯಾಯ ಮಾರ್ಗವು ಸಿಗುತ್ತದೆ. ಕಳೆದ ಎಂಟು ವರ್ಷಗಳಲ್ಲಿ ನಮಗೆ ಪ್ರಿಯವಾದ ಎಲ್ಲವನ್ನೂ ನಾಶಪಡಿಸಿದ ಸ್ವ-ಕೇಂದ್ರಿತ ರಾಜಕೀಯದ ಫಲಿತಾಂಶಗಳನ್ನು ನಾವು ನೋಡಿದ್ದೇವೆ. ," ಎಂದು ಝಾ ದೂಷಿಸಿದ್ದಾರೆ.

ಯಾರ ಹೆಗಲಿಗೆ 2024ರ ಪ್ರತಿಪಕ್ಷಗಳ ನಾಯಕತ್ವ?

ಯಾರ ಹೆಗಲಿಗೆ 2024ರ ಪ್ರತಿಪಕ್ಷಗಳ ನಾಯಕತ್ವ?

ಲಾಲೂ ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಮತ್ತು ಶರದ್ ಯಾದವ್ ಎಲ್ಲರೂ ಒಟ್ಟಿಗೆ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಆ ಮೂಲಕ 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯನ್ನು ಎದುರಿಸಲು ಹಾಗೂ ಪ್ರತಿಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳುವುದು ಯಾರು ಎಂಬುದರ ಬಗ್ಗೆ ಚಿಂತಿಸಲಾಗುವುದು. ಏಕೆಂದರೆ ಈ ಹಂತದಲ್ಲಿ ಸಾಮೂಹಿಕ ಅಭಿಪ್ರಾಯವು ಬಹುಮುಖ್ಯವಾಗಿರುತ್ತದೆ ಎಂದು ಝಾ ಹೇಳಿದರು.

ಪ್ರಜಾಪ್ರಭುತ್ವ ಎಂದರೆ ಸಾಮೂಹಿಕತೆ ಆಗಿರುತ್ತದೆ. ಸಾಮೂಹಿಕತೆ ಇಲ್ಲದೇ ಪ್ರಜಾಪ್ರಭುತ್ವವೇ ಇಲ್ಲ. ಒಂದು ವೇಳೆ ಸಾಮೂಹಿಕತೆ ಇಲ್ಲದಿದ್ದರೆ ಅದರಿಂದ ನರೇಂದ್ರ ಮೋದಿಯವರು ಹುಟ್ಟಿಕೊಳ್ಳುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪರ್ಯಾಯವಾಗಿ ಮತ್ತೊಬ್ಬ ನರೇಂದ್ರ ಮೋದಿ ಹುಟ್ಟಿಕೊಳ್ಳುತ್ತಾರೆಯೇ ಅಥವಾ ಸಾಮೂಹಿಕತೆಗೆ ಜಯ ಸಿಗುತ್ತದೆಯೇ ಎಂಬುದನ್ನು ಭವಿಷ್ಯದಲ್ಲಿ ನೋಡಬೇಕಿದೆ," ಎಂದು ಝಾ ಹೇಳಿದ್ದಾರೆ.

2024ರಿಂದ ಬಿಜೆಪಿ ಹಿಮ್ಮುಖವಾಗಿ ಸಾಗುವುದು ಏಕೆ ಮತ್ತು ಹೇಗೆ?

2024ರಿಂದ ಬಿಜೆಪಿ ಹಿಮ್ಮುಖವಾಗಿ ಸಾಗುವುದು ಏಕೆ ಮತ್ತು ಹೇಗೆ?

