ಸೋಲಿನಿಂದ ಮನನೊಂದು ಕುಸ್ತಿಪಟು ರಿತಿಕಾ ಫೋಗಟ್ ಆತ್ಮಹತ್ಯೆ
ನವದೆಹಲಿ, ಮಾರ್ಚ್ 18: ಭಾರತೀಯ ಕುಸ್ತಿ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಬುಧವಾರ ಭರತ್‌ಪುರದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಸೋತ ಬೆನ್ನಲ್ಲೇ ರಿತಿಕಾ ಫೋಗಟ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸಿದ್ಧ ಫೋಗಾಟ್ ಕುಟುಂಬದ ರಿತಿಕಾ ಫೋಗಟ್ ಅವರು, ಬಬಿತಾ ಫೋಗಟ್ ಸೋದರ ಸಂಬಂಧಿಯ ಸಹೋದರಿ ಆಗಿದ್ದಾರೆ. ರಾಜ್ಯಮಟ್ಟದ ಉಪ ಜೂನಿಯರ್, ಕಿರಿಯ ಮಹಿಳೆಯರು ಮತ್ತು ಪುರುಷರ ಕುಸ್ತಿ ಪಂದ್ಯಾವಳಿಗಳಲ್ಲಿ ರಿತಿಕಾ ಫೋಗಟ್ ಆಡುತ್ತಿದ್ದರು.
ಮಾರ್ಚ್ 14 ರಂದು ಆಡಿದ ಫೈನಲ್ ಪಂದ್ಯವನ್ನು ರಿತಿಕಾ ಫೋಗಟ್ 1 ಪಾಯಿಂಟ್‌ನಿಂದ ಕಳೆದುಕೊಂಡರು. ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ರಿತಿಕಾ ಫೋಗಟ್ ಅವರು, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾವೀರ್ ಸಿಂಗ್ ಫೋಗಟ್ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದರು. ಬುಧವಾರ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಮಹಾವೀರ್ ಸಿಂಗ್ ಫೋಗಟ್ ಕೂಡ ಹಾಜರಾಗಿದ್ದರು ಎಂದು ವರದಿಯಾಗಿದೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]












Click it and Unblock the Notifications