ರಾಜಕೀಯದಲ್ಲಿ ಪರ್ಯಾಯ ನಾಯಕತ್ವವು ಹೇಗೆ ಮುನ್ನೆಲೆಗೆ ಬರುತ್ತದೆ ಎಂದು ಪ್ರಶ್ನೆ ಮಾಡುವವರು 2004ರ ಆ ದಿನಗಳನ್ನು ನೆನಪಿಸಿಕೊಳ್ಳಿರಿ. ಅಂದು 2 ಸ್ಥಾನದಿಂದ ಆರಂಭವಾಗಿದ್ದ ಬಿಜೆಪಿಯ ಗೆಲುವಿನ ದಾರಿಯು ಇಂದು 303ರವರೆಗೂ ಬಂದು ನಿಂತಿದೆ. ಅದೇ ರೀತಿ 2024 ರಿಂದ ಅದೇ ಬಿಜೆಪಿಯು ಹಿಮ್ಮುಖವಾಗಿ ಹೋಗುವುದಕ್ಕೆ ಶುರುವಿಟ್ಟುಕೊಳ್ಳುತ್ತದೆ. ಪ್ರತಿಪಕ್ಷಗಳ ಒಟ್ಟುಗೂಡುವಿಕೆಯಿಂದ ಮಾತ್ರ ಇದು ಸಾಧ್ಯವಾಗುತ್ತದೆ.

ಲಾಲೂ ಪ್ರಸಾದ್ ಯಾದವ್ ಒಗ್ಗಟ್ಟಿನ ಸೂತ್ರ ಹೇಗಿದೆ?

ಲಾಲೂ ಪ್ರಸಾದ್ ಯಾದವ್ ಒಗ್ಗಟ್ಟಿನ ಸೂತ್ರ ಹೇಗಿದೆ?

ಆರ್‌ಜೆಡಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಲಾಲೂ ಪ್ರಸಾದ್ ಯಾದವ್ ಒಗ್ಗಟ್ಟಿನ ಮಂತ್ರ ಜಪಿಸಿದರು. ಈ ಬಗ್ಗೆ ಝಾ ವಿವರಿಸಿದರು. "ಸಾಮಾಜಿಕ ನ್ಯಾಯದ ಇತಿಹಾಸ ಹಾಗೂ ಭವಿಷ್ಯದಲ್ಲಿ ಆರ್‌ಎಸ್‌ಎಸ್-ಬಿಜೆಪಿಗಳಿಂದ ಆಗುವ ಅಪಾಯದ ಕುರಿತು ಲಾಲೂ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯು 20 ಜನರನ್ನು ಒಗ್ಗೂಡಿಸಬೇಕು. ಆ ಮೂಲಕ ನೈಜ ಸಮಸ್ಯೆಗಳನ್ನು ಹಳ್ಳಿಗಳಿಗೆ ತಲುಪಿಸುವ ಕೆಲಸ ಆಗಬೇಕು," ಎಂದು ಲಾಲು ಪ್ರಸಾದ್ ಹೇಳಿದರು.

ರೈಲ್ವೆ ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ ವಿರುದ್ಧ ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್ ಅನ್ನು "ಬಿಜೆಪಿಯ ಚಾರ್ಜ್ ಶೀಟ್," ಎಂದು ಝಾ ಹೇಳಿದರು. "ನಾವು ಅವರು ಹೇಳಿದಂತೆ ಕೆಲಸ ಮಾಡುವುದಕ್ಕೆ ಆಗುವುದಿಲ್ಲ, ಆದ್ದರಿಂದಲೇ ಹಳೆಯ ಪ್ರಕರಣವನ್ನು ಮತ್ತೆ ತೆರೆಯಲಾಗುತ್ತಿದೆ. ಈ ಪ್ರಕರಣಗಳಲ್ಲಿ ನೀವು ನಿಮ್ಮದೇ ಪಾತ್ರಗಳನ್ನು ರಚಿಸುತ್ತೀರಿ, ನೀವು ಚಾರ್ಜ್ ಶೀಟ್ ಸಲ್ಲಿಸುತ್ತೀರಿ. ನೀವು ಈ ಸಂಸ್ಥೆಗಳ ಸ್ವರೂಪವನ್ನು ನಾಶಪಡಿಸಿದ್ದೀರಿ," ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

English summary
RJD Claimed BJP's journey from 2 to 303 seats will start reversing from 2024. Know More. 2 ರಿಂದ 303 ಸ್ಥಾನಗಳಲ್ಲಿ ಬಿಜೆಪಿಯ ಪಯಣ 2024 ರಿಂದ ಹಿಮ್ಮುಖವಾಗಲಿದೆ ಎಂದು ಆರ್‌ಜೆಡಿ ಹೇಳಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X